ನೆಮ್ಮದಿ ಮುಂದೆ ಸಾಲು ಸಾಲು ಜನರ ಗೋಳು ಕೇಳುವವರ್ಯಾರು

0
31
loading...

ಮುಧೋಳ:, 10-ನೆಮ್ಮದಿ ಕೇಂದ್ರಗಳು ರಾಜ್ಯದಲ್ಲಿ ಆರಂಭ ಗೊಂಡಾಗಿನಿಂದ ನಗರ ಗ್ರಾಮೀಣ ಜನರ ನೆಮ್ಮದಿ ಯಂತು ಹಾಳಾಗಿವೆ. ರಾಜ್ಯ ಸರಕಾರ ವೇನೂ ನೆಮ್ಮದಿ ಕೇಂದ್ರ ಗಳಿಂದ ಜನರ ಗೋಳು ತಪ್ಪ ಬಹುದು ಎಂದು ಕೂಂಡು ನೆಮ್ಮದಿ ಕೇಂದ್ರಗಳು ಆರಂಬಿಸಿತು, ಆದರೆ ಅದರಿಂದ ಪದೆ ಪದೆ ಜನರಿಗೆ ತೋಂದರೆಗಳು ಹೆಚ್ಚಾಗುತ್ತಿವೆ.

ತಾತ್ಕಾಲಿಕ ಪಡಿತರ ಚೀಟಿ ಗಳ ರಂಪಾಟ ಇಂದಿಗೂ ಮುಗಿಯುತ್ತಿಲ್ಲ ಜನರು ಒಂದಿಲ್ಲ ಒಂದು ಸಮಸ್ಯಯಿಂದ ಅಲೆದಾಡುತ್ತಿದ್ದಾರೆ  ಜನರು ತಮ್ಮ ಸಮಸ್ಯ ಮುಗಿಯಿತು ಎನ್ನುವಷ್ಠರಲ್ಲಿ ಮತ್ತೂಂದು ಸಮಸ್ಯ ಎದುರಾಗಿರುತ್ತೆ ಜನ ನೆಮ್ಮದಿ ಕೇಂದ್ರಗಳ ನಂಟು ಬಿಡಬೇಕೆಂದ್ರೆ ಅದು ಅವರ ನಂಟ ಬಿಡುತ್ತಿಲ್ಲ ಈಗ ಹಳೆ ಪಡಿತರ ಚೀಟಿ ನವಿಕರನ ಹೆಸರು ಸೆರ್ಪಡೆ  ಒಂದು ದಿನ ನೆಮ್ಮದಿ ಕೇಂದ್ರದ ಮುಂದೆ ಜನ ಸಾಲುಸಾಲು ಅದಕ್ಕೆ ಸೂಕ್ತವಾದ ದಾಖಲೆ ಕೂಡಲು  ನಿಲ್ಲಬೇಕು ಮತ್ತೂಂದು ದಿನ ಫೂಟೂ ತೆಗೆಯಲು ನಿಲ್ಲಬೇಕು.

ಇದರ ಮಧ್ಯ ಯಾರಾದರು ಜಾತಿ ಆದಾಯ ಪ್ರಮಾಣ ಪತ್ರಕ್ಕಾಗಿ ಬಂದರೆ ಅವರಿಗಂತು ಸುಲಭವಾಗಿ ಅರ್ಜಿಸಲ್ಲಿಸಲು ಆಗುವದೆ ಇಲ್ಲ ಪ್ರತಿ ದಿನ ಪಟ್ಟಣದಲ್ಲಿನ ಜನ ತಮ್ಮ ಬಡಾವಣೆಯಲ್ಲಿ    ರಾತ್ರಿ ಹೂತು ತಾವು ತಾವು  ಮಾತನಾಡಿ ನೊಡರಿ ಅಕ್ಕ ಮುಂಜಾನೆ 5 ಘಂಟೆಗೆ ನಾವು ಪಡಿತರ ಚೀಟಿ ದಾಖಲೆ ಕೂಡಾಕ ಹೂಗತಿವ ನಿವು ಬರತಿರೇನರಿ ಅಂತ ಹೇಳಿ ಮಾತನಾಡಿ ಕೊಂಡು  ಆ ಬಡಾವಣೆಯ ಸುಮಾರು 8-10 ಜನ ಮಹಿಳೆಯರು 5 ಗಂಟೆಗೆ ಮಹಾಕವಿ ರನ್ನ ವೃತ್ತ ದಲ್ಲಿರುವ ನೆಮ್ಮದಿ ಕೇಂದ್ರ ಬಳಿ  ಬಂದು ಸಾಲಿನಲ್ಲಿ ನಿಲ್ಲುತ್ತಾರೆ ಈ ಮೊದಲು ತಾತ್ಕಾಲಿಕ ಪಡಿತರ ಚೀಟಿ ಹೂಂದಿದವರು ಹಾಗೂ ಸೇರಿದ ಹೆಸರು ತೆಗೆಸುವ, ಸೇರಿಸುವ ಕುರಿತು ಹೂಸದಾಗಿ ಅರ್ಜಿ ಸಲ್ಲಿಸಬೇಕಾಗಿದೆ.

