ನವರಾತ್ರಿ ದಸರಾ ಮಹೋತ್ಸವ ಇಂದಿನಿಂದ

0
40
loading...

ಬಂಕಾಪುರ: ಪಟ್ಟಣದ ಅರಾದ್ಯದೈವ ಪೇಟೆ ಯಲ್ಲಮ್ಮ ದೇವಸ್ಥಾನದಲ್ಲಿ ನವರಾತ್ರಿ ದಸರಾ ಮಹೋತ್ಸವವು ವಿಜೃಂಭನೆಯಿಂದ ದಾರ್ಮಿಕ ಪೂಜಾ ಕಾರ್ಯಕ್ರಮ ಮತ್ತು ಸಾಂಸ್ಕ್ತ್ರತೀಕ ಕಾರ್ಯಕ್ರಮಗಳು ಜರಗುತ್ತವೆ.

ದಿ:16ರ ಮಂಗಳವಾರ ಶ್ರೀ ರೇವಣಶಿದ್ದೆಶ್ವರ ಶೀವಾಚಾರ್ಯ ಸ್ವಾಮಿಗಳು ಅರಳೆಲೆ ಹಿರೇಮಠ ಇವರಿಂದ ಘಟಸ್ಥಾಪನೆ ಮತ್ತು ದೀಪಾರಾದನೆ ಮತ್ತು ಮಹಾಪೂಜಾ ಕಾರ್ಯಕ್ರಮ.17ರ ಬುದವಾರ ರಾತ್ರಿ 11ಕ್ಕೆ ಜಗದ್ಗುರು ಪಂಚಾಚಾರ್ಯ ಭಜನಾಸಂಘ ಬಂಕಾಪುರ ಇವರಿಂದ ಭಕ್ತಿ ಮತ್ತು ತತ್ವಪದಗಳ ಭಜನ ಕಾರ್ಯಕ್ರಮ ಅಹೋರಾತ್ರಿಯವರೆಗೂ ಜರಗುತ್ತವೆ.

18ರ ಗುರುವಾರ ರಾತ್ರಿ 8ಘಂಟೆಗೆ ಕನ್ನಡ ಮತ್ತು ಸಂಸ್ಕ್ತ್ರತಿ ಇಲಾಖೆ ಹಾವೇರಿ ಹಾಗೂ ದೇವಸ್ಥಾನ ಸಮಿತಿಯ ಸಂಯೋಗದಲ್ಲಿ ಶ್ರೀ ಚನ್ನಕೇಶವ ಡೋಳ್ಳಿನ ಸಂಘ ಗುಡ್ಡದ ಚನ್ನಾಪೂರ ಇವರಿಂದ ಜಾನಪದ ಮತ್ತು ಡೋಳ್ಳಿನ ಪದ ಕಾರ್ಯಕ್ರಮ ಜರಗುವದು.20ರ ಶನಿವಾರ ರಾತ್ರಿ 8ಕ್ಕೆ ಆಸುಕವಿ ಜಗದೀಶ ಹುರಳಿ ಇವರಿಂದ ತಿಳಿ ಅಳಿ ಉಳಿ ಪ್ರವಚನ ಮತ್ತು ತತ್ವಪದ ಕಾರ್ಯಕ್ರಮ ಜರಗುವದು. 21ರ ರವಿವಾರ ರಾತ್ರಿ 8ಕ್ಕೆ ಖ್ಯಾತ ಜಾನಪದ ದೋಡ್ಡಾಟ ಕಲಾವಿದ ಬಸವರಾಜ ಶಿಗ್ಗಾಂವಿ ಕ್ಯಾಲಕೊಂಡ ಕಲಾ ತಂಡದಿಂದ ಜಾನಪದ ಕಾರ್ಯಕ್ರಮ ಜರುಗುವದು. 22ರ ಸೊಮವಾರ ರಾತ್ರಿ 8ಕ್ಕೆ ದುರ್ಗಾಷ್ಠಮಿ ನಿಮಿತ್ಯ ಹೋಮ, 23ರ ಮಂಗಳವಾರ ಆಯುದ ಪೂಜೆ ಮತ್ತು 24 ಬುದವಾರ ದಸರಾ ಕೊನೆಯ ದಿನ ರಾತ್ರಿ10ಕ್ಕೆ ದೇವಿಯ ರಥೊತ್ಸವ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿಕೊಂಡು ಬರುತ್ತಿದ್ದು ದೇವಿ ಬಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆ ಮೂಲಕ ವಿನಂತಿಸಿದೆ.

 

loading...

LEAVE A REPLY

Please enter your comment!
Please enter your name here