ಉತ್ತಮ ಆಡಳಿತಕ್ಕೆ ಆದ್ಯತೆ

0
18
loading...

ಗೋಕಾಕ ಅ. 22 ;- ಉತ್ತಮ ಆಡಳಿತ, ಪಾರದರ್ಶಕತೆ ಸೇವೆಗೆ ಪ್ರಥಮ ಆಧ್ಯತೆ ನೀಡಲಾಗುವುದೆಂದು ಬಿಸಿಯೂಟ ಸಹಾಯಕ ನಿರ್ದೇಶಕರಾದ ಎಂ.ಡಿ. ಬೇಗ ಅಭಿಪ್ರಾಯಪಟ್ಟರು ತಾ.ಪಂ. ಕಚೇರಿಯಲ್ಲಿ ನೂತನವಾಗಿ ಮಧ್ಯಾಹ್ನ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ಕರ್ನಾಟಕ ರಕ್ಷಣಾ ವೇದಿಕೆಯ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

2004-05 ರಲ್ಲಿ ಎಸ್.ಎಂ. ಕೃಷ್ಣಾ ರ ನೇತೃತ್ವದ ಸರ್ಕಾರ ಪ್ರಾರಂಭಿಸಿದ ಈ ಬಿಸಿಯೂಟ ಯೋಜನೆಯ ಅತ್ಯಂತ ಉಪಯುಕ್ತವಾಗಿ ಹೊರಹೊಮ್ಮಿ ರಾಜ್ಯಾದ್ಯಂತ ಸಾವಿರಾರು ಬಡ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ತಾಲೂಕಿನ್ಯಾದ್ಯಂತ 457 ಪ್ರಾಥಮಿಕ, ಪ್ರೌಢ ಮತ್ತು ಸರಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿವೆ.

ಇದರಲ್ಲಿ ಕೆಲವೊಂದು ಲೋಪದೋಷಗಳು ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ಒಂದೊಂದಾಗಿ ಅವುಗಳನ್ನು ಸರಿಪಡಿಸಿ ಪಾರದರ್ಶಕ ಆಡಳಿತ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಹೇಳಿದರು.

ಈ ಸತ್ಕಾರ ಸಮಾರಂಭದಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಕಾರ್ಯದರ್ಶಿ ಸಾಧಿಕ್ ಹಲ್ಯಾಳ, ಅಬ್ಬಾಸ್ ದೇಸಾಯಿ, ಘೋರ್ಪಡೆ, ಕೃಷ್ಣಾ ಖಾನಪ್ಪನವರ, ಕಿರಣ ವಾಲಿ, ಮಂಜು ಪ್ರಭುನಟ್ಟಿ, ಪ್ರದೀಪ ನಾಗನೂರ, ಮಯೂರ ಗುದಗಗೋಳ ಸೇರಿದಂತೆ ಇನ್ನು ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

 

 

loading...

LEAVE A REPLY

Please enter your comment!
Please enter your name here