ಅರಣ್ಯ ಅಧಿಕಾರಿಗಳಿಂದ ಹಂಡಿಬಡಗನಾಥ ಸ್ವಾಮೀಜಿ ಮೇಲಿನ ಹಲ್ಲೆ ಪ್ರಕರಣ ಖಾನಾಪೂರ ಬಂದ್ ಯಶಸ್ವಿ- ಕೇಸ್ ಹಿಂದಕ್ಕೆ ಪಡೆಯುವ ಭರವಸೆ

0
21
loading...

ಖಾನಾಪೂರ 27- ಹಂಡಿಬಡಗನಾಥ ಮಠದ ಮೇಲೆ ದಾಳಿ ಇಟ್ಟ ಅರಣ್ಯಾಧಿಕಾರಿಗಳು ಮಠದ ಸ್ವಾಮೀಜಿಗಳಾದ ಸಿದ್ಧನಾಥ ಸ್ವಾಮೀಜಿಯವರನ್ನು ಥಳಿಸಿದ್ದಲ್ಲದೆ, ಕಟ್ಟಿಗೆ ಸಾಗಾಟದ ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಸೋಮವಾರ ಹಂಡಿಬಡಗನಾಥ ಭಕ್ತ ಸಮೂಹ ಕರೆದಿದ್ದ ಖಾನಾಪೂರ ಬಂದ್ ಸಂಪೂರ್ಣ ಯಶಸ್ವಿ ಕಂಡಿದೆ.

ದೇಶದ ಎಲ್ಲೆಡೆಗಳಿಂದ ನಾಥ ಪಂಥದ 200 ಕ್ಕೂ ಹೆಚ್ಚು ಸ್ವಾಮೀಜಿಗಳು ಹಾಗೂ ಮಠದ ಸಾವಿರಾರು ಭಕ್ತರು ಸೋಮವಾರ ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ಹೊರಡಿಸಿ ಇಲ್ಲಿನ ತಹಶೀಲ್ದಾರ ಕಾರ್ಯಾಲಯದ ಎದುರು ಧರಣಿ ನಡೆಸಿ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಸ್ವಾಮೀಜಿಗಳ ಮೇಲೆ ದಾಖಲಿಸಲಾದ ಖೊಟ್ಟಿ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಹಂಡಿಬಡಗನಾಥ ಭಕ್ತ ಸಮೂಹ ಪ್ರತಿಭಟನೆಗಿಳಿದಿತ್ತು. ಇಡೀ ಖಾನಾಪೂರ ಸ್ವಯಂ ಪ್ರೇರಣೆಯಿಂದ ವ್ಯಾಪಾರ ವಹಿವಾಟು ನಿಲ್ಲಿಸಿ ಸ್ವಾಮೀಜಿಗಳಿಗೆ ಬೆಂಬಲ ವ್ಯಕ್ತಪಡಿಸಿತ್ತು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದ ಪ್ರತಿಭಟನಾಕಾರರು ಶಾಂತ ರೀತಿಯಿಂದ ಹೋರಾಟ ನಡೆಸಿದರು.

ಭಕ್ತರ ಒತ್ತಡಕ್ಕೆ ಮಣಿದ ಖಾನಾಪೂರ ತಹಶೀಲ್ದಾರರು ಹಂಡಿಬಡಗನಾಥ ಸಿದ್ಧನಾಥ ಸ್ವಾಮೀಜಿಯವರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಹಿಂದಕ್ಕೆ ಪಡೆಯುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಕ್ತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ಪಡೆದರು. ಅರಣ್ಯ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಎನ್ನುವ ಬೇಡಿಕೆ ಭಕ್ತರ ಮುಂದಿನ ಹೋರಾಟ ವಾಗಲಿದೆ ಎಂದು ಭಕ್ತ ಸಮೂಹ ಪತ್ರಿಕೆಗೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here