ಕ್ರೀಡೆ- ಸಂಸ್ಕ್ಕತಿಕ ಕಾರ್ಯಕ್ರಮ ಉದ್ಘಾಟನೆ

0
29
loading...

ಖಾನಾಪೂರ 19- ಪಟ್ಟಣದ ಕೆಎಲ್ಇ ಸಂಸ್ಥೆಯ ಎಂ.ಎಸ್.ಹೊಸಮನಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಸಕ್ತ ವರ್ಷದ ಕ್ರೀಡಾ ಮತ್ತು ಸಾಂಸ್ಕ್ಕತಿಕ ಕಾರ್ಯಕ್ರಮ ಇದೇ 16 ರಂದು ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವ್ಹಿ.ಸಿ.ಹಂಜಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಸೋತಾಗ ಅದರಿಂದ ಅಧೈರ್ಯ ಪಡಬಾರದು. ಆ ಸೋಲು ಮುಂದಿನ ಗೆಲುವಿನ ಮೆಟ್ಟಿಲೆಂದು ಭಾವಿಸಿ ಮುನ್ನಡೆದರೆ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯವೆಂದು ಹೇಳಿದರು.

ಅಧ್ಯಕ್ಷತೆಯನ್ನು ಕಾಲೇಜಿ ನ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ವಿ. ಹಂಜಿ ವಹಿಸಿ, ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಕಾಲೇಜಿನ  ಪ್ರಾಚಾರ್ಯ ಬಿ.ಐ. ನೋಗಿನಹಾಳ ಸ್ವಾಗತ ಭಾಷಣ ಮಾಡಿ, ವಿದ್ಯಾರ್ಥಿಗಳು ಕೇವಲ ಅಭ್ಯಾಸಕ್ಕೆ ಮಾತ್ರ ಗಮನಹರಿಸದೇ ಕ್ರೀಡೆಗಳಲ್ಲಿ ಹಾಗೂ ಸಾಂಸ್ಕ್ಕತಿಕ ಕಾರ್ಯಕ್ರಮಗಳಲ್ಲಿ ಮುಕ್ತ ಮನದಿಂದ ಭಾಗವಹಿಸಿದರೆ ಅವರ ಜೀವನ ಸರ್ವಾಂಗ ಸುಂದರವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕ್ರೀಡೆ ಮತ್ತು ಸಾಂಸ್ಕ್ಕತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಮುಕ್ತ ಮನದಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು.

ಪ್ರೊ.ಜಳಕೆಯವರು ವಂದನಾರ್ಪಣೆ ಮಾಡಿದರು.

ಸಮಾರಂಭದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಬಾಲಚಂದ್ರ ಹೊಸಮನಿ, ಕುಮಡೊಳ್ಳಿ ಹಾಗೂ ಬಿಎಡ್ ಕಾಲೇಜಿನ ಪ್ರಾಚಾರ್ಯ ತೋಡಕರ, ಸಂಯೋಜಕ ಸಂತೋಷ ಹಾಗೂ ಕಾಲೇಜಿನ ಎಲ್ಲ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

loading...

LEAVE A REPLY

Please enter your comment!
Please enter your name here