ಸುದ್ದಿಗೊಂದು ಚುಚ್ಚು ಮಾತು

0
9
loading...

ದೇಶದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ  ಕಳವಳಗೊಂಡಿರುವ  ಸರ್ವೋಚ್ಛ ನ್ಯಾಯಾಲಯ ಹುಲಿ ಸಂರಕ್ಷಣೆಯ  ಅರಣ್ಯ ಪ್ರದೇಶಗಳಲ್ಲಿ  ಪ್ರವಾಸಿಕರು ಹೋಗದಂತೆ  ಆದೇಶ ನೀಡಿದೆ.                                                                               -ಸುದ್ದಿ

ಸರಕಾರ ಮಾಡಬೇಕಾದ  ಕಾರ್ಯವನ್ನು ನ್ಯಾಯಾಲಯ  ಮಾಡಬೇಕಾದ ಪರಿಸ್ಥಿತಿ ಈಗ  ದೇಶದಲ್ಲಿ ಉಂಟಾಗಿದೆ.

ಜಾಮೀನಿಗಾಗಿ ಲಂಚ  ನೀಡಿದ  ಪ್ರಕರಣದ ಹಿನ್ನೆಲೆಯಲ್ಲಿ ಶಾಸಕರಾದ ಸೋಮಶೇಖರ ರೆಡ್ಡಿ  ಸುರೇಶ ಬಾಬು  ಅವರಿಗೆ  ಎಸಿಬಿ ಅಧಿಕಾರಿಗಳು  ನೋಟೀಸ ಜಾರಿ ಮಾಡಿದ್ದಾರೆ.                       -ಸುದ್ದಿ

ಈ ಲಂಚ ಪ್ರಕರಣದಲ್ಲ್ಲಿ  ನಮ್ಮ  ಕೈವಾಡವೇ ಇಲ್ಲ ಎಂದು ಹೇಳುತ್ತಿದ್ದ ಈ ಶಾಸಕರ ಬಣ್ಣ ಈಗ ಬಯಲಾಗಿದೆ.

ಹಿಂಡಲಗಾ ಜೈಲಿನಲ್ಲಿರುವ   ಇಬ್ಬರು ಖೈದಿಗಳಿಗೆ  ಹಂದಿ ಜ್ವರ            ಉಂಟಾಗಿದೆ.                                   -ಸುದ್ದಿ

ಯಾರಿಗೂ ಹೆದರದೆ ಜೈಲು  ಸೇರಿರುವ ಇವರನ್ನು ಹೆದರಿಸಲು ಅವರಿಗೆ  ಹಂದಿ ಜ್ವರ  ಬಂದಿರಬಹುದು.

ನ್ಯಾಯಾಲಯದ ಸೂಚನೆಯನ್ನು ಪರಿಗಣಿಸಿ ಲೋಕಾಯುಕ್ತರ ನೇಮಕ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಜಗದೀಶ ಶೆಟ್ಟರ  ಹೇಳಿದ್ದಾರೆ.                                              ಸುದ್ದಿ

ನ್ಯಾಯಾಲಯ ಚುಚ್ಚಿದ ಮೇಲೆ ಮುಖ್ಯ ಮಂತ್ರಿಗಳು ಎಚ್ಚರ ಗೊಂಡು ಈ ರೀತಿಯ ಹೇಳಿಕೆಯನ್ನು  ನೀಡಿರಬಹುದು.

ತರುಣ ಭಾರತ ಪತ್ರಿಕೆಯ ಸಂಪಾದಕ ಕಿರಣ ಠಾಕೂರ ಅವರಿಗೆ ವಾಗ್ದಂಡನೆ ವಿಧಿಸಲು ವಿಧಾನ ಸಭೆ ನಿರ್ಧರಿಸಿದೆ.          -ಸುದ್ದಿ

ನನ್ನ ಭಾಯಿ ಮುಚ್ಚಿಸಲು ಯಾರಿಗೂ ಆಗುವುದಿಲ್ಲ  ಎಂದು ಮೆರೆಯುತ್ತಿದ್ದ ಕಿರಣ ಠಾಕೂರ ಬಾಯಿ ಮುಚ್ಚಿಸಲು  ವಿಧಾನ ಸಭೆ ಈಗ ಮುಂದಾಗಿದೆ.

ರಾಷ್ಟ್ತ್ರಪತಿಗಳಿಗಾಗಿ ಆರು ಕೋಟಿ ರೂಪಾಯಿಯ ಬೆಂಜ್ ಕಾರ್ ಸಿದ್ದ ವಾಗಿ ನಿಂತಿದೆ.                               – ಸುದ್ದಿ

ಹೊಸ ರಾಷ್ಟ್ತ್ರಪತಿಗೆ ಹೊಸ ಕಾರು ಏರುವ ಅದೃಷ್ಟ  ಈಗ ಒದಗಿ ಬಂದಿದೆ.  

ಅಧಿಕಾರಿಗಳ ಆವಾಂತರದಿಂದ ಮರಣ ಹೊಂದಿರುವ ಬಾಲಕಿ ತನುಜಾ ಸಾವನ್ನು  ಗಂಭೀರವಾಗಿ ಪರಿಗಣಿಸಿರುವ ಸರಕಾರ ಕರ್ತವ್ಯ ಲೋಪ ಮಾಡಿದ ನೌಕರರನ್ನು ಅಮಾನತು ಮಾಡಲು ಮುಂದಾಗಿದೆ.                                             – ಸುದ್ದಿ

ಪ್ರಾಣ ಹೋದ ಮೇಲೆ ಸರಕಾರ ಈ ರೀತಿ  ಎಚ್ಚೆತ್ತುಕೊಂಡಿದ್ದರು. ಹೋದ ಪ್ರಾಣ ಮರಳಿ ಬರುವುದಿಲ್ಲ ಎಂಬುದನ್ನು ಆರಿತುಕೊಳ್ಳಬೇಕು.

ಪ್ರಶ್ನೌತ್ತರ ಸಮಯದಲ್ಲಿ ಪ್ರಶ್ನೆಗೆ ಉತ್ತರ ಹೇಳಬೇಕಾದ  ಸಚಿವರೇ ನಾಪತ್ತೆಯಾಗಿದ್ದ ಘಟನೆ ವಿಧಾನ ಸಭೆಯಲ್ಲಿ ಮಂಗಳವಾರ ನಡೆದಿದೆ.                                                                                                           -ಸುದ್ದಿ

ಇದು ಸರಕಾರದ ಕಾರ್ಯ ವೈಖರಿಗೆ ಒಂದು ಉತ್ತಮ ನಿದರ್ಶನ ವಾಗಿರುವುದನ್ನು ಕಾಣಬಹುದು.

 

loading...

LEAVE A REPLY

Please enter your comment!
Please enter your name here