ಭೀಕರ ಬರಗಾಲದಿಂದ ಬಳಲಿದ ರೈತ

0
20
loading...

ಕುಂದಗೋಳ, ಅ.4:  ತಾಲೂಕಿನ ಗುಡೇನಕಟ್ಟಿ ಗ್ರಾಮದಾದ್ಯಂತ ಎರಡು ವರ್ಷಗಳಿಂದ ಭೀಕರ ಬರಗಾಲವಿದ್ದು  ರೈತರು ತಮ್ಮ ವಾಸ್ತು ಸ್ಥಿತಿಯನ್ನು ಕಳೆದುಕೊಂಡಿದ್ದು ಮಳೆ ಇಲ್ಲದೇ ಬೆಳೆ ಇಲ್ಲದೇ ರೈತರು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಎಲ್ಲರೂ ವರುಣನ ಆಗಮಕ್ಕೆ ಕಾದು ಕುಳಿತಿದ್ದಾರೆ.

ಬರದಿಂದ ದನಕರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು ರೈತರು ತಾವು  ಮಾಡಲು ಕೆಲಸವಿಲ್ಲದೇ ದೂರದ ಗೋವಾ, ಕೇರಳಗಳಿಗೆ ಕೆಲಸವನ್ನು ಅರಿಸಿ ಹೋಗಿದ್ದು ಸ್ಥಳೀಯರು ದಿನ ನಿತ್ಯ ಕೂಲಿ ಮಾಡಲು ಹುಬ್ಬಳ್ಳಿ ಗೆ ಪ್ರಯಾಣ ಮಾಡುತ್ತಿದ್ದಾರೆ.

ಈ ರೀತಿಯ ಬರಗಾಲದ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಭೇಟ್ಟಿ ನೀಡಿ ಹೊದರೂ ಕೂಡಾ ರೈತರಿಗೆ  ಯಾವುದೇ ರೀತಿಯ ಅನೂಕೂಲ ಉಂಟಾಗಿಲ್ಲ.

ತಾಲೂಕಿನ ಗ್ರಾಮ ಪಂಚಾಯತಿ ಮಟ್ಟದಲ್ಲಿ ಉದ್ಯೌಗ ಖಾತರಿ ಯೋಜನೆಯ ಕಾರ್ಯವು 22 ಪಂಚಾಯತಿಗಲಲ್ಲಿ ಕೇವಲ 4 ಪಂಚಾಯತಿಗಳಲ್ಲಿ ಕೆಲಸ ನೆಡೆದಿದ್ದು ಇನ್ನೂಳಿದ  ಪಂಚಾಯತಿಗಳಲ್ಲಿ ಕೆಲಸಯಿಲ್ಲದೇ ಜನರು ಗೂಳೆ ಹೋಗುತ್ತಿದ್ದಾರೆ.ತಾಲೂಕಿನ 18 ಹಳ್ಳಿಗಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಜಿಲ್ಲಾದಂಡಾಧಿಕಾರಿಗಳ ಆದೇಶದಮತೆ ಪ್ರತಿ ಹಳ್ಳಿಗೆ 2 ಟ್ಯಾಂಕ್ ನಿರು ಸರಬರಾಜು ಮಾಡುತ್ತಾರೆ. ಇದರಿಮದ ಕೇಲವರಿಗೆ ನೀರು ಸಿಕ್ಕರೆ ಕೇಲವರಿಗೆ ನೀರು ದೊರೆಯದೇ ತೊಂದರೆ ಉಂಟಾಗುತ್ತಿದೆ.

ಮುಂಗಾರು ಬೆಲೆಸಂಪೂರ್ಣವಾಗಿ ವಿಫಲವಾಗಿದ್ದು ಇಲ್ಲಿಯ ವರೆಗೆ ಬೆಳೆ ವಿಮೆ ಬಂದಿಲ್ಲ, ಇದರಿಂದ ಎಲ್ಲ ರೈತರಿಗೆ ಜೀವನ ಮಾಡಲು ತುಂಬಾನೇ ಕಷ್ಟವಾಗಿದ್ದೂ ರೈತರ ಎಲ್ಲ ಸಮಸ್ಯೆಗಳಿಗೆ ಎಲ್ಲದಕ್ಕೂ ಬೇಗನೆ ವರುಣ ಹಾಗೂ ಸರಕಾರ ನಾಂದಿ ವರುಣ ಹಾಗೂ ಸರಕಾರ ಹಾಡಲಿ ಎಂದು ಹಾರೈಸೋಣ.

loading...

LEAVE A REPLY

Please enter your comment!
Please enter your name here