ಎಂ. ಕೆ ಹಿರೇಮಠ ಅವರಿಗೆ ಸನ್ಮಾನ

0
10
loading...

ಕುಂದಗೋಳ,5: ತಾಲೂಕಿನ ಯಲಿವಾಳ ಗ್ರಾಮದಲ್ಲಿ ಗಾಂಧೀಜಿಯ 144 ನೇ ಜಯಂತಿಯ ಅಂಗವಾಗಿ ಸ್ಥಳೀಯ ಜಿ.ಎಸ್. ಎಸ್ ಪ್ರೌಡಶಾಲೆಯ ಸಂಸ್ಥೆಯ ಅಧ್ಯಕ್ಷ ಎಂ. ಕೆ. ಹಿರೇಗೌಡ್ರು ಅವರ ಸೇವೆಯನ್ನು ಗುರುತಿಸಿ ಧಾರವಾಡ ಜಿಲ್ಲಾ ಪಂಚಾಯತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ನಿವೃತ ಶಿಕ್ಷಕ ಎಫ್. ಎಸ್. ಕುಂದಗೋಳ, ಎಸ್. ಎನ್, ಜವಾಯಿ, ವೈ.ಎಂ.ಚಿಕ್ಕನಗೌಡ್ರು, ಜಿ.ಬಿ.ಹುರಕಡ್ಲಿ, ಶ್ರೀಮತಿ ಕೆ. ಸುಚಿತ್ರಾ, ಆರ್. ಎಂ. ಬ್ಯಾಗವಾದಿ, ಕೆ. ಶ್ರೀನಿವಾಸ ಉಪಸ್ಥಿತರಿದ್ದರು.

ಸವಾಯಿ ಗಂಧರ್ವ ಸ್ಮಾರಕ ಭವನಕ್ಕೆ ಪಟ್ಟಣ ಪಂಚಾಯತಿಯ ಹಣ ಬಳಕೆಗೆ ವಿರೋಧ

ಕುಂದಗೋಳ, ಅ 5. ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಸವಾಯಿ ಗಂಧರ್ವ ಸ್ಮಾರಕ ಭವನದ ನಿರ್ಮಾಣಕ್ಕೆ ಪಟ್ಟಣ ಪಂಚಾಯತಿಯ ಹಣವನ್ನು ಬಳಕೆ ಮಾಡಿರುವುದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಿದೆ.

ಸವಾಯಿ ಗಂಧರ್ವ ಸ್ಮಾರಕ ಭವನದ ನಿರ್ಮಾಣಕ್ಕೆ ಸರಕಾರವು 2.9 ಕೋಟಿ ರೂ ಬಿಡುಗಡೆ ಮಾಡಿದ್ದರೂ ಕೂಡ ಅಭಿವೃದ್ದಿ ಕಾರ್ಯಗಳಿಗೆ ಪಟ್ಟಣ ಪಂಚಾಯತಿಗೆ ಬಿಡುಗಡೆಮಾಡಿದ್ದ 96.44 ಲಕ್ಷ ರೂ ಗಳಲ್ಲಿ  ಹಣವನ್ನು  ಬಳಕೆ ಮಾಡಿರುವುದಕ್ಕೆ ಮಲ್ಲಿಕಾರ್ಜುನ ಕಿರೇಸೂರ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು ಸರಕಾರ ಕೂಡಲೇ ಹಣವನ್ನು ಮರಳಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿಯನ್ನು ಮಾಡಿದ್ದಾರೆ.

 

loading...

LEAVE A REPLY

Please enter your comment!
Please enter your name here