ಮಹಾರಾಷ್ಟ್ತ್ರದ ಗ್ರಾಪಂ ಅಧ್ಯಕ್ಷರುಗಳ ಕನ್ನಡ ಸಂಘಟನೆ

0
32
loading...

ಗೋಕಾಕ 25- ಮಹಾರಾಷ್ಟ್ತ್ರದ ಸಾಂಗ್ಲಿಯ ಎ.ಪಿ.ಎಂ.ಸಿ ಉಪಾಧ್ಯಕ್ಷ ಮಹಾದೇವ ಅಂಕಲಗಿ ನೇತೃತ್ವದಲ್ಲಿ ಜತ್ತ ತಾಲೂಕಿನ 44 ಗ್ರಾ.ಪಂ ಅಧ್ಯಕ್ಷರುಗಳು ಕರ್ನಾಟಕ ರಾಜ್ಯದಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಸೇರ್ಪಡೆಯಾಗುವದರ ಬಗ್ಗೆ ಅಧೀಕೃತ ಘೋಷಣೆ ಮಾಡಿದ್ದಾರೆ.

ಗಡಿ ಪ್ರದೇಶದಲ್ಲಿ ವಾಸವಾಗಿರುವ ಇವರೆಲ್ಲರೂ ಮಹಾರಾಷ್ಟ್ತ್ರ ಸರ್ಕಾರದ ದಿವ್ಯ ನಿರ್ಲಕ್ಷತನಕ್ಕೆ ಬೇಸತ್ತು ಈ ಹಿಂದೆ ಕೈಗೊಂಡ ನಿರ್ಣಯಕ್ಕೆ ಸಂಬಂಧಿಸಿದಂತೆ ಬುಧವಾರದಂದು  ಕರ್ನಾಟಕ ರಾಜ್ಯದಲ್ಲಿ ಯೇ ತಮ್ಮ ಬದುಕನ್ನು ಸಾಧಿಸುವ ಹಿನ್ನೆಲೆಯಲ್ಲಿ ಕರವೇ ನೇತೃತ್ವದ ಮೂಲಕ ಈ ನಿರ್ಧಾರ ಪ್ರಕಟಿಸಿದ್ದಾರೆ.

ಸಾಂಗ್ಲಿ ಕೃಷಿ ಮಾರುಕಟ್ಟೆ ಕಚೇರಿಯಲ್ಲಿ ಎ.ಪಿ.ಎಂ.ಸಿ ಉಪಾಧ್ಯಕ್ಷ ಮಹಾದೇವ ಅಂಕಲಗಿಯೊಂದಿಗೆ ಸಭೆ ನಡೆಸಿ, ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ.

ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಸಾಂಗ್ಲಿ, ಸೋಲಾಪೂರ, ಕೊಲ್ಹಾಪೂರ ಜಿಲ್ಲೆಗಳ ಗಡಿ ಭಾಗದ ಪ್ರದೇಶಗಳಾದ ಜತ್ತ, ಅಕ್ಕಲಕೋಟ, ಗಡಹಿಂಗ್ಲಜ, ಕುರಂದವಾಡ ಸೇರಿದಂತೆ ಅನೇಕ ಪ್ರದೇಶಗಳು, ರಸ್ತೆ, ನೀರು ಸರಬರಾಜು, ಸಾರಿಗೆ, ವಿದ್ಯುತ್ ಪೂರೈಕೆ, ಶೌಚಾಲಯಗಳು ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ಶಿಮಹಾಜನ ವರದಿಯ ನೆಪಹೂಡಿ ಮಹಾಸರಕಾರ ಗಡಿ ಭಾಗದ ಮಹಾ ಕನ್ನಡಿ ಗರನ್ನು ನಿರ್ಲಕ್ಷಿಸುತ್ತಿರುವ ಕ್ರಮವನ್ನು ಸಭೆಯಲ್ಲಿ ಖಂಡಿಸ ಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಂಗ್ಲಿ ಎ.ಪಿ.ಎಂ.ಸಿ ಉಪಾಧ್ಯಕ್ಷ ಮಹಾದೇವ ಅಂಕಲಗಿ ಗಡಿ ಭಾಗದಲ್ಲಿರುವ ಕನ್ನಡಿಗರ ನ್ನು ಮಹಾಸರಕಾರ ಮಹಾಜನ ವರದಿಯ ನೆಪ ಹೂಡಿ ನಿರ್ಲಕ್ಷಿಸುತ್ತ ಬಂದಿದೆ. ಗಡಿ ಭಾಗದಲ್ಲಿರುವ ಮಹಾಕನ್ನಡಿಗರ ಹಿತ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮುಂದಾಗಬೇಕು ಎಂದರು.

