ಕಬ್ಬಿಣದ ಕಡಲೆ

0
24
loading...

ಇದು ವರೆಗೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಕೆ. ಎಸ್. ಈಶ್ವರಪ್ಪ ಈಗ ರಾಜ್ಯದ ಉಪ ಮುಖ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬರು ಎರಡೂ ಹುದ್ದೆಯಲ್ಲಿ ಇರಬಾರದು ಎಂಬ ಪರಂಪರೆಗೆ ಅನುಗುಣವಾಗಿ ಅವರು ಒಂದು ಸ್ಥಾನವನ್ನು ಬಿಟ್ಟು ಕೊಡಬೇಕಾಗಿದೆ.ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕಾಗಿದೆ. ಹರಿಯಾಣಾದ ಸೂರಜ್ ಕುಂಡದಲ್ಲಿ ಬುಧವಾರದಿಂದ ಆರಂಭವಾಗಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ತ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಪಕ್ಷದ ವರಿಷ್ಠರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.   ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ಯಡಿಯೂರಪ್ಪ ಬೆಂಬಲಿಗರು ಸತತ ಒತ್ತಡವನ್ನು ಹೇರತೊಡಗಿದ್ದಾರೆ.  ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡದಿದ್ದರೆ ನಾನು ಯಾವ ಪುರುಷಾರ್ಥಕ್ಕಾಗಿ ಪಕ್ಷದಲ್ಲಿ ಇರಬೇಕು ಎಂದು ಕೇಳುವ ಮೂಲಕ ಯಡಿಯೂರಪ್ಪ ಪಕ್ಷ ಬಿಟ್ಟು ಹೊರಗೆ ಹೋಗುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ. ಜೊತೆಗೆ ಡಿಸೆಂಬರ ತಿಂಗಳಲ್ಲಿ ತಮ್ಮ ಮುಂದಿನ ರಾಜಕೀಯ ನಡೆಯನ್ನು ಪ್ರಕಟಿಸುವುದಾಗಿ  ಹೇಳಿಕೊಂಡಿದ್ದಾರೆ. ಅಲ್ಲದೆ ಈಗ ನಡೆಯುತ್ತಿರುವ ರಾಷ್ಟ್ತ್ರೀಯ ಕಾರ್ಯಕಾರಿಣಿ ಸಭೆಗೆ ಹೋಗದೆ ಅವರು ಬೆಂಗಳೂರಲ್ಲಿ ಉಳಿದುಕೊಂಡಿದ್ದರು.

