ಜೂಜಾಟ: 8 ಜನರ ಬಂಧನ

0
13
loading...

ಗೋಕಾಕ 17- ತಾಲೂಕಿನ ಉಪ್ಪಾರಟ್ಟಿ ಗ್ರಾಮದ ಭಗೀರಥ ಸರ್ಕಲ್ದಲ್ಲಿ ಜೂಜಾಟದಲ್ಲಿ ತೊಡಗಿದ್ದ ತಂಡವೊಮದರ ಮೇಲೆ ಶನಿವಾರ ಸಂಜೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ, 8 ಜನರನ್ನು ಬಂಧಿಸಿ ಅವರಿಂದ 5100 ರೂ.ನಗದು ಹಣ ವಶಪಡಿಸಿಕೊಂಡಿದ್ದಾರೆ.

ಉಪ್ಪಾರಟ್ಟಿ ಗ್ರಾಮದ ಭಗೀರಥ ಸರ್ಕಲ್ದಲ್ಲಿ ರಾಜಾರೋಷವಾಗಿ ಜೂಜಾಟದಲ್ಲಿ ತೊಡಗಿದ್ದ ಅರ್ಜುನ ಸವತಿಕಾಯಿ, ಕರೆಪ್ಪ ಕೊಳವಿ, ಲಕ್ಷ್ಮಣ ತಿಗಡಿ, ವಿಠ್ಠಲ ಕೊಳವಿ, ಲಕ್ಷ್ಮಣ ಭೀಮಪ್ಪ ತಿಗಡಿ, ಶಂಕರ ಕಿಚಡಿ, ಭೀಮಪ್ಪ ವ್ಯಾಪಾರಕಿ, ಅಡಿವೆಪ್ಪ ಕೊಳವಿ ಎಂಬ 8 ಜನರ ಮೇಲೆ ಗೋಕಾಕಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ  ಎಲ್.ಆರ್. ಮಸಗುಪ್ಪಿ ಮತ್ತು ಸಿಬ್ಬಂದಿ ವರ್ಗ ದಾಳಿ ನಡೆಸಿ ಬಂಧಿಸಿದ್ದಾರೆ.

ಈ ಬಗ್ಗೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

loading...

LEAVE A REPLY

Please enter your comment!
Please enter your name here