ಆರೋಗ್ಯದತ್ತ ಹೆಚ್ಚಿನ ಗಮನ ನೀಡಲು ಸಲಹೆ

0
24
loading...

ಬೆಳಗಾವಿ 12:  ನಾಗರಿಕರು ತಮ್ಮ ಆರೋಗ್ಯದತ್ತ ಹೆಚ್ಚಿನ ಗಮನ ನೀಡಬೇಕೆಂದು ಬೆಳಗಾವಿಯ ಖ್ಯಾಯ ನರ ರೋಗ ತಜ್ಞ ಡಾ. ಎಸ್.ಎಸ್. ಮಹಾಂತಶೆಟ್ಟಿ ಅವರು ಇಂದಿಲ್ಲಿ ಸಲಹೆ ನೀಡಿದರು.

ಬೆಳಗಾವಿಯ ಕಾಲೇಜು ರಸ್ತೆ ಗಾಂಧಿ ಭವನದ ಬಳಿವಿರುವ ವಿಜಯಾ ಹಾಸ್ಪಿಟಲ್ ವಿಜಯಾ  ಆರ್ಥೊ ಆ್ಯಂಡ ಟ್ರುಮಾ ಸೆಂಟರ್ನಲ್ಲ್ಲಿ  ಬೆನ್ನು ನೋವು ಮತ್ತು ನರ ದಕ್ಷತೆ ವಿಭಾಗದ 5 ನೇ ವಾರ್ಷಿಕೋತ್ಸವ ಹಾಗೂ ಕುತ್ತಿಗೆ ಮತ್ತು ಬೆನ್ನು ನೋವು ಉಚಿತ ಚಿಕಿತ್ಸಾ ಶಿಬಿರವನ್ನು  ಉದ್ಘಾಟಿಸಿ  ಅವರು ಮಾತನಾಡಿದರು.

ಸಾರ್ವಜನಿಕರು ತಮ್ಮ ಆರೋಗ್ಯದತ್ತ ಹೆಚ್ಚಿನ ಗಮನ ನೀಡಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಇತ್ತಿಚಿಗೆ ಹೊಸ ಸಂಶೋಧನೆಯಿಂದ ಹಾಗೂ ಆಧುನಿಕ  ತಂತ್ರಜ್ಞಾನದಿಂದ ಅನೇಕ ರೋಗಗಳನ್ನು ಗುಣ ಪಡಿಸಲಾಗುತ್ತಿದೆ.ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿದ್ದು, ಇದರಿಂದ ಮಾನವನಿಗೆ ತತಕ್ಷಣ ಹಾಗೂ  ಗುಣಮುಖವಾಗುವ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.

ಕೆಲ ವರ್ಷಗಳ ಹಿಂದೆ ರೋಗಗಳ ತಪಾಸಣೆಯ ಯಂತ್ರೌಪರಕಣಗಳು ಕೇವಲ ಮುಂಬೈ ಮತ್ತು ಬೆಂಗಳೂರು ಮಹಾನಗರಗಳಲ್ಲಿ ಮಾತ್ರ ಸಿಮೀತವಾಗಿದ್ದವು. ಸಿಟಿಸ್ಕ್ಯಾನ್ ದಂತಹ ಚಿಕಿತ್ಸೆಗಾಗಿ ಕೊಲ್ಲಾಪೂರ ಅಥವಾ ಹುಬ್ಬಳ್ಳಿ ನಗರಗಳನ್ನು ಬೆಳಗಾವಿ ಜನರು ಅವಲಂಬಿತರಾಗಿದ್ದರು. ಆದರೆ ಇದೀಗ ಬೆಳಗಾವಿಯಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿದ ಆಸ್ಪತ್ರೆಗಳಿದ್ದು, ಇಲ್ಲಿಯೇ ಎಲ್ಲ ತರಹದ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿಜಯ ಆಸ್ಪತ್ರೆ ಹಾಗೂ ವಿಜಯ ಆರ್ಥೊ  ಮತ್ತು ಟ್ರುಮಾ ಸೆಂಟರ್ ವತಿಯಿಂದ ಡಾ. ಎಸ್.ಎಸ್. ಮಹಾಂತಶೆಟ್ಟಿ ಹಾಗೂ ಜೆ.ಎನ್.ಎಂ.ಸಿ. ಮಹಾವಿದ್ಯಾಲಯ ಉಪ ಪ್ರಾಚಾರ್ಯ ಡಾ. ನಿರಂಜನಾ ಎಸ್.  ಮಹಾಂತಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿಜಯ ಆಸ್ಪತ್ರೆಯ ನಿರ್ದೆಶಕರಾದ ಡಾ.ಪ್ರಕಾಶ ಪಾಟೀಲ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ವೇದಿಕೆ ಮೇಲೆ ಡಾ. ಗೀತಾ ಪಾಟೀಲ, ಡಾ. ಎಂ.ಸಿ.ಹಾಲಪ್ಪನ್ನವರ, ಡಾ. ವಿಶ್ವನಾಥ.ಜಿ.ಯು. ಹಾಗೂ ಡಾ. ಕೆ.ಎಸ್. ಮಾನೆ ಮೊದಲಾದವರು ಉಪಸ್ಥಿತರಿದ್ದರು.

ನಿರ್ದೆಶಕ ಡಾ. ರವಿ ಪಾಟೀಲ ವಂದಿಸಿದರು.ಡಾ. ವಸೀಮಾ ಮುಲ್ಲಾ ಅವರು ಕಾರ್ಯಕ್ರಮ  ನಿರೂಪಿಸಿದರು.

 

loading...

LEAVE A REPLY

Please enter your comment!
Please enter your name here