ಚಿನ್ನದ ಮಾಂಗಲ್ಯ ಅಪಹರಣ

0
21
loading...

ಗೋಕಾಕ 2- ಶಾಲೆ ಮುಗಿಸಿ ಮನೆಗೆ ಮರಳುತ್ತಿರುವ ಶಾಲಾ ಶಿಕ್ಷಕಿಯ ಚಿನ್ನದ ಮಾಂಗಲ್ಯವನ್ನು ಅಪರಿಚಿತ ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾದ ಘಟನೆ ಶನಿವಾರದಂದು ಸಂಜೆ ನಗರದ ಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ. ಶ್ರೀಮತಿ ಮಂಗಲಾ ರಮೇಶ ರಂಗಾಪೂರ ಎಂಬ ಶಿಕ್ಷಕಿಯು ಶನಿವಾರದಂದು ಶಾಲೆ ಮುಗಿಸಿ ಅಡಿಬಟ್ಟಿಯಿಂದ ಆಗಮಿಸಿ ತಮ್ಮ ಮನೆಗೆ ತೆರಳುತ್ತಿರುವಾಗ ಅಪರಿಚಿತರಿಬ್ಬರು ಕಪ್ಪು ಬಣ್ಣದ ಬಜಾಜ ಪಲ್ಸರ್ ಬೈಕ್ ಮೇಲೆ ಬಂದು ಕೊರಳಲ್ಲಿಯ 40 ಗ್ರಾಂ. ತೂಕದ ಸುಮಾರು 1 ಲಕ್ಷ 20 ಸಾವಿರ ರೂ. ಮೌಲ್ಯದ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here