ದಾವೆಗಳ ರಾಜಿಗೆ ನ್ಯಾಯಾಲಯ ಉತ್ತೇಜಿಸುತ್ತದೆ – ಈಶ್ವರ

0
13
loading...

ಬನಹಟ್ಟಿ,21-ಯಾವುದೇ ದಾವೆಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಮುಂದಾದರೆ ನ್ಯಾಯಾಲಯ ಅದಕ್ಕೇ ಉತ್ತೇಜನ ನೀಡುವುದಲ್ಲದೇ ನ್ಯಾಯಾಲಯಕ್ಕೆ ತುಂಬಿದ ಫೀ ಹಣವನ್ನು ಮರಳಿಸಲು ಅವಕಾಶವಿದೆ ಎಂದು ಬನಹಟ್ಟಿಯ ಸಿವಿಲ್ ನ್ಯಾಯಾಧೀಶ ಈಶ್ವರ ಹೇಳಿದರು.

ಅವರು ರಬಕವಿಯ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬ ನಾಗರೀಕನಿಗೂ ಕನಿಷ್ಠ ಮಟ್ಟದಾದರೂ ಕಾನೂನಿನ ಅರಿವು ಇದ್ದರೆ ಅಪರಾಧ ಕಡಿಮೆಯಾಗುತ್ತವೆ ಎಂದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಕೆ. ಡಿ. ತುಬಚಿ ನೋಂದಣಿ ಕಾಯ್ದೆಯ ಬಗ್ಗೆ, ಹಿರಿಯ ನ್ಯಾಯವಾದಿ ಎಂ. ಜಿ. ಕೆರೂರ ಮಹಿಳೆ ಮತ್ತು ಆಸ್ತಿಯ ಹಕ್ಕು ಕುರಿತು ಕಾನೂನಿನ ಅರಿವು ಕುರಿತು ಮಾತನಾಡಿದರು.

ರಬಕವಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಿ. ಎಂ. ಮಟ್ಟಿಕಲಿ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಬಸವರಾಜ ತೆಗ್ಗಿ, ನಗರಸಭಾ ಸದಸ್ಯ ರವಿ ಶಿರಗಾರ, ನಿವೃತ್ತ ಪ್ರಾಚಾರ್ಯ ಡಿ. ಕೆ. ಅರಬಳ್ಳಿ, ಸುರೇಶ ಗೊಳಸಂಗಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಿದಾನಂದ ಸೋಲ್ಲಾಪುರ, ಶಿವಾನಂದ ಬಾಗಲಕೋಟಮಠ, ಹಿರಿಯರಾದ ನಾಗಪ್ಪಣ್ಣ ಸಜ್ಜನವರ, ಬಸವರಾಜ ಜವಾರಿ, ಬಸವರಾಜ ಭಿಲವಡಿ ಆಗಮಿಸಿದ್ದರು. ಶಿವಾನಂದ ಜವಾರಿ ಸ್ವಾಗತಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ವೆಂಕಟೇಶ ನಿಂಗಸಾನಿ ನಿರೂಪಿಸಿದರು. ಕೊನೆಗೆ ಎಸ್. ಎಸ್. ಷಣ್ಮುಖ ವಂದಿಸಿದರು.

loading...

LEAVE A REPLY

Please enter your comment!
Please enter your name here