6 ಗ್ರಾಮಗಳಿಗೆ 5.90 ಕೋಟಿ ಅನುದಾನ

0
21

ಗೋಕಾಕ 17- 2012-13ನೇ ಸಾಲಿನ 5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ಅರಭಾಂವಿ ಮತಕ್ಷೇತ್ರದ 6 ಗ್ರಾಮಗಳಿಗೆ ಒಟ್ಟು 5.90 ಕೋಟಿ ರೂ.ಗಳು ಮಂಜೂರಾಗಿದ್ದು ಶೀಘ್ರದಲ್ಲಿಯೇ ಇವುಗಳ ಕಾಮಗಾರಿಗಳು ಆರಂಭವಾಗಲಿವೆ ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಅರಭಾಂವಿ ವಿಧಾನಸಭಾ ಮತಕ್ಷೇತ್ರದ ರಾಜಾಪೂರ, ಖಾನಟ್ಟಿ, ಧರ್ಮಟ್ಟಿ, ಗುಜನಟ್ಟಿ, ಜೋಕಾನಟ್ಟಿ ಮತ್ತು ಹುಣಶ್ಯಾಳ ಪಿಜಿ ಗ್ರಾಮಗಳು ಸುವರ್ಣ ಗ್ರಾಮೋದಯ ಯೋಜನೆಗೆ ಆಯ್ಕೆಯಾಗಿವೆ.

ರಾಜಾಪೂರ ಗ್ರಾಮಕ್ಕೆ 1.74 ಕೋಟಿ ರೂ, ಖಾನಟ್ಟಿಗೆ 0.58 ಕೋಟಿ ರೂ, ಧರ್ಮಟ್ಟಿಗೆ 1.00 ಕೋಟಿ ರೂ, ಗುಜನಟ್ಟಿಗೆ 0.52 ಕೋಟಿ ರೂ, ಜೋಕಾನಟ್ಟಿಗೆ 0.58 ಕೋಟಿ ರೂ ಹಾಗೂ ಹುಣಶ್ಯಾಳ ಪಿಜಿ ಗ್ರಾಮಕ್ಕೆ 1.47 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ.

ಈ ಗ್ರಾಮಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಶೇ 70ರಷ್ಟು ರಸ್ತೆ ಮತ್ತು ಚರಂಡಿಗೆ, ಶೇ 3 ರಷ್ಟು ಘನ ತ್ಯಾಜ್ಯವಸ್ತು ವಿಲೇವಾರಿಗೆ, ಶೇ 2 ರಷ್ಟು ಸೋಲಾರ ಬೀದೀದೀಪ ಅಳವಡಿಸಲು ಮತ್ತು ಶೇ 10 ರಷ್ಟು ಒಂದು ಅಂಗನವಾಡಿ ಕಟ್ಟಡಕ್ಕೆ ಉಳಿದ ಶೇ 15 ರಷ್ಟು ಅನುದಾನದಲ್ಲಿ ಆಧ್ಯತೆ ಹಾಗೂ ಅವಶ್ಯಕತೆ ಮೇರೆಗೆ ಶಾಲಾ ಕಟ್ಟಡ, ಗ್ರಾಮ ಪಂಚಾಯತಿ ಕಟ್ಟಡ, ಗ್ರಂಥಾಲಯ ಕಟ್ಟಡ, ಬಯಲು ರಂಗಮಂದಿರ, ಸಮುದಾಯ ಭವನ ನಿರ್ಮಾಣಕ್ಕೆ ಸುವರ್ಣ ಗ್ರಾಮೋದಯ ಯೋಜನೆಯಡಿಯ ಕಾಮಗಾರಿಗಳಿಗೆ ಅನುದಾನವನ್ನು ವಿನಿಯೋಗಿಸಲಾಗುತ್ತದೆ ಎಂದು ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here