ಬಿ.ಜೆ.ಪಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0
17
loading...

ಬೈಲಹೊಂಗಲ, 11- ತಾಲೂಕಿನ ನೇಸರಗಿಯಲ್ಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಮಂಗಳವಾರ ಚಾಲನೆ ನಿಡಲಾಯಿತು.

ಅಭಿಯಾನವು ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಉಪಾಧ್ಯಕ್ಷರುಗಳಾದ ಮಹಾಂತೇಶ ಕೂಲಿನವರ ಹಾಗೂ ಆನಂದ ಭಾವಿಕಟ್ಟಿ ನೇತೃತ್ವದಲ್ಲಿ ಪ್ರಾರಂಭವಾಯಿತು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರುಗಳು ಬೇರು ಮಟ್ಟದಿಂದಲೇ ಪಕ್ಷ ಸಂಘಟನೆಗೆ ಅಡಿಪಾಯ ಹಾಕಬೇಕಾಗಿದ್ದು, ಕಾರ್ಯಕರ್ತರು ತಮ್ಮ ಹೆಸರು ನೋಂದಾಯಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರ ಬಿ.ಎಫ್. ಕೊಳದೂರ, ಮಹಾಂತೇಶ ಹಿರೇಮಠ, ಸಿ.ಬಿ. ಪಾಟೀಲ್, ಬಸವರಾಜ ಕಾರ್ಗಿ, ಬಸಪ್ಪ ಹಸಬಿ, ತಾ.ಪಂ. ಸದಸ್ಯರುಗಳಾದ ಅಡಿವೆಪ್ಪ ಚಿಗರಿ, ವಿಠಲ ದುರ್ಗನ್ನವರ, ಬಸವರಾಜ ಅಂಗಡಿ, ಬರಮಣ್ಣ ದಂಡಾಪುರ, ಹಿರಿಯರಾದ ವಿಜಯ ಯರಡಾಲ, ಬಸನಗೌಡ ಪಾಟೀಲ್, ಶಿವರಾಯಪ್ಪ ಕಮತಗಿ ಹಾಗೂ ಕಾರ್ತಕರ್ತರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here