ಜಮೀನುಗಳಲ್ಲಿ ಕಾಲ ಕಾಲಕ್ಕೆ ಓಷಧಿ, ರಸಗೊಬ್ಬರಗಳನ್ನು ಬಳಸಿ: ಗಣೇಶ

1
24
loading...

ಬ್ಯಾಡಗಿ: ರೈತರು ತಮ್ಮ ಜಮೀನುಗಳಲ್ಲಿ ಕಾಲ ಕಾಲಕ್ಕೆ ಓಷಧಿ ಹಾಗೂ ರಸಗೊಬ್ಬರಗಳನ್ನು ಬಳಸಿ ಅದರೊಂದಿಗೆ ಹೆಚ್ಚು ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸಿ ಉತ್ತಮ ಬೆಳೆ ಪಡೆದು ಆರ್ಥಿಕವಾಗಿ ಸಬಲಾರಗುವಂತೆ ದ್ಯಾನ್ ಸೀಡ್ಸ್ ಕಂಪನೀಯ ಮ್ಯಾನೇಜರ್ ಗಣೇಶ ಶಂಕ್ರಿಕೊಪ್ಪ ಹೇಳಿದರು.

ಬುಧವಾರ ಅವರು ತಾಲೂಕಿನ ಅರಬಗೊಂಡ ಗ್ರಾಮದ ಪ್ರಗತಿಪರ ರೈತ ಮಾಯಪ್ಪ ಕುರುಗುಂದ ಹೊಲದಲ್ಲಿ ಏರ್ಪಡಿಸಲಾಗಿದ್ದ ಗೋವಿನ ಜೋಳ ಬೆಳೆ ಕ್ಷೇತ್ರೌತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಇಂದು ರೈತರು ಹೆಚ್ಚು ಕೊಟ್ಟಿಗೆ ಗೊಬ್ಬರವನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇದರಂದಾಗಿ ಜಮೀನುಗಳಲ್ಲಿಯ ಇಳವರಿ ಕಡಿಮೆಯಾಗಿ ಹೆಚ್ಚು ಫಲ ನೀಡಲಾರವು. ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ 1107 ಗೋವಿನ ಜೋಳದ ತಳಿಗಳ ಬೀಜಗಳನ್ನು ಬಳಸಿದಲ್ಲಿ ಹೆಚ್ಚು ಗೋವಿನ ಜೋಳದ ಉತ್ಪಾದನೆ ಮಾಡಲು ಸಾಧ್ಯವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೈತ ತಿರಕಪ್ಪ ಬಣಕಾರ ಮಾತನಾಡಿ ಪ್ರಸಕ್ತ ವರ್ಷ ಮಳೆ ಕಡಿಮೆಯಾಗಿದ್ದು ಬರಗಾಲದ ಭೀತಿ ರೈತನನ್ನು ಕಾಡುತ್ತಲಿದೆ. ಇಂಥಹ ಸಂದರ್ಭಗಳಲ್ಲಿ ಖಾಸಗಿ ದ್ಯಾನ್ ಸೀಡ್ಸ್ ಕಂಪನೀಯ ಬೀಜಗಳು ಕಡಿಮೆ ತೇವಾಂಸಗಳಿದ್ದರೂ ಕೂಡಾ ಹೆಚ್ಚು ಇಳುವರಿಯನ್ನು ನೀಡುತ್ತಿರುವ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಸುರೇಶ ಭರಡಿ, ಚಂದ್ರಪ್ಪ ಬಣಕಾರ, ನಾಗಪ್ಪ ಕನವಳ್ಳಿ, ಕೋಟೆಪ್ಪ ಕಿಳ್ಳಿ, ನಾಗಲಿಂಗ ಕಮ್ಮಾರ, ಗೂಳಪ್ಪ ಬಣಕಾರ, ಮಲ್ಲನಗೌಡ್ರ ಪಾಟೀಲ, ಶೇಖನಗೌಡ್ರ ಪಾಟೀಲ, ಚಂದ್ರಪ್ಪ ಹಾವೇರಿ, ಅಜ್ಜಪ್ಪ ಬಣಕಾರ, ಚಂದ್ರಪ್ಪ ಕುರಗುಂದ ಉಪಸ್ಥಿತರಿದ್ದರು. ರವಿ ನಾಯಕ ಸ್ವಾಗತಿಸಿದರು. ಗುಡ್ಡಪ್ಪ ನಿರೂಪಿಸಿದರು. ಭರಮಪ್ಪ ಬಣಕಾರ ವಂದಿಸಿದರು.

 

loading...

1 COMMENT

LEAVE A REPLY

Please enter your comment!
Please enter your name here