ಸಾಯಿ ನಗರ ನಾಮಫಲಕ ಅನಾವರಣ

0
18
loading...

ಬೆಳಗಾವಿ 25-ನಗರ ಉಪಬಡಾವಣೆಯ ವಡಗಾವಿ ವ್ಯಾಪ್ತಿಯಲ್ಲಿ ನುತನವಾಗಿ ಸಾಯಿನಗರ ನೇಕಾರ ಕಾಲನಿ ಅಸ್ತಿತ್ವಕ್ಕೆ ಬಂದಿದೆ. ಸೋಮವಾರ ಉದ್ಯಮಿ ಶೀತಲ ಪಾಟೀಲ ಹಾಗೂ ನಗರಸೇವಕ ಸಂಜಯ ಸವಾಸೇರಿ ಅವರು ನೂತನ ಸಾಯಿ ನಗರ ನಾಮಫಲಕವನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ನಗರವಾಸಿಗಳಿಗೆ ಅನುಕೂಲವಾಗುವಂತೆ ನೂತನ ಕೊಳವೆಬಾವಿಯನ್ನು ಹಾಗೂ ದಾರೀದೀಪ ವ್ಯವಸ್ಥೆಗಳಿಗೆ ಆಗಮಿಸಿದ್ದ ಗಣ್ಯರು ಚಾಲನೆ ನೀಡಿದರು.

ಕಳೆದ ಐದಾರು ವರ್ಷಗಳಿಂದ ಇಲ್ಲಿನ ರಹವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದರು. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಇಲ್ಲಿನ ವಾರ್ಡನ ನಗರಸೇವಕ ಸಂಜಯ ಸವಾಸೇರಿ ಅವರ ವಿಶೇಷ ಆಸಕ್ತಿಯಿಂದ ರಹವಾಸಿಗಳು ಅಗತ್ಯ ಸೌಕರ್ಯ ಪಡೆಯುವಂತಾಗಿದೆ.

ಶೀಘ್ರದಲ್ಲೇ ಧಾಮಣೆ ರಸ್ತೆಯ ಸಾಯಿ ನಗರದ ರಸ್ತೆಗಳನ್ನು ಅಭಿವೃದ್ದಿ ಪಡಿಸುವುದಾಗಿ ನಗರಸೇವಕ ಸವಾಸೇರಿ ತಿಳಿಸಿದರು. ಅಲ್ಲದೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.

ಶೀತಲ ಪಾಟೀಲ ಮಾತನಾಡಿ ಶಾಸಕರಿಗೆ ಸಾಯಿ ನಗರದ ಸರ್ವಾಂಗೀಣ ಅಭಿವೃದ್ದಿಗೆ ತಾವು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ರಹವಾಸಿಗಳ ಪರವಾಗಿ ಶೀತಲ ಪಾಟೀಲ ಹಾಗೂ ಸವಾಸೇರಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಾಯಿ ನಗರದ ಹಿರಿಯರಾದ ಈಶ್ವರ ಸಿಂಧೂರ, ನಾರಾಯಣಪ್ಪ ಶಿರಸಲಮರದ, ಅಶೋಕ ಹೊಸಮನಿ, ಚಿದಾನಂದ ಪತ್ತಾರ, ನಾರಾಯಣ ಬುಚಡಿ, ಮುಸಳಿ, ರಾಮಣ್ಣಾ ಭಂಡಾರಿ, ಬಸವರಾಜ ಶಿರಸಲಮರದ, ಸತೀಶ ಪತ್ತಾರ ಮೊದಲಾದವರು ಹಾಜರಿದ್ದರು. ನಾಗರಿಕರು ತಮ್ಮ ವಿವಿಧ ಬೇಡಿಕೆ ಹಾಗೂ ವ್ಯವಸ್ಥೆಗಳ ಕುರಿತು ಅತಿಥಿಗಳ ಗಮನ ಸೆಳೆದರು.

 

loading...

LEAVE A REPLY

Please enter your comment!
Please enter your name here