ಅದಕ್ಕಾಗಿ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಿದೆ.ಅದಕ್ಕಾಗಿ ಬೇರೆಯವರಲ್ಲಿ ದಿನದ ದುಡಿಮೆಗಾಗಿ ದುಡಿಯುವ ಅನೇಕ  ಬಡ ಪುರುಷರು ಮಹಿಳೆಯರು ತಮ್ಮ ಒಂದು  ಎರಡು ದಿನದ ದುಡಿಮೆ ಬಿಟ್ಟು ಬೆಳಿಗ್ಗೆ 5 ಕ್ಕೆ ಬಂದು ನಿಲ್ಲುವುದು ಸರ್ವೆ ಸಾಮಾನ್ಯವಾಗಿದೆ.

ಕಚೇರಿ ವೇಳೆ ಪ್ರಾರಂಭವಾಗಿ  ಮುಗಿಯುತ್ತಿದ್ದಂತೆ ಬೆಳಿಗ್ಗೆ ಬಂದ ಅನೇಕರು ತಮ್ಮ ಸರದಿ ಬಾರದೆ ವಾಪಸ ಮನೆಗೆ ಮರಳಿ ಮರುದಿನ ಮತ್ತೆ ಅದೆತರ

ಬೆಳಿಗ್ಗೆ ಬಂದು ಸರದಿಯಲ್ಲಿ  ನಿಲ್ಲುವುದು ಸಾಮಾನ್ಯವಾಗಿಬಿಟ್ಟಿದೆ. ತಮ್ಮ ಮನೆಯಲ್ಲಿದ್ದ ಹೆಣ್ಣು ಮಕ್ಕಳು ಬೇರೆ ಕಡೆ ಮದುವೆ ಯಾಗಿಹೂಗಿದ್ದರೆ ಅಂಥವರ ಹೆಸರು ತೆಗೆದುಹಾಕಿ ಎಂದು ಅದಿಕಾರಿಗಳು ಹೆಳಿದ್ದರಿಂದ ,ಮಳೆ ಯನ್ನು ಲೆಕ್ಕಿಸದೆ ನೆಮ್ಮದಿ ಮುಂದೆ ನಿಲ್ಲುವಂತಾಗಿದೆ . ನಾನು ಹೆಸರು ತೆಗೆಯಲು ಬಂದಿನರಿ ಎಂದು ಸರದಿಯಲ್ಲಿ ನಿಂತ ಮಹಿಳೆ ಹೆಳುತ್ತಾಳೆ,

ಪ್ರತಿ ಒಂದೂಕ್ಕು ಪಡಿತರ ಚೀಟಿ ಅತೀ ಅವಶ್ಯ ಆದ್ದರಿಂದ ನಮ್ಮಂಥ ಬಡ ಜನರಿಗೆ ಅಗ್ಗ ದರದಲ್ಲಿ  ಅಕ್ಕಿ ಸಕ್ಕರೆ ಗೋದಿ ಸಿಮಿಡಡಯನ್ನೆ ಸಿಗುತ್ತೆ.ನಮ್ಮ ಮಕ್ಕಳ ಶಾಲೆ ಗಾಗಿ ನೌಕರಿಗಾಗಿ ಪಡಿತರ ಚೀಟಿ ಪ್ರತಿ ಝರಾಕ್ಸ ಬೇಕೆ ಬೇಕು ಆದರಿಂದ ನಾವು ಇಲ್ಲಿಗೆ ಬಂದು ನಿಲ್ಲಬೇಕಾಗಿದೆ.ಎನ್ನುತ್ತಾರೆ ಸರದಿನಿರತ ಜನರು ಪತ್ರಿಕೆ ಮುಂದೆ ತಮ್ಮ ಗೋಳನ್ನು ತೋಡಿಕೂಂಡರು.

loading...

LEAVE A REPLY

Please enter your comment!
Please enter your name here