ರಾಷ್ಟ್ತ್ರೀಕೃತ ಬ್ಯಾಂಕನಿಂದ ಪಡೆದ ಬೆಳೆಸಾಲ ಮನ್ನಾ ಮಾಡಿ

0
14
loading...

ಸಂಸದ ರಮೇಶ ಕತ್ತಿ ಕೇಂದ್ರ ಸರಕಾರಕ್ಕೆ ಆಗ್ರಹ

ಸಂಕೇಶ್ವರ 21: ದೇಶದ 320 ಜಿಲ್ಲೆಗಳಲ್ಲಿ ಆವರಿಸಿರುವ ಬರಗಾಲದಿಂದ ಬೆಂದಿರುವ ದೇಶದ ಅನ್ನದಾತ ರೈತ ರಾಷ್ಟ್ತ್ರೀಕೃತ ಬ್ಯಾಂಕುಗಳಿಂದ ಪಡೆದ ಬೆಳೆಸಾಲ ಮನ್ನಾ ಮಾಡುವಂತೆ ಲೋಕಸಭಾ ಅಧಿವೇಶನದಲ್ಲಿ ಒತ್ತಾಯಿಸಿರುವುದಾಗಿ ಚಿಕ್ಕೌಡಿ ಲೋಕಸಭಾ ಸದಸ್ಯ ರಮೇಶ ಕತ್ತಿ ತಿಳಿಸಿದ್ದಾರೆ.

ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಕರ್ನಾಟಕ ಸರ್ಕಾರವು ರಾಜ್ಯದ ರೈತರು ಸಹಕಾರ ಬ್ಯಾಂಕ್ಗಳಲ್ಲಿ ತೆಗೆದುಕೊಂಡ ರೈತರ ರೂ.25,000/- ಬೆಳೆಸಾಲ ಹಾಗೂ ಬಡ್ಡಿಮನ್ನಾ ಮಾಡಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ರೂ. 3400 ಕೋಟಿ ಹೊರೆ ಉಂಟಾಗಿದೆ. ಇದರ ಪೈಕಿ  ಕೇಂದ್ರ ಸರ್ಕಾರವು ಸಹ ತನ್ನ ಪಾಲಿನ ರೂ. 2700 ಕೋಟಿ ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದಲ್ಲಿ ಬರನಿರ್ವಹಣೆ ಇನ್ನೂ ಹೆಚ್ಚಿನ ಅನುಕೂಲವಾಗಲಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿರುವೆ ಎಂದು ಹೇಳಿದರು.

ಜಿಲ್ಲಾ ಕಾಂಟಿಜೆನ್ಸಿ ಪ್ಲಾನ್ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯ ಸೇರಿದಂತೆ ದೇಶದ 320 ಜಿಲ್ಲೆಗಳಲ್ಲಿ ತಲೆದೊರಿರುವ ಭೀಕರ ಬರ ಪರಿಸ್ಥಿತಿ ನಿಭಾಯಿಸಲು ಎಲ್ಲಾ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳ ತಜ್ಞರೊಂದಿಗೆ ಸಮಾಲೋಚಿಸಿ ಪರ್ಯಾಯ ಸ್ಥಳಗಳನ್ನು ಗುರುತಿಸಿ, ಬೆಳೆಗಳನ್ನು ಬೆಳೆಯಲು ಬೀಜಗಳನ್ನು ತಯಾರಿಸಲು ಸೂಚಿಸಲಾಗಿದೆ ಎಂಬ ಕೇಂದ್ರ ಕೃಷಿ ಸಚಿವ ಶರದ ಪವಾರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ರಮೇಶ ಕತ್ತಿ, ಕೇಂದ್ರ ಸರಕಾರ ಕರ್ನಾಟಕ ಬರ ಅಧ್ಯಯನಕ್ಕಾಗಿ ಮೂರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ ವರದಿಗಳು ಕೇವಲ ಅಧ್ಯಯನಕ್ಕೆ ಮಾತ್ರ ಸಿಮೀತವಾಗಿವೆಯೇ ಹೊರತು ಇನ್ನಾವ ಅಭಿವೃದ್ದಿಗೂ ಅಲ್ಲ ಎಂದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ 2012ರ ದಕ್ಷಿಣ-ಪೂರ್ವ ಮನಸೂನ್ ವಿಫಲವಾಗಿ ಮಳೆ ಕೊರತೆ ಉಂಟಾಗಿದ್ದು,  ತೀವ್ರ ಬರ ಎದುರಿಸುತ್ತಿರುವ ಕರ್ನಾಟಕದ 24 ಜಿಲ್ಲೆಗಳಲ್ಲಿ 988 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಜಾನುವಾರುಗಳಿಗೆ ಹಸಿ ಮತ್ತು ಒಣ ಮೇವಿನ ಕೊರತೆಯೂ ಉಂಟಾಗಿದೆ ಎಂದರು.  ಕೇಂದ್ರ ಬರ ಅಧ್ಯಯನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯಕ್ಕೆ 11,489 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಆದರೆ ಕೇಂದ್ರ ರಾಜ್ಯದ ಜನತೆ ಕುಡಿಯುವ ತಾತ್ಸಾರ ಪಡುವ ಈ ಸಂದರ್ಭದಲ್ಲಿ ಕೇವಲ 419.13 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ಕೇಂದ್ರ ಸರ್ಕಾರ ಉದ್ದೇಶಿಸಿರುವಂತೆ ಶಿಸ್ಟೇಟ್ ಡಿಸಾಸ್ಟರ್ ರೆಸ್ಪಾನ್ಸ್ ಫಂಡ್ಷಿ ಮತ್ತು ಶಿನ್ಯಾಶನಲ್ ಡಿಸಾಸ್ಟರ್ ರೆಸ್ಪಾನ್ಸ್ ಫಂಡ್ಷಿಗಳ ಮೂಲಕ ನೀಡುವ ಬರ ಪರಿಹಾರ ಅನುದಾನ ಮತ್ತು ಹೆಚ್ಚುವರಿ ಪರಿಹಾರವನ್ನು ರಾಜ್ಯದಲ್ಲಿ ಆವರಿಸುವ ಬರದ ತೀವ್ರತೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಕೂಡಲೇ ರಾಜ್ಯದ ನೆರವಿಗೆ ಧಾವಿಸಬೇಕೆಂದು ಚಿಕ್ಕೌಡಿ ಲೋಕಸಭಾ ಸದಸ್ಯ ರಮೇಶ ಕತ್ತಿ ಆಗ್ರಹಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here