ವಿಶ್ವೇಶ್ವರಯ್ಯನವರ ಸಾಧನೆಗಳು ಸರ್ವಕಾಲಿಕ

0
97
loading...

ಗೋಕಾಕ 15- ಸರ್.ಎಮ್.ವಿಶ್ವೇಶ್ವರಯ್ಯ ಅವರ ಸಾಧನೆಗಳು ಸರ್ವಕಾಲಿಕ ಆದರ್ಶವಾಗಿದ್ದು, ಅವುಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಪಂಚಗಾವಿ ಹೇಳಿದರು.

ಶನಿವಾರ ಇಲ್ಲಿಯ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ಜರುಗಿದ ಇಂಜನೀಯರ್ಸ್ ಡೇ ಕಾರ್ಯಕ್ರಮವನ್ನು ಕೇಕ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿಶ್ವೇಶ್ವರಯ್ಯ ಮಹಾಮೇಧಾವಿ ಹಾಗೂ ಒಳ್ಳೆಯ ಆಡಳಿತಗಾರರಾಗಿದ್ದರು. ಅವರ ಸಾಧನೆಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳು ಇಂತಹ ಮಹಾನ್ಪುರುಷ ಹಾದಿಯಲ್ಲಿ ಸಾಗುವ ಮೂಲಕ ಉತ್ತಮ ನಾಗರಿಕರಾಗುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಡಾ. ರಾಜೇಂದ್ರಪ್ರಸಾದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ವೇದಿಕೆಯಲ್ಲಿ ಪಾಲಿಟೆಕ್ನಿಕ್ ಪ್ರಾಚಾರ್ಯ ಜಿ.ಎಸ್.ಹೊಂಗಲ, ಉಪನ್ಯಾಸಕರಾದ  ಎಚ್.ಎಸ್.ಅಡಿಬಟ್ಟಿ, ಎಲ್.ಆರ್.ಕೋಣಿ, ಪಿ.ಡಿ.ಪಂಚಾಲ ಉಪಸ್ಥಿತರಿದ್ದರು.

ರಾಜೇಶ್ವರಿ ಅಂಗಡಿ ಸ್ವಾಗತಿಸಿದರು. ಸೌಮ್ಯ ಯಕ್ಸಂಬಿ ಕಾರ್ಯಕ್ರಮ ನಿರೂಪಿಸಿದರು. ರೇಖಾ ಗಡಾದ ವಂದಿಸಿದರು.

loading...

LEAVE A REPLY

Please enter your comment!
Please enter your name here