ಮಳೆ ಇಲ್ಲದೇ ಬತ್ತಿಹೋದ ಚಿಕ್ಕ ಜಲಾಶಯಗಳು

0
21
loading...

ಯಮಕನಮರಡಿ 9:- ಹುಕ್ಕೇರಿ ತಾಲೂಕಿನ ಹತ್ತರಗಿ ಮತ್ತು ಯಮಕನಮರಡಿ ಹೂಬಳಿ ಮಟ್ಟದಲ್ಲಿ ಸಣ್ಣ ಸಣ್ಣ ಹಳ್ಳಗಳಿವೆ. ಕರ್ನಾಟಕ ಸರ್ಕಾರವು ಜಲಾನಯನ ಅಭಿವೃದ್ದಿ ಇಲಾಖೆಯವರು ನಿರ್ಮಿಸಿರುವ ಚಿಕ್ಕ ಜಲಾಶಯಗಳು ಈ ವರ್ಷದ ಮಳೆ ಅಭಾವದಿಂದ ನೀರಿಲ್ಲದೆ ಖಾಲಿ ಖಾಲಿ ಉಳಿದಿವೆ ಹತ್ತರಗಿ ಸಮೀಪ ಹರಿದಿರುವ ಹಳ್ಳಕ್ಕೆ ಕೇವಲ 1 ಕೀ.ಮೀ ಅಂತರದಲ್ಲಿ ಐದು ಚಿಕ್ಕ ಜಲಾಶಯಗಳನ್ನು ನಿರ್ಮಿಸಲಾಗಿದೆ. ಆದರೆ ಈ ವರ್ಷ ಒಂದೂ ಜಲಾಶಯಕ್ಕೆ ನೀರಿಲ್ಲದೆ ಇರುವುದು ಒಂದು ವಿಷಾದನೀಯ ಸಂಗತಿಯಾಗಿದೆ.

ಪ್ರತಿವರ್ಷ ಅಗಸ್ಟ ತಿಂಗಳಲ್ಲಿ ಈ ಜಲಾಶಗಳು ತುಂಬಿ ತುಳುಕುತ್ತ ಮೇಲಿಂದ ನೀರು ಹರಿದುಬರುವುದನ್ನು ನೋಡಿದರೆ ಮನಸ್ಸಿಗೆ ಆನಂದವೇ ಆನಂದವಾಗುತ್ತಿತ್ತು. ಆದರೆ ಈ ವರ್ಷ ಇವುಗಳನ್ನು ಕಂಡರೆ ಅಯ್ಯೂ ಪಾಪವೆನಿಸುತ್ತದೆ. ಪೂರ್ತಿ ಮಳೆಗಾಲ ಮುಗಿಯುತ್ತಾ ಬಂದರೂ ಇಲ್ಲಿ ಯಾವುದೇ ತರಹದ ಹಳ್ಳ ಕೊಳ್ಳಗಳು ನೀರಿಲ್ಲದೇ ಬತ್ತಿ ನಿಂತಿರುವುದು ಒಂದು ಭಯಾನಕ ಸಂಗತಿಯಾಗಿದೆ. ಮುಂದಿನ ಬೇಸಿಗೆ ದಿನದಲ್ಲಿ ಜನರು ಜಾನುವಾರುಗಳನ್ನು ರಕ್ಷಿಸುವುದು ಹಾಗೂ ಕುಡಿಯುವ ನೀರಿಗಾಗಿ ಅಲೆದಾಡುವ ಜನರ ಆ ಗೋಳನ್ನು ಭಗವಂತನೇ ಬಲ್ಲ.

loading...

LEAVE A REPLY

Please enter your comment!
Please enter your name here