ರಸ್ತೆ ಕಾಮಗಾರಿ ದುರಸ್ತಿಗಾಗಿ ಆಗ್ರಹ

0
23
loading...

ಹುಬ್ಬಳ್ಳಿ, ಸೆ 29. ಕುಂದಗೋಳ. ತಾಲೂಕಿನ ಅರಳಿಕಟ್ಟಿ ಗ್ರಾಮದ ರಸ್ತೆ ತುಂಬಾ ಹದಗೆಟ್ಟಿದ್ದು ಗ್ರಾಮಸ್ಥರು ಸಂಭದ ಪಟ್ಟ ಅಧಿಕಾರಿಗಳಿಗೆ ಹಲವಾರು ಬಾರೀ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಕಾಮಗಾರಿಗೆ ಹಣವನ್ನು ಮಂಜೂರು ಮಾಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಒಂದು ತಿಂಗಳದಲ್ಲಿ ರಸ್ತೆಯ ದುರಸ್ಥೆ ಕಾರ್ಯವನ್ನು ಪೂರ್ಣ ಗೊಳಿಸಿದ್ದಾರೆ, ಆದರೆ ಇದು ಕಳಪೆ ಕಾಮಗಾರಿಯಾಗಿದ್ದು ರಸ್ತೆ ಪೂರ್ಣ ಪ್ರಮಾಣದಲ್ಲಿ ಕಿತ್ತು ಹೋಗಿದ್ದು ಇದನ್ನು ಯಾವ ಅಧಿಕಾರಿಯು ತಲೆಯೆತ್ತಿ ನೋಡಿಲ್ಲ ಗಮನ ಹರಿಸಿಲ್ಲ. ಸ್ಥಳೀಯ ಜನ ಪ್ರತಿನಿಧಿಗಳು ದಿನ ನಿತ್ಯ ಇದೇ ಹಾದಿಯ ಮುಖಾಂತರ ಓಡಾಡುತ್ತಿರುತ್ತಾರೆ ಆದರೆ ಅವರ ಕಣ್ಣಿಗೂ ಕೂಡ ಈ ಕಳಪೆ ರಸ್ತೆ ಬಿದ್ದಂತೆ ಕಂಡಿಲ್ಲ ಅನ್ನಿಸುತ್ತದೆ.

ಗ್ರಾಮಸ್ಥರು ಸ್ಥಳೀಯ ಶಾಸಕರಿಗೆ, ಮನವಿ ಸಲ್ಲಿಸಿ ಸಾಕಾಗಿದೆ, ಯಾವುದೇ ಉತ್ತರವನ್ನು ನೀಡದೆ ತಮ್ಮ ಕುರುಡು ಜಾನತನ ಪ್ರದರ್ಶಿಸುತ್ತಿದ್ದಾರೆ. ಶೀಘ್ರದಲ್ಲಿ ಈ ರಸ್ತೆ ನಿರ್ಮಾಣದ ಗುತ್ತಿಗೆದಾರರ ಮೆಲೆ ಕಾನೂನು ಕ್ರಮ ಕೈಗೊಂಡು ರಸ್ತೆಯ ನಿರ್ಮಾಣವನ್ನು ಮರು ನಿರ್ಮಾಣ ಮಾಡದೇ ಹೋದರೆ ತಾಲೂಕು ಕಚೇರಿ ಮುಂದೆ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಯಲಿವಾಳ ಮತ್ತು ಅರಳಿಕಟ್ಟಿ ಗ್ರಾಮಸ್ಥರು ಎಚ್ಚರಿಕೆನ್ನು ನೀಡಿದ್ದಾರೆ.

ಈ ಸಂಧರ್ಭದಲ್ಲಿ  ಎಸ್. ಟಿ. ಹಿರೇಗೌಡ್ರು, ಕೆ. ಎನ್. ಜವಾಯಿ, ವಿ. ಎಸ್. ಶೇರೆವಾಡ, ವಿ.ಬಿ.ಚಿಕ್ಕನಗೌಡ್ರು, ಎಂ. ವಿ. ನೂಲ್ವಿ, ವಾಯ್. ಆರ್.ಹಿರೇಗೌಡ್ರು, ಎಸ್. ಡಿ. ಹರಿಜನ, ಜಿ. ಎಂ.ಹರಕುಣಿ, ಎಸ್. ಬಿ. ಅಂಗಡಿ ಮುಂತಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here