ಇಂದು ಚಿತ್ರಕಲಾ ಮತ್ತು ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

0
21
loading...

ಬೆಳಗಾವಿ 12: ನಗರ ವಲಯದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಶನಿವಾರ ದಿ. 15 ರಂದು ಮುಂ. 10 ಗಂಟೆಗೆ ವಿಶ್ವೇಶ್ವರಯ್ಯ ನಗರದ ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯದಲ್ಲಿ ಜರುಗಲಿದೆ.

ಸ್ಪರ್ಧೆಯ ವಿಷಯ (1) ಬರಗಾಲ (2) ಶಿಕ್ಷಣಕ್ಕಾಗಿ ಸರಕಾರದ ಯೋಜನೆಗಳು (3) ಶಾಲೆಗಾಗಿ ನಾವು-ನೀವು (4) ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಮತ್ತು (5) ಶಾಲಾ ಗ್ರಂಥಾಲಯ ಮತ್ತು ಅದರ ಬಳಕೆ.

ಅದೇ ದಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಕೂಡ ಇದೇ ಸಮಯಕ್ಕೆ ಇದೇ ಸ್ಥಳದಲ್ಲಿ ಆಯೋಜಿಸಲಾಗಿದೆ.

ಭಾಗವಹಿಸಲಿರುವ ವಿದ್ಯಾರ್ಥಿಗಳ ಹೆಸರುಗಳನ್ನು ಶಾಲಾ ಮುಖ್ಯಸ್ಥರು ದಿ.13 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ. ಪುಂಡಲೀಕ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here