ಕುಂದರನಾಡಿನ ಪ್ರಗತಿಪರ ರೈತ ಸಾತಲಿಂಗಪ್ಪಾ ನಿಧನ

0
16
loading...

ಅಂಕಲಗಿ-03- ಕುಂದರನಾಡಿನ  ಅಂಕಲಗಿಯ ಪ್ರಗತಿಪರ ಕೃಷಿಕುಟುಂಭದ ಹಿರಿಯ ನಾಗರಿಕ ಸಾತಲಿಂಗಪ್ಪಾ (ಮಾಳಪ್ಪಾ) ವಿರುಪಾಕ್ಷಪ್ಪಾ ಮದವಾಲ (ಅಲ್ಲನ್ನವರ) ತಮ್ಮ 76ನೇಯ ವಯಸ್ಸಿನಲ್ಲಿ ಅಲ್ಪ ಕಾಲದ ಅನಾರೋಗ್ಯಕ್ಕೆ ತುತ್ತಾಗಿ ಇದೇ ಸೋಮವಾರ ದಿ.3ರಂದು ಬೆಳಗಿನ ಜಾವ ನಿಧನರಾದರು. ಮೃತರು ತಮ್ಮ ಬದುಕಿನ ದಿನಗಳಲ್ಲಿ  ಆಧುನಿಕ ಕೃಷಿಪಧ್ಧತಿ ಅನುಸರಿಸಿ ಬೆಳೆಗಳನ್ನು ಬೆಳೆಯುತ್ತಿದ್ದರು. ಸರಳ ಸೌಜನ್ಯತೆ ಮತ್ತು ಪ್ರಾಮಾಣಿಕತೆಯ ಬದುಕು ತಮ್ಮದಾಗಿಸಿಕೊಂಡಿದ್ದರಲ್ಲದೆ, ಮೃದು ಮತ್ತು ವಿನಯಶೀಲತೆಯಿಂದ ಎಲ್ಲರ ಹೃದಯ ಗೆದ್ದವರಾಗಿದ್ದರು. ಶ್ರೇಷ್ಠ ಕೌಟುಂಭಿಕ ಹಿನ್ನೆಲೆಯಿರುವ ಇವರು ಅಪಾರ ಬಂಧು ಬಳಗ ಹೊಂದಿದ್ದಾರೆ.

 ಸೋಮವಾರ ನಡು ಹಗಲಿನ 1 ಗಂಟೆಗೆ ಸ್ವಗ್ರಾಮದಲ್ಲಿ ಜರುಗಿದ ಅಂತ್ಯಕ್ರಿಯೆಯಲ್ಲಿ ದುಖ ತಪ್ತ ಸಾವಿರಾರು ಸಂಖ್ಯೆಯ ರಾಜಕೀಯ ಧುರೀಣರು, ಉದ್ಯಮಪತಿಗಳು, ವಿವಿಧ ಸಂಘ ಸಂಸ್ಥೆಗಳ  ಪ್ರತಿನಿಧಿಗಳು,ವಿವಿಧಸಂಘಟಣೆಗಳ ಪದಾಧಿಕಾರಿಗಳು, ಬಂಧು ಬಳಗ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರಲ್ಲದೆ, ಶ್ರಧ್ದಾಂಜಲಿ ಅರ್ಪಿಸಿದರು.

ಇವರ ಅಂತ್ಯಕ್ರಿಯೆಯು  ಸ್ವಗ್ರಾಮದಲ್ಲಿ  ಸೋಮವಾರ   ನಡು ಹಗಲಿನ 1 ಘಂಟೆಗೆ  ಅಪಾರ ಸಂಖ್ಯಯ   ಬಂಧು ಬಳಗ ಮತ್ತು ಅಭಿಮಾನಿಗಳ ಉಪಸ್ತಿತಿಯಲ್ಲಿ ನೆರವೇರಿತು.

ಮೃತರು ತಮ್ಮ ಹಿಂದೆ  ಪತ್ನಿ, ಈರ್ವರು ಗಂಡು ಓರ್ವ ಪುತ್ರಿ ಅಲ್ಲದೆ ಅಪಾರ ಮೊಮ್ಮಕ್ಕಳು ಮತ್ತು ,ಬಂಧು ಬಳಗ ಅಗಲಿದ್ದಾರೆ. . ಮೃತರ ಶಿವ ಗಣಾರಧನೆಯನ್ನು ಗುರುವಾರ ದಿ.6  ರಂದು  ಅಂಕಲಗಿಯ ಸ್ವಗೃಹದಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಕುಟುಂಭದ ಮೂಲಗಳಿಂದ ತಿಳಿದು ಬಂದಿದೆ

loading...

LEAVE A REPLY

Please enter your comment!
Please enter your name here