ತಮಿಳುನಾಡಿಗೆ ನೀರು : ಕರವೇ ಪ್ರತಿಭಟನೆ

0
18
loading...

ಹುಬ್ಬಳ್ಳಿ,5: ರಾಜ್ಯದಲ್ಲಿ ಭೀಕರವಾದ ಬರಗಾಲವಿದ್ದು, ಇಂತಹ ಸಂಧರ್ಭದಲ್ಲಿ ಕರ್ನಾಟಕದ ಕಾವೇರಿ ನದಿಯ 9000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿ ಬಿಡುವ ಮೂಲಕ ಮತ್ತೇ   ಕೇಂದ್ರ ಸರಕಾರದ ಕರ್ನಾಟಕದ ಜನತೆಯ ಜೊತೆ ಮಲತಾಯಿ ಧೋರಣೆಯನ್ನು  ಮಾಡಿದೆ ಎಂದು ನಗರದ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡಿದರು.

ಕೇಂದ್ರ ಸರಕಾರದ ಪ್ರತಿಕೃತಿ ಹಾಗೂ ತಮಿಳನಾಡು ಮುಖ್ಯಮಂತ್ರಿ ಜಯಲಲಿತಾರವರ ಪ್ರತಿಕೃತಿಯನ್ನು ದಹನ ಮಾಡಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ತಡೆದರು.

ಈ ಸಂದರ್ಭದಲ್ಲಿ ಕನಾಟಕದ ರಕ್ಷಣಾ ವೇದಿಕೆಯ ಧಾರವಾಡ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಮೇಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ರಾಜೇಶ್ವರಿ ಸುಂಕದ, ಹುಬ್ಬಳ್ಳಿ ತಾಲೂಕಾ ಅಧ್ಯಕ್ಷ ಅಮೃತ ಇಜಾರಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here