ಬಸ್-ಟೆಂಪೋ ಡಿಕ್ಕಿ: ಆರು ಮಂದಿ ಸಾವು

0
11
loading...

ಖಾನಾಪುರದಲ್ಲಿ ಭೀಕರ ಅಪಘಾತ

ಖಾನಾಪುರ 1- ತಾಲೂಕಿನ ವಣ್ಣೂರ ಸಮೀಪ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ಟೆಂಪೋವೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಅಪಘಾತದಲ್ಲಿ ಒಟ್ಟು 6 ಜನ ಮೃತಪಟ್ಟಿದ್ದು 20ಕ್ಕೂ ಹೆಚ್ಚು ಜನ ಗಂಭೀರ ಸ್ವರೂಪದ ಗಾಯಗಳಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ಮಹಿಳೆಯರನ್ನು ಗೋಕಾಕ ತಾಲೂಕಿನ ಅಡಿವೆಪ್ಪನ ಅಂಕಲಗಿಯ ಮಲ್ಲವ್ವ ಚಚಡಿ(58), ಯಲ್ಲವ್ವ ಚಚಡಿ(35) ಸುಮ ಲಕ್ಷ್ಮಣ ಕುಂದಗೊಳ (18) ಸತ್ಯವ್ವಾ ಗೌಡಪ್ಪ ಹೆಳವಿ (75), ನಗಮವ್ವಾ ಅಪ್ಪಯ್ಯಾ ಬೋಗಡಿ (55) ಬಸವಲಿಂಗವ್ವಾ ಶಂಕರ ಆದೀನ (35) ಇವರೆಲ್ಲರೂ ಅಂಕಲಗಿ ಗ್ರಾಮದವರೆಂದು ಗುರುತಿಸಲಾಗಿದೆ. ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ. ಕೆಲವರಿಗೆ ತಲೆಗೆ, ಬೆನ್ನಿಗೆ ಬಲವಾದ ಏಟುಗಳಾಗಿವೆ. ಕೆಲವರ ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಅಪಘಾತಕ್ಕೊಳಗಾದ ಎರಡೂ ವಾಹನಗಳ ಚಾಲಕರು ಪರಾರಿಯಾಗಿದ್ದಾರೆ.

ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ನಾಲ್ವರು ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಜನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ 20 ಜನರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಋುಎ.

loading...

LEAVE A REPLY

Please enter your comment!
Please enter your name here