ಗುರಿಮುಟ್ಟಲು ವಿದ್ಯಾರ್ಥಿಗಳಿಂದ ನಿರಂತರ ಪ್ರಯತ್ನ ಅಗತ್ಯ

0
26
loading...

ಚನ್ನಮ್ಮನ ಕಿತ್ತೂರ 26 : ಕೇವಲ ಪರೀಕ್ಷೆ ಪಾಸಾಗುವ ಉದ್ದೇಶದಿಂದ ವಿದ್ಯಾರ್ಥಿಗಳು ಓದದೇ ವಿಷಯ ಅರಿತುಕೊಂಡು ಓದುವಂತೆ ಬೈಲಹೊಮಗಲ ಉಪವಿಭಾಧಿಕಾರಿ ಮೇಜರ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

ಇಲ್ಲಿಯ ಕಿತ್ತೂರನಾಡ ಲಿಂಗವಂತ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರ. ಅವರು ಕಿತ್ತೂರ ಭಾಗದ ಯಾವದೇ ವಿದ್ಯಾರ್ಥಿಯು ಶೂರ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಚನ್ನಮ್ಮಕ್ಕಿಂತಲೂ ಕಡಿಮೆಯಿಲ್ಲ ನೀವು ಈ ಪವಿತ್ರ ಭೂಮಿಯಲ್ಲಿ ಹುಟ್ಟಿದ್ದಿರಿ ಮತ್ತು ವಿದ್ಯಾರ್ಥಿಗಳಿಗೆ ನೀವು 21 ನೇ ಶತಮಾನದ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಚನ್ನಮ್ಮ ಎಂದು ಸಂಬೋಧಿಸಿದರು.

ವಿದ್ಯಾರ್ಥಿಗಳು ತಮ್ಮ ಆಸೆಗಳನ್ನು ಬಲಪಡಿಸಿಕೊಂಡು ಏಕಾಗ್ರತೆಯಿಂದ ಸಮಗ್ರವಾಗಿ ಅಧ್ಯಯನ ಮಾಡಿದರೇ ಯಶಸ್ಸು ಖಂಡಿತವಾಗಿ ನಿಮ್ಮ ಪಾಲಾಗುತ್ತದೆ ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ರಾಜಯೋಗೀಂದ್ರ ಶ್ರೀಗಳು ಮಾತನಾಡಿ ಯಾವ ವಿದ್ಯಾರ್ಥಿಯಲ್ಲಿ ಜ್ಞಾನದ ಹಸಿವು ಇದೇವೊ ಅವರು ಯಶಸ್ಸುಗಳಿಸಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಬೈಲಹೊಂಗಲ ಉಪವಿಭಾಧಿಕಾರಿ ಸಿದ್ದಲಿಂಗಯ್ಯ ಹಿರೇಮಠ, ಪ್ರೊ ಶ್ರೀಕಾಂತ ದಳವಾಯಿ ಹಾಗೂ ಪ್ರಾಚಾರ್ಯ ಎನ್ ಎಸ್ ಗಲಗಲಿ ಅವರನ್ನು ಗೌರವಿಸಲಾಯಿತು. ಪ್ರಾಚಾರ್ಯ ಎನ್  ಎಸ್ ಗಲಗಲಿ ಸ್ವಾಗತಿಸಿದರು, ದೈಹೀಕ ಶಿಕ್ಷಣ ನಿರ್ದೇಶಕ ಎಂ ಜಿ ಹಿರೇಮಠ ವಂದಿಸಿದರು. ಪ್ರೊ ಶ್ರೀಕಾಂತ ದಳವಾಯಿ ನಿರೂಪಿಸಿದರು. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಚ್ ಕೆ ನಾಗರಾಜ ವಂದಿಸಿದರು.

ವೇದಿಕೆಯಲ್ಲಿ ನಿರ್ದೇಶಕ ಸಿ ಜಿ ದಳವಾಯಿ, ಎಂ ಬಿ ದಳವಾಯಿ, ಉಪಾಧ್ಯಕ್ಷ ಎಸ್ ಸಿ ಬಿಕ್ಕಣ್ಣವರ, ಕಾರ್ಯದಶಿ ಆರ್ ವಾಯ್ ಪರವಣ್ಣವರ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಅನೀಲ ಕಾಮಕರ  ಹಿರಿಯ ನಿರ್ದೇಶಕ ಜಗದಿಶ ವಸ್ತ್ತ್ರದ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here