ಕಲಾ ಲೋಕಕ್ಕೆ ಸಿಗದ ಮನ್ನಣೆ; ವಿನಾಶದಂಚಿನಲ್ಲಿರುವ ಡೊಳ್ಳು ಕುಣಿತ

0
65
loading...

ಡೊಳ್ಳು ಕಲೆ ಅಳಿಯುವ ಹಂತದಲ್ಲಿದೆ. ಅದನ್ನು ಉಳಿಸಿ ಬೆಳೆಸುವ ಅಗತ್ಯವಿದೆ.ಡೊಳ್ಳು ಕಲಾವಿದರಿಗೆ ಸರಕಾರದಿಂದ ಸಾಕಷ್ಟು ಉತ್ತೇಜನ ದೊರಕಿಲ್ಲ. ಇದರತ್ತ ರಾಜಕೀಯ ದುರೀಣರು, ಅಧಿಕಾರಿಗಳು ಚಿಂತಿಸಿ, ಕಲಾವಿದರ ಏಳ್ಗೆಗೆ ಸರಕಾರ ಮತ್ತು ಸಂಘ ಸಂಸ್ಥೆಗಳು ಡೊಳ್ಳು ಕುಣಿತದ ಕಲಾವಿದರ ಏಳ್ಗಿಗೆ ಪ್ರಯತ್ನಿಸಬೇಕು.

ಬೈಲಹೊಂಗಲ 13: ಜನಪದ ಕಲಾ ಲೋಕದಲ್ಲಿ ಅನೇಕ ಕಲೆಗಳು ಇಂದಿಗೂ ಜನರಿಗೆ ಹತ್ತಿರವಾಗಿವೆ. ಉತ್ಸವ, ಹಬ್ಬ-ಹರಿದಿನಗಳು, ಕಾರ್ಯಕ್ರಮಗಳಲ್ಲಿ ಇಂಥ ಕಲಾಲೋಕ ತೆರೆದುಕೊಳ್ಳುತ್ತದೆ. ಅದರಲ್ಲೂ ಪ್ರಾಚೀನ ಕಾಲದಿಂದಲೂ ಚಾಲನೆಯಲ್ಲಿರುವ ಡೊಳ್ಳು ಕುಣಿತ ಇಂದು ವಿನಾಶದಂಚಿನಲ್ಲಿದೆ.

ಪಟ್ಟದ ಕುಣಿತ,ಪೂಜಾ ಕುಣಿತ, ವೀರಗಾಸೆ, ಕಂಸಾಳೆ, ಡೊರುವನ ಕುಣಿತ, ಕೋಲಾಟ, ಕರಡಿ ಮಜಲು ಮೊದಲಾವುಗಳ ಜೊತೆಗೆ ಡೊಳ್ಳು ಕುಣಿತ ವಿಶಿಷ್ಠವಾಗಿ ಕಾಣುತ್ತದೆ.

ಡೊಳ್ಳು ಕುಣಿತ ಹೇಗೆ ಸುರುವಾಯಿತು ಎನ್ನುವ ಕಥೆ ರೋಚಕವಾಗಿದೆ.ಡೊಳ್ಳು ಎನ್ನುವದು ಡೊಳ್ಳಾಸುರ ಎಂಬ ರಾಕ್ಷಸನಿಂದ  ಪ್ರಾರಂಭವಾಯಿತು.ಡೊಳ್ಳಾಸುರ ಎನ್ನುವ ರಾಕ್ಷಸ ಶಿವನ ಕುರಿತು ಘೋರ ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿ ಭಕ್ತನ ಬೇಡಿಕೆಯನ್ನು ಇಡೇರಿಸಲು ಬಯಸುತ್ತಾನೆ. ಆ ಡೊಳ್ಳಾಸುರ ರಾಕ್ಷಸನು ಶಿವನನ್ನು ತನ್ನ ಹೊಟ್ಟೆಯಲ್ಲಿ ಒಂದು ದಿನ ಇರಿಸಿಕೊಳ್ಳಲು ಬೇಡಿಕೆ ಇಡುತ್ತಾನೆ. ಶಿವನು ಅದಕ್ಕೆ ತಥಾಸ್ತು ಎನ್ನುತ್ತಾನೆ. ಆದರೆ ಡೊಳ್ಳಾಸುರ ಒಂದು ದಿನ ಆದ ಮೇಲೆ ಶಿವನನ್ನು ಹೊಟ್ಟೆಯಿಂದ ಹೊರಗೆ ಬಿಡಲು ಒಪ್ಪುವದಿಲ್ಲ.ಇದರಿಂದ ಇಡೀ ಭೂಲೋಕವೆ ಭೂಕಂಪ,ಅಲ್ಲೌಲ ಕಲ್ಲೌಲಗಳಾಗುತ್ತವೆ. ಆಗ ಎಲ್ಲರೂ ಶೀವನನ್ನುಕುರಿತು ರಾಕ್ಷಸನ ಹೊಟ್ಟೆಯಿಂದ ಹೊರಗೆ ಬಾ ಎಂದು ಕೇಳಿಕೊಳ್ಳುತ್ತಾರೆ. ಆಗ ಶಿವನು ಡೊಳ್ಳಾಸುರನ ಹೊಟ್ಟೆ ಶೀಳಿಕೊಂಡು ಹೊರಗೆ ಬರುತ್ತಾನೆ. ಅವನ ಚರ್ಮವನ್ನು ತೆಗೆದುಕೊಂಡು ಡೊಳ್ಳಿಗೆ ಹಾಕುತ್ತಾನೆ. ಅವನ ಕೈ,ಮೂಳೆ ತೆಗೆದುಕೊಂಡು ಡೊಳ್ಳು ಬಾರಿಸುವ  ಗುಣಿಯನ್ನು ಮಾಡುತ್ತಾನೆ. ನರಗಳನ್ನು ತೆಗೆದುಕೊಂಡು ದಾರಗಳನ್ನು ಮಾಡಿ ಅದನ್ನು ನುಡಿಸಿ ರಾಕ್ಷಸನನ್ನು ಸಂಹಾರ ಮಾಡುತ್ತಾನೆ.ಅಲ್ಲಿಯೇ ಹೊಗುತ್ತಿದ್ದ ಓರ್ವ ಕುರುಬನಿಗೆ ಈ ಡೊಳ್ಳನ್ನು ಕೈಗೆಕೊಟ್ಟು ಇದನ್ನು ನಿಮ್ಮ ಮನೆ ದೇವರು ಬೀರೇಶ್ವರ ಎಂದು ಪೂಜಿಸಿರಿ ಎಂದು ಹೇಳುತ್ತಾನೆ. ಹೀಗೆ ಆ ಡೊಳ್ಳು ಜನರ ಕೈಗೆ ಸಿಕ್ಕಿದೆ  ಎಂಬ ಪ್ರತೀತಿಯೂ ಇದೆ.ಡೊಳ್ಳುಬಾರಿ ಸುವವರು ಚರ್ಮಾಂಬರ ಹಾಕಿರುತ್ತಾರೆ.ಇದು ಶಿವನ ವೇಷವಾಗಿರುವದರಿಂದ ಡೊಳ್ಳು ಶಿವನಿಗೂ ಸಂಭಂದಿಸಿರುವದನ್ನು ತೋರಿಸುತ್ತದೆ.

