ಮಹಾತ್ಮ ಗಾಂಧೀಜಿ ಮೌಲ್ಯಗಳು-ಸಿದ್ದಾಂತಗಳು ಸರ್ವಕಾಲಿಕ

0
399
loading...

ಬೆಳಗಾವಿ 2: ಮಹಾತ್ಮ ಗಾಂಧೀಜಿ ಅವರ ಮೌಲ್ಯ ಹಾಗೂ ಸಿದ್ದಾಂತಗಳಾದ ಸತ್ಯ, ಪ್ರೇಮ, ಅಹಿಂಸೆ ಇಂದಿಗೂ ಸಹ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರು ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಬೆಳಗಾವಿ ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ|| ಬಸವರಾಜ ಜಗಜಂಪಿ ಅವರು ಇಂದಿಲ್ಲಿ ಹೇಳಿದರು.

ವಾರ್ತಾ ಇಲಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಶಿಮಹಾತ್ಮ ಗಾಂಧೀಜಿ ಮೌಲ್ಯಗಳು-ಒಂದು ಚಿಂತನೆಷಿ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು ಮಹಾತ್ಮ ಗಾಂಧೀಜಿ ಒಬ್ಬ ಯುಗ ಪುರುಷ. ಅವರ ತತ್ವಗಳು ಹಾಗೂ ಮೌಲ್ಯಗಳು ಸರ್ವಕಾಲಿಕ ಎಂದು ನುಡಿದರು.

ಯಾವುದೇ ಅಧಿಕಾರದ ಆಸೆಯನ್ನು ಹೊಂದದೇ ಹೋರಾಟ ಮಾಡಿದ ಮಹಾನ್ ಜೀವಿ. ರಕ್ತರಹಿತ ಕ್ರಾಂತಿ ಮಾಡಿದ ಅವರೊಬ್ಬ ಚಿಂತಕ, ಶರಣ, ಹೋರಾಟಗಾರ ಹಾಗೂ ಅಹಿಂಸೆಯ ಪ್ರವಾದಿಯಾಗಿದ್ದರು ಎಂದು ಹೇಳಿದ ಅವರು ಪ್ರತಿಯೊಬ್ಬರು ಪ್ರೇಮ ಹಾಗೂ ವಿಶ್ವಾಸದಿಂದ ಬದುಕಬೇಕೆಂಬುದನ್ನು ಕಲ್ಪಿಸಿಕೊಟ್ಟವರು ಮಹಾತ್ಮ ಗಾಂಧೀಜಿ ಎಂದು ಹೇಳಿದರು.

ಮಹಾತ್ಮ ಗಾಂಧೀಜಿ ಒಬ್ಬ ಸರಳ ವ್ಯಕ್ತಿ ಹಾಗೂ ಸರಳ ಜೀವನ ನಡೆಸಿದವರು.  ದುಂಡು ಮೇಜಿನ ಪರಿಷತ್ತಿಗೂ ಸಹ ತಮ್ಮ ಎಂದಿನ ವಸ್ತ್ತ್ರ ಉಡಿಗೆದೊಂದಿಗೆ ಹೋಗಿರುವುದು ಅವರ ಸರಳ ಜೀವನಕ್ಕೆ ಸಾಕ್ಷಿ. ಇಂದು ಪ್ರತಿಯೊಬ್ಬರು ಅವರಂತಹ ಸರಳ ಜೀವನವನ್ನು ಅಸುಸರಿಸಿದರೆ ಯಾವುದೇ ಸಮಸ್ಯೆಗಳಾಗಲಿ ಅಥವಾ ಹಿಂಸಾತ್ಮಕ ಚಟುವಟಿಕೆಗಳಾಗಲಿ ನಡೆಯುವುದಿಲ್ಲ ಎಂದು ನುಡಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಐ.ಜೆ. ಗದ್ಯಾಳ ಅವರು ಮಹಾತ್ಮ ಗಾಂಧೀಜಿ ಅವರು ಅಹಿಂಸೆಯ ಪ್ರತಿಪಾದಕರಾಗಿದ್ದರು. ರಾಮರಾಜ್ಯದ ಕನಸ್ಸು ಕಂಡಿದ್ದ ಅವರು ಪ್ರತಿಯೊಬ್ಬರೊಂದಿಗೆ ಪ್ರೀತಿ ಹಾಗೂ ವಿಶ್ವಾಸದಿಂದ ಬದುಕಿದರು ಎಂದು ಹೇಳಿದರು.

ಮಹಾತ್ಮ ಗಾಂಧೀಜಿ ಅವರ ಮೌಲ್ಯಗಳಿಗೆ ಹಾಗೂ ತತ್ವಸಿದ್ದಾಂತಗಳಿಗೆ ಮಾರು ಹೋಗಿ ಹೊರರಾಷ್ಟ್ತ್ರಗಳು ಸಹ ಅಕ್ಟೌಬರ್ 2 ನ್ನು ಅಂತರರಾಷ್ಟ್ತ್ರೀಯ ಅಹಿಂಸಾ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಆ ಮಹಾ ಚೇತನಕ್ಕೆ ಹೊರ ರಾಷ್ಟ್ತ್ರಗಳು ಸಹ ಕೊಟ್ಟ ದೊಡ್ಡ ಗೌರವಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನುವಹಿಸಿ ಹಾಗೂ ಮದ್ಯಪಾನ ವಿರುದ್ಧ ಮಹಾತ್ಮ ಗಾಂಧಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಹೆಚ್. ಗಂಗರೆಡ್ಡಿ ಅವರು ಗಾಂಧೀಜಿ ಅವರ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಶ್ರೀಮತಿ. ಮಂಗಳಾ ಮಠದ ಹಾಗೂ ಸಂಗಡಿಗರಿಂದ ಗಾಂಧೀಜಿ ಪ್ರೀಯ ಭಜನೆಗಳನ್ನು ಪಠಿಸಲಾಯಿತು. ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ಕಂಬಿ ಅವರು ಪ್ರಾರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಬೆಳಗಾವಿ ವಾರ್ತಾ ಇಲಾಖೆಯ ಅನಂತ ಬಿ. ಪಪ್ಪು ವಂದಿಸಿದರು.

ಜಿಲ್ಲಾ ಆಡಳಿತದಿಂದ ಗಾಂಧಿ ಜಯಂತಿ ಆಚರಣೆ:- ಜಿಲ್ಲಾ ಆಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ಸಹ ಇಂದು ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಐ.ಜೆ. ಗದ್ಯಾಳ ಅವರು  ಉದ್ಘಾಟಿಸಿದರು. ಪ್ರಾರಂಭದಲ್ಲಿ ಶ್ರೀಮತಿ. ಮಂಗಳಾ ಮಠದ ಹಾಗೂ ಸಂಗಡಿಗರಿಂದ ಗಾಂಧೀಜಿ ಪ್ರಿಯ ಭಜನೆಗಳನ್ನು ಪಠಿಸಲಾಯಿತು. ಇದೇ ಸಂದರ್ಭದಲ್ಲಿ ತಹಸೀಲದಾರ ನಸಲಾಪೂರ, ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ಕಂಬಿ ಹಾಗೂ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರಿಶಂಕರಿ ಅವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here