ಚಿಂಚಲಿಗೆ ಹೆಚ್ಚಿನ ಬಸ್ಸು ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

0
11
loading...

ಚಿಂಚಲಿ (ರಾಯಬಾಗ) 23: ಹೆಚ್ಚಿನ ಬಸ್ಸು ಬಿಡುವಂತೆ ಒತ್ತಾಯಿಸಿ ತಾಲೂಕಿನ ಚಿಂಚಲಿ ಗ್ರಾಮದ ನೂರಾರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ಗುರುವಾರ ಮುಂಜಾನೆ ಒಂದು ಗಂಟೆಗೂ ಹೆಚ್ಚು ಕಾಲ ಕುಡಚಿ-ರಾಯಬಾಗ ಮತ್ತು ಸಿದ್ದಾಪೂರ-ರಾಯಬಾಗ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಚಿಂಚಲಿಯಿಂದ ರಾಯಬಾಗ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಬಸ್ಸುಗಳ ಸೌಕರ್ಯ ಕಡಿಮೆಯಿವೆ. ಅಲ್ಲದೆ ಈಗಿರುವ ಕುಡಚಿ-ರಾಯಬಾಗ ಮತ್ತು ಸಿದ್ದಾಪೂರ-ರಾಯಬಾಗ ಬಸ್ಸಗಳಲ್ಲಿ ಸಿದ್ದಾಪೂರ, ಕುಡಚಿ, ಪರಮಾನಂದವಾಡಿ, ಸುಟ್ಟಟ್ಟಿ ಹಾಗೂ ಇತರೆ ಗ್ರಾಮಗಳಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಯಾಣಿಸುದರಿಂದ ಬಸ್ಸಿನಲ್ಲಿ ಸ್ಥಳಾವಕಾಶ ವಿರುವದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಚಿಂಚಲಿ ಗ್ರಾಮದಿಂದ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಯಬಾಗ ಶಾಲಾ ಕಾಲೇಜುಗಳಿಗೆ ದಿನ ನಿತ್ಯ ಹೋಗುತ್ತಾರೆ. ತಮಗೆ ಹೆಚ್ಚಿನ ಬಸ್ಸುಗಳ ಸೌಲಭ್ಯ ಒದಗಿಸಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನ ವಾಗಲಿಲ್ಲ ಆದರಿಂದ ಇವತ್ತು ನಾವೇ ಬಸ್ಸುಗಳನ್ನು ತಡೆದು ಪ್ರತಿಭಟನೆ ಮಾಡುವ ಅನಿವಾರ್ಯ ಬಂದಿತೆಂದು ವಿದ್ಯಾರ್ಥಿಗಳು ಹೇಳಿದರು.

ನಾಳೆಯಿಂದ ಹೆಚ್ಚಿನ ಬಸ್ಸಿನ ಸೌಲಭ್ಯ ಕಲ್ಪಿಸಿಕೋಡದಿದ್ದರೆ ವಿದ್ಯಾರ್ಥಿಗಳೊಂದಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here