ಕಂಬಳಿ ಹೊತ್ತು ಡೊಳ್ಳು ಬಾರಿಸುವದರಿಂದ ಕಂಬಳಿ ಕುರುಬರ ಕೊಡುಗೆಯಾಗಿರುವದರಿಂದ ಈ ಜನಪದ ಕಥೆಗೂ ಡೊಳ್ಳಿಗೂ ಇರುವ ಸಂಬಂಧವನ್ನು ತಿಳಿದುಕೊಳ್ಳಬಹುದು. ಡೊಳ್ಳು ಬಾರಿಸುವವರು ವಿಭೂತಿಹಚ್ಚಿ, ಗೆಜ್ಜೆ ಕಟ್ಟಿರುತ್ತಾರೆ. ಡೊಳ್ಳು ಬಾರಿಸುವವರ ವೇಷ ಭೂಷನವು ಜನರನ್ನು ಆಕರ್ಷಿಸುವಂತಿದೆ. ಕರ್ನಾಟಕದ ಈ ಕಲೆ ದೇಶ, ಹೊರದೇಶಕ್ಕೂ ಕಾಲಿರಿಸಿದೆ. ಡೊಳ್ಳು ಕುಣಿತ ಪ್ರದರ್ಶನ ಹೆಚ್ಚಾಗಿ ಮೆರವಣಿಗೆ ಜೊತೆಗೆ ಸಾಗುವಂತದ್ದು, ಎಲ್ಲ ಜನರ ಮಧ್ಯೆ ಈ ಕಲೆಯನ್ನು ಪ್ರದರ್ಶಿಸಬೇಕಾಗುತ್ತದೆ. ಇತರ ಕಲೆಗಳಂತೆ ವೇದಿಕೆ(ಸ್ಟೇಜ್)ಗಳ ಮೇಲೆ ಮಾಡುವಂತದ್ದಲ್ಲಾ. ಈಗ ಡೊಳ್ಳು ಕುಣಿತವನ್ನು ಮಹಿಳೆಯರು ಪ್ರದರ್ಶಿಸುವದು ವಿಶೇಷವಾಗಿದೆ.ಅಲ್ಲದೆ ರಾಜಕಾರಣಿಗಳೂ ಸಹ ಕಾರ್ಯಕ್ರಮಗಳಲ್ಲಿ ಡೊಳ್ಳನ್ನು ಬಾರಿಸುವ ಪೋಜು ನೀಡುವದು ವಾಡಿಕೆಯಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆಸಕ್ತಿಯಿಂದ ಡೊಳ್ಳು ಕುಣಿತಕ್ಕಾಗಿ ಡೊಳ್ಳು ಕಲಾವಿದರ ಸಂಘಗಳನ್ನು ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದಾರೆ. ಅಂಥ ಕಲಾವಿದರನ್ನು ಸರಕಾರ ಗುರುತಿಸಿ ಸೂಕ್ತ ಗೌರವ,ನೆರವು ನೀಡಬೇಕಾದ ಅವಶ್ಯಕತೆಯಿದೆ.

ಈ ದೃಷ್ಟಿಯಲ್ಲಿ ಕಲಾಲೋಕದ ಡೊಳ್ಳು ಕುಣಿತಕ್ಕೆ ಸ್ಪೂರ್ತಿ ನೀಡುವದರೊಂದಿಗೆ ಜಾನಪದ ಸಾಹಿತ್ಯ ಸಂಸ್ಕ್ಕತಿ ಸಂರಕ್ಷಿಸಿಕೊಳ್ಳುವ ಚಿಂತನೆ ಅತೀ ಅವಶ್ಯವಾಗಿದೆ.

 

loading...

LEAVE A REPLY

Please enter your comment!
Please enter your name here