ಇದಕ್ಕೆ ಎಲ್ಲ ಕನ್ನಡಪರ ಸಂಘಟನೆಗಳು, ಹೋರಾಟಗಾರರು, ಬುದ್ದಿ ಜೀವಿಗಳು ನಮಗೆ ಸಹಕಾರ ನೀಡಲು ಮುಂದೆ ಬಂದು ಮಹಾಗಡಿಭಾಗದಲ್ಲಿ ಕನ್ನಡಮಯ ವಾತಾವರಣ ಹುಟ್ಟುಹಾಕುವ ಹಿನ್ನೆಲೆಯಲ್ಲಿ ಕನ್ನಡಭವನ, ಅಂಗನವಾಡಿ ಕೇಂದ್ರಗಳಿಗೆ ಪುಸ್ತಕ, ಗ್ರಂಥಾಲಯಗಳನ್ನು ಸೃಷ್ಟಿಸುವಂತೆ ಕನ್ನಡ ಮತ್ತು ಸಂಸ್ಕ್ಕತಿಕ ಇಲಾಖೆ,ಕನ್ನಡ ಪ್ರಾಧಿಕಾರಕ್ಕೆ ಮಹಾಗಡಿಭಾಗದ ಕನ್ನಡಿಗರ ಪರವಾಗಿ ಒತ್ತಾಯಿಸಬೇಕೆಂದರಲ್ಲದೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಮಹಾರಾಜ್ಯದ ಕನ್ನಡಿಗರ ಬಿ.ಎಡ್,ಡಿ.ಎಡ್ ಪರಿಕ್ಷಾರ್ಥಿಗಳು ಕರ್ನಾಟಕದಲ್ಲಿ ಪರೀಕ್ಷೆಗಳನ್ನು ಬರೆಯಲು ಪರವಾನಿಗೆ ನೀಡುವಂತೆ ಸರಕಾರಕ್ಕೆ ಆಗ್ರಹಿಸಿ ಮಹಾಸರಕಾರದಿಂದ ನಿರ್ಲಕ್ಷಕ್ಕೆ ಒಳಗಾದ ಮಹಾಗಡಿ ಕನ್ನಡಿಗರ ಹಿತಕಾಪಾಡುವಲ್ಲಿ ಕರ್ನಾಟಕ ಸರಕಾರ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು ನಮಗೆ ಸಹಕರಿಸಬೇಕೆಂದು ಹೇಳಿದರು.

ಗೋಕಾಕ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ಮಹಾರಾಜ್ಯದ ಗಡಿಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಮಹಾಕನ್ನಡಿಗರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಕರ್ನಾಟಕ ಸರಕಾರಕ್ಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಕನ್ನಡಿಗರ ಮತ್ತು ಮಹಾರಾಜ್ಯ ಗಡಿಭಾಗದ ಕನ್ನಡಿಗರ ಮಧ್ಯೆ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ವರ್ಷದ ಕೊನೆಯಲ್ಲಿ ಜತ್ತ ತಾಲೂಕಿನ ಗುಡ್ಡಾಪೂರದಲ್ಲಿ ಕರವೇ ಯಿಂದ ಶಿಗಡಿನಾಡು ಕನ್ನಡಿಗರ ಜಾಗೃತಿಷಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕೆ ಮಹಾರಾಜ್ಯ ಗಡಿಭಾಗದ ಎಲ್ಲ ಕನ್ನಡಿಗರು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಕೋರಿದರು.

ಈ ಸಂದರ್ಭದಲ್ಲಿ ಕರವೇ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಮುಸ್ತಪ್ಪಾ ಫೀರಜಾದೆ, ಶಂಕರ ಯಮಕನಮರ್ಡಿ, ಪಪ್ಪು ಹಂದಿಗುಂದ, ಮಹಾದೇವ ಮಕ್ಕಳಗೇರಿ, ಜಂಬು ಚಿಕ್ಕೌಡಿ ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here