ರೋಟರಿ ಕ್ಲಬ್ ಯುವ ಮಾಸಾಚರಣೆ ನಿಮಿತ್ಯ ಟೇಬಲ್ ಟೆನಿಸ್ ಪಂದ್ಯಾವಳಿ

0
22
loading...

ಬಾಗಲಕೋಟೆ  ರೋಟರಿ ಕ್ಲಬ್ ಯುವ ಮಾಸಾಚರಣೆ ನಿಮಿತ್ಯ ಏರ್ಪಡಿಸಿದ್ದ ನಗರ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಬ.ವಿ.ವಿ. ಸಂಘದ ಎಚ್.ಎಸ್.ಕೆ. ಆಸ್ಪತ್ರೆ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡಿದ್ದಾರೆ.

ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಎಸ್.ಎನ್.ಎಂ.ನ. ಮೃದುಲ

 

 

ಅರೋರಾ ಪ್ರಥಮ, ಎಂ. ರಾಘವೇಂದ್ರ ರನರ್ಸ್ಅಪ್, ಮಹಿಳೆಯರ ವಿಭಾಗದಲ್ಲಿ ಬಸವೇಶ್ವರ ಇಂಜನೀಯರಿಂಗ್ ಕಾಲೇಜಿನ ಸಿ.ಎಚ್. ಶ್ರೀದೇವಿ ಪ್ರಥಮ, ಹೇಮಾ ಬಿಂದು ರೆಡ್ಡಿ ರನರ್ಸ್ಅಪ್ ಪ್ರಶಸ್ತಿ ಪಡೆದಿದ್ದಾರೆ. ಪುರುಷರ ವಿಭಾಗದ ಡಬಲ್ಸ್ನಲ್ಲಿ ಮೃದುಲ ಅರೋರಾ, ವೇದನಾಶ ಪ್ರಥಮ, ಬಸವೇಶ್ವರ ಇಂಜನೀಯರಿಂಗ್ ಕಾಲೇಜಿನ ಪ್ರಭು ವೀರಕ್ತಮಠ, ವಿಜಯಕುಮಾರ ಬನ್ನಿಕೊಪ್ಪ ರನರ್ಸಅಪ್ ಮಹಿಳೆಯರ ವಿಭಾಗದಲ್ಲಿ ಎಸ್.ಎನ್.ಎಂ.ನ. ಹರ್ಷಾ ಘಾಯ್ ಸುಧಾ ಜೋಡಿ ಪ್ರಥಮ, ಇಂಜನೀಯರಿಂಗ್ ಕಾಲೇಜಿನ ಅನುಷಾ ದೇಸಾು, ಸಿ.ಎಚ್. ಶ್ರೀದೇವಿ ರನರ್ಸ್ಅಪ್ ಪ್ರಶಸ್ತಿ ಪಡೆದರು.

ಮಿಕ್ಸ್ ಡಬಲ್ಸ್ನಲ್ಲಿ ಮೃದುಲ ಅರೋರಾ, ಕೆ. ಬಿಂದುರೆಡ್ಡಿ ಪ್ರಥಮ, ವಿಜಯಕುಮಾರ ಬನ್ನಿಕೊಪ್ಪ, ಹರ್ಷಾ ಘಾಯ್ ರನರ್ಸ್ಅಪ್ ಪ್ರಶಸ್ತಿ ಪಡೆದರು. ಪ್ರದರ್ಶನ ಪಂದ್ಯದಲ್ಲಿ ರೋಟರಿ ಅಧ್ಯಕ್ಷ ರಾಘವೇಂದ್ರ ದಾಸ, ಕಾರ್ಯದರ್ಶಿ ರವಿ ಪಾಟೀಲ ಪ್ರಶಸ್ತಿ ಹಂಚಿಕೊಂಡರು. ಬಸವೇಶ್ವರ ಇಂಜನೀಯರಿಂಗ್ ಕಾಲೇಜಿನಲ್ಲಿ ನಡೆದ ಪಂದ್ಯವನ್ನ ಬೆಳಿಗ್ಗೆ ಪ್ರಭಾರಿ ಪ್ರಾಚಾರ್ಯ ಎ.ಎಸ್. ಮುಕರ್ತಿಹಾಳ ಉದ್ಘಾಟಿಸಿದರು. ಸಂಜೆ ಡಿ.ಎಸ್.ಪಿ. ವೀರನಗೌಡ ಬಹುಮಾನ ವಿತರಿಸಿ ರೋಟರಿ ಕಾರ್ಯ ಚಟುವಟಿಕೆಯನ್ನ ಕೊಂಡಾಡಿದರು.

ಅಧ್ಯಕ್ಷ ರಾಘವೇಂದ್ರ ದಾಸ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರವಿ ಪಾಟೀಲ ವಂದಿಸಿದರು. ಮಂಜುನಾಥ ಜಾಲವಾದಿ, ಶ್ರೀಮತಿ ಕಸ್ತೂರಿ ವಾಸನದ ಇತರರ ಸಹಕಾರದೊಂದಿಗೆ ಪಂದ್ಯಾವಳಿ ಏರ್ಪಡಿಸಲಾಗಿತ್ತು. ರವಿ ಮಾನೆ, ಚನ್ನಯ್ಯ ಬಳೂಲಮಠ, ಮುಕುಂದ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here