ನಿವೃತ್ತ ಅಧಿಕಾರಿಗಳು-ಶಿಕ್ಷಕರ ಗಮನಕ್ಕೆ

0
15
loading...

ಬೆಳಗಾವಿ 17- ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಮಲ್ಲೇಶ್ವರ ಬೆಂಗಳೂರು ಅವರ ವತಿಯಿಂದ ನಡೆಸುತ್ತಿರುವ ಶಾಲೆಗಳ ಸಮಗ್ರ ಮೌಲ್ಯಾಂಕನವನ್ನು ಬಾಹ್ಯ ಮೌಲ್ಯಾಂಕನಕಾರದಿಂದ ನಡೆಸಲು ಚಿಕ್ಕೌಡಿ ಶೈಕ್ಷಣಿಕ ಜಿಲ್ಲೆಯ ನಿವೃತ್ತ ಅಧಿಕಾರಿಗಳು, ನಿವೃತ್ತ ಶಿಕ್ಷಕರು ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತಿತಿತಿಛಿಠರಟಜಜಣಛಿಚಿಣಠ.ಞಚಿಡಿ.ಟಿಛಿ.ಟಿ ಚಿಟಿಜ ತಿತಿತಿ.ಜಜಛ.ಞಚಿಡಿ.ಟಿಛಿ.ಟಿ ವೆಬ್ ಸೈಟ್ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 19 ಇರುವುದು. ಅರ್ಜಿಗಳ ಪರೀಶೀಲನೆ, ಆನ್ಲೈನ್ನಲ್ಲಿ ನೋಂದಾಯಿಸಿಕೊಂಡ ಅಭ್ಯರ್ಥಿಗಳ ಪರೀಶೀಲನೆ, ಪರೀಕ್ಷೆ ಬರೆಯಲು ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾವಾರು ಸೆಪ್ಟೆಂಬರ್ 21 ರೊಳಗೆ ನೀಡಲಾಗುವುದು. ಬೆಳಗಾವಿ ಜಿಲ್ಲಾ ಡಯಟ್ ಕೇಂದ್ರಗಳಲ್ಲಿ ಆಯ್ಕೆ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯು ಇದೇ ಸೆಪ್ಟೆಂಬರ್ 30 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕೆಂದು ಚಿಕ್ಕೌಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here