ನಿರ್ಲಕ್ಷ್ಯಕ್ಕೊಳಗಾದ ಕ್ರೀಡಾಂಗಣ : ಬಿಡಾಡಿ ಪ್ರಾಣಿಗಳ ತಾಣವಾಗಿ ನಿರ್ಮಾಣ

0
21
loading...

ವಿಶೇಷ ವರದಿ; ಪ್ರಕಾಶ ಎಸ್.ಸುಣಗಾರ.

            ಬೀಳಗಿ-12. ಇಂದಿನ ಯುವಕರು ಮುಂದಿನ ಪ್ರಜೆಗಳು ಮತ್ತು ಯುವಕರು ಕ್ರೀಡೆಯಲ್ಲಿ ಅಂತರಾಷ್ಟ್ತ್ರೀಯ ಮಟ್ಟದವರೆಗೆ ಬೆಳೆಯಬೇಕು ಎಂದು ತಂದೆ ತಾಯಿಗಳ ಆಸೆಯಾಗಿರುತ್ತದೆ. ಮತ್ತು ಇಂದಿನ ಯುವಕರು ದುಷ್ಚಟಕ್ಕೆ ಬಲಿಯಾಗುತ್ತಿರುವ ವಿಷಯ ಸರ್ವಸಾಮಾನ್ಯ ಎಲ್ಲರಿಗೂ ಗೋತ್ತು. ಈ ವಿಷಯವಾಗಿ ಯುವಕರು ದುಷ್ಚಟಕ್ಕೆ ಬಲಿಯಾಗದೆ ಅವರಿಗೆ ಕ್ರೀಡಾ ಮನೋಭಾವ ಬೆಳೆಸಲು ಒಂದು ಕ್ರೀಡಾಂಗಣ ಅವಶ್ಯಕವಾಗಿದೆ. ಆಗ ಯುವಕರಲ್ಲಿ ಕ್ರೀಡೆಯ ಬಗ್ಗೆ ಒಲವು ಮೂಡುವುದು ಈ ಮನೋಭವದಿಂದ  ಬೀಳಗಿ ಸ್ಥಳಿಕವಾಗಿ ಒಂದು ಭವ್ಯ ಕ್ರೀಡಾಂಗಣ ನಿರ್ಮಾಣ ಮಾಡಲು ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣಕ್ಕೆ 60 ಲಕ್ಷ ಹಣ ಮಂಜೂರಾತಿ ಬಂದಿದೆ. ಕ್ರೀಡಾಂಗಣ ಪೂರ್ಣಗೊಳ್ಳದೆ ಅಪೂರ್ಣವಾಗಿ ಸ್ಥಗಿತಗೊಂಡು ಈಗ ದನ, ಮೇಕೆಗಳ ಅಲೆದಾಡುವ ತಾಣವಾಗಿ ಮತ್ತು ಅನೈತಿಕ ಚಟುವಟಿಕೆಯ ತಾಣವಾಗಿ ನಿರ್ಮಾಣವಾಗಿದೆ…

ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲವಂತೆ ಎಂಬ ಗಾದೆಗೆ ಅನ್ವಯವಾಗುವಂತೆ ಬೀಳಗಿ ಮತಕ್ಷೇತ್ರದ ಶಾಸಕ, ಸಚಿವ ಮುರುಗೇಶ ಆರ್. ನಿರಾಣಿಯವರ ಆಶಯವಾಗಿರುವ ತಾಲೂಕ ಕ್ರೀಡಾಂಗಣ ನಿರ್ಮಿಸಲು 4 ಎಕರೆ ಭೂಮಿ ನೀಡಿ ಸರಕಾರ 60 ಲಕ್ಷ ಹಣ ಮಂಜೂರಿ ಮಾಡಿದೆ ಅದನ್ನು ಸರಿಯಾದ ರೀತಿಯಲ್ಲಿ ಬಳಸದೆ ಈ ಕೆಳಗಿನ ಎರಡು ಇಲಾಖೆಗಳ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಬಾಗಲಕೋಟ ಮತ್ತು ಇದರ ನಿರ್ಮಾಣವನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ. ನಿ ಜಮಖಂಡಿ ಇವರಿಗೆ ವಹಿಸಿದ್ದರು ಅವರು ಕ್ರೀಡಾಂಗಣದ ನಿರ್ಮಾಣ ಅಪೂರ್ಣ ನಿರ್ಮಿಸಿ ಸ್ಥಗಿತ ಗೊಳಿಸಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ. ನಿ ಜಮಖಂಡಿ ಈ ಇಲಾಖೆಯ ಉಪ ವಿಭಾಗಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನಾವು 60 ಲಕ್ಷ ಹಣದ ಕೆಲಸ ಪೂರ್ಣ ಮಾಡಿ ಕ್ರೀಡಾಂಗಣವನ್ನು  ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಬಾಗಲಕೋಟ ಇವರಿಗೆ ವಹಿಸಿದ್ದೇವೆ ಎಂದು ಹೇಳುವರು. ನಂತರ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ಧೇಶಕರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ಇನ್ನು ಅವರು ನಮ್ಮ ಇಲಾಖೆಗೆ ಕ್ರೀಡಾಂಗಣ ಕೆಲಸ ಪೂರ್ಣ ಮಾಡಿ ನಮಗೆ ವಹಿಸಿದ ಯಾವದು ಪತ್ರವು ನೀಡಿಲ್ಲಾ ಎಂದು ಹೇಳುವರು. ಈ ಎರಡು ಇಲಾಖೆಯ ಕಿತ್ತಾಟದಲ್ಲಿ ಇಂದು ಈ ಕ್ರೀಡಾಂಗಣ ಹಾಳುಕೊಂಪೆಯಾಗಿ ಪರಿವರ್ತನೆ ಯಾಗಿದೆ.  ಆದರೂ ಇದರ ಉದ್ಘಾಟನೆಯನ್ನು ದಿನಾಂಕ 18-01-2012 ರಂದು ಆಗಿನ ಮಾನ್ಯ ಮಂತ್ರಿಗಳಾದ ಡಿ.ವಿ.ಸದಾನಂದಗೌಡರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಲೋಕಾರ್ಪಣೆಯಾಗಿದೆ. ಅಂದು ಆ ಕ್ರೀಡಾಂಗಣದ ಕೆಲಸ ಅಪೂರ್ಣವಾಗಿತ್ತು ಇಂದಿಗೂ ಕೂಡಾ ಅದೇ ರೀತಿಯಲ್ಲಿದೆ ಈ ಕ್ರೀಡಾಂಗಣಕ್ಕೆ ಸಂಬಂಧ ಪಟ್ಟ ಅಧಿಕಾರಿಗಳೂ ಉದ್ಘಾಟನೆ ದಿನ ಬಂದು ಹೋದವರು ಇಂದಿಗೂ ಈ ಕ್ರೀಡಾಂಗಣದ ಕಡೆ ಕಣ್ಣು ಕೂಡಾ ಹಾಯಿಸಿಲ್ಲಾ, ಯಾವ ಚಿಂತನೆಯನ್ನು ಮಾಡಿಲ್ಲಾ ಈ ಕ್ರೀಡಾಂಗಣದಲ್ಲಿ ಜಾಲಿ ಗಿಡಗಳು ಮರವಾಗಿ ಬಹಳಷ್ಟು ಬೆಳದಿವೆ, ಮತ್ತು ಇಲ್ಲಿರುವ ಶೌಚಾಲಯ, ಆಫೀಸ ಕೋಣೆ, ಕ್ರೀಡಾ ಪಟುಗಳ ಕೋಣೆಗಳು ಕಿಡಕಿಗಳು, ಶೌಚಾಲಯದ ಪೈಪುಗಳು ಒಡೆದು ಹೋಗಿದೆ. ಇದನ್ನು ಕೇಳುವವರು ಯಾರು ಇಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ದಿನವು ದನಕರುಗಳು, ಕುರಿ ಮೇಕೆಗಳು ಮೈಯುತ್ತವೆ. ದನಕಾಯುವವರಿಗೆ ಈ ಕ್ರೀಡಾಂಗಣ  ಒಳ್ಳೆಯ ತಾಣವಾಗಿದೆ. ಇಲ್ಲಿರುವ ಕೋಣೆಗಳಲ್ಲಿ ಬಲ್ಬ, ಟೂಬ ಲೈಟಗಳು ಒಡೆದು ಹೋದರು ಇದನ್ನು ವಿಚಾರಿಸಲು ಯಾವ ಅಧಿಕಾರಿಗಳೂ ಇಲ್ಲದಂತಾಗಿದೆ. ಇಲ್ಲಿ ವಿದ್ಯುತ್ತ ಕಂಬದಿಂದ ಎಳೆದ ಸರ್ವಿಸ ವಾಯರ್ ಬೋರ್ಡ  ಕಿತ್ತೌಗಿದೆ. ಮತ್ತು ಕ್ರೀಡಾಂಗಣಕ್ಕೆ ಹೋಗುವ ರಸ್ತೆಯು ಕೂಡಾ ಮುಳ್ಳು ಕಂಟೆಗಳಿಂದ ಕೂಡಿದೆ ಈ ಕ್ರೀಡಾಂಗಣದಲ್ಲಿ ಏನು ನಡೆದರು ಅದನ್ನು ವಿಚಾರಿಸುವವರು ಇಲ್ಲಾ. ಈ ಕ್ರೀಡಾಂಗಣದ ಮುಖ್ಯ ದ್ವಾರಕ್ಕೆ ಒಂದು ಬೀಗವು ಕೂಡಾ ಹಾಕಿಲ್ಲಾ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳದ್ದು ತಪ್ಪೊ ? ಅಥವಾ ಜನಪ್ರತಿನಿಧಿಗಳದ್ದು ತಪ್ಪೊ ? ಗೋತ್ತಿಲ್ಲಾ. ಆದರೆ ಇದರಿಂದ ಕ್ರೀಡಾಪಟುಗಳಿಗೆ ಮತ್ತು ದಿನಾಲೂ ಯೋಗ, ಓಟ ಮಾಡುವ ಯುವಕರಿಗೆ ಮತ್ತು ಸಾರ್ವಜನಿಕರಿಗೆ ಕ್ರೀಡಾಂಗಣ ಉಪಯೋಗವಾಗದೆ ಹಾಳಾಗಿ ಹೋಗುತ್ತಿರುವದು ಶೋಚನಿಯ ವಿಷಯವಾಗಿದೆ.

ಈಗಲಾದ್ರು ಸಂಬಂಧ ಪಟ್ಟ  ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಾಲೂಕಾ ಕ್ರೀಡಾಂಗಣದ ಬಗ್ಗೆ ಮುತವರ್ಜಿ  ವಹಿಸಿ ಸಂಪೂರ್ಣ ವ್ಯವಸ್ಥಿತವಾಗಿಡಬೇಕು. ಯುವಕ್ರೀಡಾಪಟುಗಳಿಗೆ ಉತ್ತೇಜನ ನೀಡುವಂತಾ ಕ್ರೀಡಾಂಗಣವಾಗಬೇಕು. ಎಂಬುವದು ತಾಲೂಕಿನ ಕ್ರೀಡಾಪಟುಗಳ ಆಶಯವಾಗಿದೆ.

loading...

LEAVE A REPLY

Please enter your comment!
Please enter your name here