ಯಡಿಯೂರಪ್ಪನವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ  ಮಾಡಿದರೆ ಅವರ ಮೇಲೆ ಇರುವ ಭ್ರಷ್ಟಾಚಾರದ ಆಪಾದನೆಗಳಿಗಾಗಿ ಪಕ್ಷ ರಾಜಕೀಯ ವಿರೋಧಿಗಳ ಟೀಕಾ ಪ್ರಹಾರಕ್ಕೆ ಒಳಗಾಗವೇಕಾಗುತ್ತದೆ. ಯಾಕೆಂದರೆ ಭ್ರಷ್ಟಾಚಾರ ವಿರೋಧಿ ನೀತಿಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ  ಹೋರಾಟ ಮಾಡಬೇಕಾದ ಅನಿವಾರ್ಯತೆ  ಇರುವುದರಿಂದ ಪಕ್ಷ ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವುದು ಹೇಗೆ ಎಂಬ ತೋಳಲಾಟದಲ್ಲಿ ಪಕ್ಷದ ವರಿಷ್ಠರು ಸಿಲುಕಿದ್ದಾರೆ. ಅವರ ಮೇಲೆ ಇರುವ ಎಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇವೆ. ಯಾವುದಾದರೊಂದು  ಪ್ರಕರಣದ ಕಾರನಕ್ಕಾಗಿ  ಅವರು  ಬಂಧನಕ್ಕೆ ಒಳಗಾದರೆ ಪಕ್ಷ ತೀವ್ರ ಮುಖಭಂಗಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಯಡಿಯೂರ  ಪ್ಪನವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ವರಿಷ್ಠರಿಗೆ ತೀವ್ರ ಮುಜುಗರದ ವಿಷಯವಾಗಿ ಪರಿಣಮಿಸಿದೆ. ಯಡಿಯೂರಪ್ಪನವರು ಸೂಚಿಸಿದ ವ್ಯಕ್ತಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿ ಅವರನ್ನು ಸಮಾಧಾನ ಗೊಳಿಸಬೇಕು ಎಂದರೆ ಅವರು ಯಾವುದೇ ವ್ಯಕ್ತಿಯ ಹೆಸರನ್ನು ಸೂಚಿಸಿರುವುದಿಲ್ಲ ತಮಗೆ ಅಧ್ಯಕ್ಷ ಪಟ್ಟ ಬೇಕು.  ಎಂಬ ಒತ್ತಡ ಹೇರತೊಡಗಿದ್ದಾರೆ. ಧಾರವಾಡದ ಸಂಸದ ಪ್ರಲ್ಲಾದ ಜೋಶಿ ಬೆಂಗಳೂರು ಸಂಸದ ನಳಿನ ಕುಮಾರ ಕಟೀಲ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಚಲಾವಣೆಯಲ್ಲಿ ಇವೆ. ಆದರೆ ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಯಡಿಯೂರಪ್ಪ ಸರಕಾರವನ್ನು ಉರುಳಿಸುವ ಸಾಧ್ಯತೆ ಇದೆ.  ಕೆಲವೇ ತಿಂಗಳಲ್ಲಿ ಚುನಾವಣೆ ವಿಧಾನ ಸಭೆಗೆ ನಡೆಯಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಲೋಕಸಭೆಗೆ  ಯಾವುದೇ  ಕ್ಷಣದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಿರುವಾಗ ಅಧಿಕಾರ ಕಳೆದುಕೊಂಡು ಚುನಾವಣೆ ಎದುರಿಸುವುದು ಹೇಗೆ ಎಂಬ ಆತಂಕ ವರಿಷ್ಠರನ್ನು ಕಾಡತೊಡಗಿದೆ. ಆದ್ದರಿಂದ ಸಧ್ಯಕ್ಕೆ ಅಧ್ಯಕ್ಷರ ನೇಮಕ ಮಾಡದೇ ಇರುವುದು ಉತ್ತಮ ಎಂಬ ಅಭಿಪ್ರಾಯಗಳು ಪಕ್ಷದ ವರಿಷ್ಠರ ವಲಯದಲ್ಲಿ  ಕೇಳಿ ಬರತೊಡಗಿದೆ. ಹೀಗಾಗಿ ಈಗ ನಡೆಯುತ್ತಿರುವ ರಾಷ್ಟ್ತ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷರ  ಘೋಷಣೆ ಆಗುವುದು ಈಗ ಅನುಮಾನಕ್ಕೆ ಕಾರಣವಾಗಿದೆ ಆದ್ದರಿಂದ ಇನ್ನಷ್ಟು ದಿನ ಈಶ್ವರಪ್ಪ  ಮುಂದುವರೆಯುವರೇ  ಅಥವಾ ಆದದ್ದು ಆಗಲಿ ಎಂಬ ದೈರ್ಯದಿಂದ  ಹೊಸ ಅಧ್ಯಕ್ಷರ ನೇಮಕಾತಿಯನ್ನು ಮಾಡುವರೇ ಎಂಬುದನ್ನು ಕಾಯ್ದಯ ನೋಡಬೇಕಾಗಿದೆ. ಆದರೆ ವರಿಷ್ಠರು ಯಾವುದೇ  ನಿರ್ಧಾರವನ್ನು ತೆಗೆದುಕೊಂಡರೂ ಸಹ ಯಡುಯೂರಪ್ಪ ತಮ್ಮ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇಲ್ಲ.

 

loading...

LEAVE A REPLY

Please enter your comment!
Please enter your name here