ಬಾಲ್ಯವಿವಾಹ ಪದ್ಧತಿ ಶಿಕ್ಷಾರ್ಹ ಅಪರಾಧ

0
21
loading...

ಕುಂದಗೋಳ, ಅ.5: 2006 ರ ಬಾಲ್ಯ ವಿವಾಹ ನಿಷೇಧ ಕಾಯ್ದೆಯಂತೆ 18 ವರ್ಷ ತುಂಬದ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷ ದಾಟದ ಗಂಡು ಮಕ್ಕಳಿಗೆ ಮದುವೆ ಮಾಡುವುದು ,ಮಾಡಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಬಸವರಾಜು ಮೆಳವಂಕಿ ಹೇಳಿದರು.

ನಗರದಲ್ಲಿ ಕಾರ್ಯನಿರತ ಪತ್ರಕರ್ತ ಸಂಘ ಮತ್ತು ಧಾರವಾಡ ಕಿಡ್ಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಹಕ್ಕುಗಳ ಸಂರಕ್ಷನೆ ಮತ್ತು ಬಾಲ್ಯ ವಿವಾಹ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಆಟ, ಪಾಠ, ಸುಖ, ಸಂತೋಷದಿಂದ ಶಾಲೆಗಳಿಂದ ಕಲಿಯುವಿಕೆಯಿಂದ , ತಂದೆ-ತಾಯಿಗಳಿಂದ ದೂರವಾಗಿ ಸಂಸಾರವೆಂಬ ಸಮುದ್ರದಲ್ಲಿ ಧುಮಕಲು ಅಶಕ್ತರಾಗಿರುತ್ತಾರೆ.

ಬಾಲ್ಯ ವಿವಾಹ ಅನಿಷ್ಠ ಪದ್ಧತಿ ನಿಯಂತ್ರಿಸಿ ಮಕ್ಕಳಿಗೆ ಉತ್ತಮ ಬಾಲ್ಯ ಮತ್ತು ಬದುಕನ್ನು ಕಲ್ಪಿಸುವಲ್ಲಿ ಅನೆಕ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳು , ಸರಕಾರಿ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದು ಅದನ್ನು ಎಲ್ಲ ಕಡೆ ಕಟ್ಟು ನಿಟ್ಟಾಗಿ ಜಾರಿ ಮಾಡುವಲ್ಲಿ ಎಲ್ಲ ಸಾರ್ವಜನಿಕರ ಸಹಾಯ ಸಹಕಾರ ಅಗತ್ಯ ಎಂದು ಹೇಳಿದರು.

ಸಭೆಯಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಟಿ.ಎಸ್. ಗೌಡಪ್ಪನವರ್ ಮಕ್ಕಳ ರಕ್ಷಣೆ, ಪೋಷಣೆ ಮಾಡುವುದು ತಂದೆ ತಾಯಿಗಳ ಮುಖ್ಯವಾದ  ಕರ್ತವ್ಯ, ಮಕ್ಕಳಿಗೆ ಹೊಡೆದು ಬಡೆದು ಕಿರುಕುಳ ಕೊಡುವುದು, ದುಡಿಸಿಕೊಂಡು ಹೋಗುವುದು ಅಪರಾಧ ಎಂದು ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು.

ಈ ಸಂಧರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎಸ್.ಕೆಳದಿಮಠ ಧಾರವಾಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಶಂಕರ ಲಮಾಣಿ ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here