ರಾಮದುರ್ಗದ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0
20
loading...

ರಾಮದುರ್ಗ,29:  ತಾಲ್ಲೂಕಾ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಸ್ಥಳಿಯ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ಸಾಧನೆಗೈದು ಪ್ರಶಸ್ತಿ ಗಳಿಸುವ ಮೂಲಕ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

ಮಹಿಳೆಯರ ವಿಭಾಗ: ಕಬಡ್ಡಿ ತಂಡ ಪ್ರಥಮ ,ಸಕ್ಕುಬಾಯಿ ಹವಳಕೋಡ ವೈಯಕ್ತಿಕ 200 ಮೀ,400 ಮಿ,800 ಮೀ, ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವಿರಾಗ್ರಣಿ ಪ್ರಶಸ್ತಿ, ಗುಂಡು ಎಸೆತ, ಲಾಂಗ ಜಂಪ ಸಲೀಮಾ ಮುನವಳ್ಳಿ (ದ್ವಿತೀಯ), 100ಮೀ ಲಕ್ಷ್ಮಿ ವಿ ಗೋರನಾರ (ದ್ವಿತೀಯ) 4*100 ಮೀ,ಹಾಗೂ 4 * 400 ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಹಾಗೂ ಥ್ರೌಬಾಲ್ ದ್ವಿತೀಯ ಸ್ಥಾನ.

ಪುರುಷರ ವಿಭಾಗದಲ್ಲಿ :100 ಮೀ ಚೇತನ ನರಸಣ್ಣವರ (ಪ್ರಥಮ), ಚಕ್ರ ಎಸೆತ ಕೃಷ್ಣಾ ಎಂ ಲಮಾಣಿ (ಪ್ರಥಮ) 800 ಮೀ,200 ಮೀ ಓಟ ಶ್ರೀಕಾಂತ ಮುದೇನ್ನವರ (ದ್ವಿತೀಯ), ಉದ್ದ ಜಿಗಿತ ಸೋಮಶೇಕರ ಉದಪೂಡಿ (ದ್ವಿತೀಯ), ಚೆಸ್ ಬಿ ಎಂ ಆರಿಬೆಂಚಿ (ಪ್ರಥಮ), ಎತ್ತರ ಜಿಗಿತ ಡಿ.ಎಸ್.ರೋಗನ್ನವರ ದ್ವಿತೀಯ, ಥ್ರೌಬಾಲ್ ದ್ವಿತೀಯ, ಸ್ಥಾನ 4ಥ100 ಮೀ (ಪ್ರಥಮ) 4ಥ400 ಮೀ, ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಈಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು  ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಪಿ. ಎಪ್. ಪಾಟೀಲ್, ಉಪಾಧ್ಯಕ್ಷ ಪಿ. ಎಂ. ಜಗತಾಪ ಗೌರವಕಾರ್ಯದರ್ಶಿ ಎಸ್. ಆಯ್. ಪುರಾಣಿಕ ಹಾಗೂ ಮಹಾವಿದ್ಯಾಲಯದ  ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here