ರಾಜ್ಯೌತ್ಸವ ಕನ್ನಡದ ಕಿಚ್ಚು ಹಚ್ಚಲಿ

0
26
loading...

ಧಾರವಾಡ: ಲಿಕನ್ನಡ ಉಳಿಸಿ ಬೆಳೆಸಿಳಿ, ಲಿಕನ್ನಡವೇ ನಮ್ಮ ಉಸಿರಾಗಲಿಷಿ ಎನ್ನುವ ಘೋಷಣೆಗಳ ನಾದ ನಮಗೆ ಕೇಳುವುದು ಕೇವಲ ರಾಜ್ಯೌತ್ಸವದ ದಿನಗಳು ಹತ್ತಿರ ಬಂದಾಗ. ಒಂದೆಡೆ ಕನ್ನಡ ಉಳಿಸಿ ಎಂದು ನಮ್ಮ ರಾಜ್ಯದಲ್ಲೇ ಮೊರೆ ಇಡುವ ಸ್ಥಿತಿ ಉಂಟಾಗಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಇದಕ್ಕಿಂತ ಹೆಚ್ಚಾಗಿ ಕನ್ನಡ ಭಾಷೆಯ ಕತ್ತು ಹಿಸುಕುವ ಕಾರ್ಯ ನಿರಂತರವಾಗಿ ಮುಂದುವರೆದಿದೆ. ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುವ ಚಿಂತನೆ ನಡೆಸಿರುವುದು, ಗಡಿನಾಡು ಪ್ರದೇಶಗಳಲ್ಲಿ ಕನ್ನಡವನ್ನು ಅವಹೇಳನ ಮಾಡುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಕೆಲ ಉದಾಹರಣೆಗಳಷ್ಟೇ..

ಬೆಳಗಾವಿ ಕುರಿತು ಮಹಾರಾಷ್ಟ್ತ್ರ ಏಕೀಕರಣ ಸಮಿತಿ ಕಿರಿಕಿರಿ, ತಂಟೆ, ತಗಾದೆ ಮುಂದುವರಿಯುತ್ತಲೇ ಇದೆ. ಇಂಥ ಸಂದರ್ಭದಲ್ಲಿಯೇ ಕನ್ನಡಿಗರಲ್ಲಿ ಭಾಷಾಭಿಮಾನ, ಕಲೆ, ಕನ್ನಡ ಸಂಸ್ಕ್ಕತಿ, ನಮ್ಮ ಪರಂಪರೆ ಕುರಿತು ಇನ್ನಷ್ಟು ಜಾಗೃತಿ ಮೂಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಕನ್ನಡ ಹೃದಯಗಳು ಬೆಸೆಯವ ವಾತಾವರಣ ನಿರ್ಮಾಣವಾಗಬೇಕಿರುವುದು ತುರ್ತು ಅಗತ್ಯ. ಇದಕ್ಕೆ ಪ್ರತಿವರ್ಷ ಆಚರಿಸುವ ರಾಜ್ಯೌತ್ಸವ ಕಾರಣವಾಗಬೇಕಿದೆ. ಅದೊಂದು ಕಾಟಾಚಾರದ ಆಚರಣೆಯಾಗುವುದು ಬೇಡ. ಒತ್ತಡದ, ವ್ಯವಹಾರಿಕ ಯಾಂತ್ರಿಕ ಪ್ರಪಂಚದಲ್ಲಿ ಲಿಕನ್ನಡದ ಸಾಂಸ್ಕ್ಕತಿಕ ಹೋರಾಟಳಿಕ್ಕೆ ಮತ್ತೇ ನಾವು ಪಣತೊಡಬೇಕಿದೆ.

ಕರ್ನಾಟಕ ಏಕೀಕರಣಗೊಂಡು ಇಷ್ಟು ವರ್ಷಗಳ ನಂತರ ರಾಜ್ಯವನ್ನು ಒಡೆಯುವ ಮಾತುಗಳು ಕೇಳಿಬರುತ್ತಿರುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ಹಲವು ಮಹನೀಯರ ತ್ಯಾಗದ ಫಲವಾಗಿ ಒಂದುಗೂಡಿರುವ ರಾಜ್ಯವನ್ನು ಇಬ್ಬಾಗವಾಗಿಸುವ ಚಿಂತನೆ ಯಾರಿಗೆ ಬಂದರೂ ಅದು ಅಪರಾಧವೇ. ಕನ್ನಡಕ್ಕೆ ಧಕ್ಕೆ ಬಂದಾಗ ನಾಡಿನ ಮೂಲೆ- ಮೂಲೆಯಲ್ಲಿ ಕನ್ನಡ ಪರ ದನಿ ಕೇಳಿ ಬರುತ್ತಿದ್ದರೂ, ಅದು ಇನ್ನೂ ಗಟ್ಟಿಯಾಗಬೇಕಿದೆ. ಇನ್ನೂ ಎತ್ತರದ ಧ್ವನಿಯಲ್ಲಿ ಕೂಗಬೇಕಿದೆ.

ಬೆಂಕಿ ಹತ್ತಿದ ಮೇಲೆ ಬಾವಿ ತೆಗೆಯುವುದು ಉಚಿತವಲ್ಲ ಎನ್ನುವುದನ್ನು ಪ್ರತಿಯೊಬ್ಬ ಕನ್ನಡಿಗರೂ ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಕನ್ನಡಪರ ಸಂಘಟನೆಗಳು, ಕನ್ನಡ ಕಟ್ಟಾಳುಗಳು ನಾಡಿನ ಇತಿಹಾಸ, ಸಂಸ್ಕ್ಕತಿ, ಸಾಹಿತ್ಯ ಪರಂಪರೆಯ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕಿದೆ.

ಹಿಮದ ಮಣಿಗಳಂತೆ

ಕನ್ನಡದ ಪದಗಳು

ಓದುವ ಮನಕೆ

ತಂಪು-ಇಂಪು ಕೊಡುವವು ಛಿ.

ನಮ್ಮ ನೆಲ-ಜಲ ಎಂದರೆ ಬರೀ ಅಂತರರಾಜ್ಯ ವಿವಾದಗಳಿಗಷ್ಟೇ ಸೀಮಿತ ಎನ್ನುವ ಗ್ರಹಿಕೆಯಿಂದ ಕನ್ನಡಪರ ಹೋರಾಟಗಾರರು ಹೊರಬರಬೇಕಿದೆ. ಕನ್ನಡಿಗರ ಒಟ್ಟೂ ಬದುಕು, ಭವಿಷ್ಯ ಕುರಿತು ಚಿಂತನೆ ನಡೆಯಬೇಕಿದೆ. ಕನ್ನಡವೇ ಕಾಣದ, ಕೇಳದ ವಾತಾವರಣದಲ್ಲಿ ಕನ್ನಡವನ್ನು ಕಾಣುವಂತೆ, ಪ್ರೀತಿಸುವಂತೆ, ಕೇಳುವಂತೆ ಮಾಡಬೇಕಾದ ಸವಾಲು ನಮ್ಮ ಮುಂದಿದೆ.

ಒಗಟ್ಟಿನಲ್ಲಿ ಬಲವಿದೆ ಎನ್ನುವ ಸತ್ಯವನ್ನು ಎಲ್ಲ ಕನ್ನಡ ಪರ ಸಂಘಟನೆಗಳು ತಿಳಿದು ಒಂದಾಗಿ, ಒಟ್ಟಾಗಿ ಕನ್ನಡಕ್ಕೆ ಹೋರಾಡುವ ಮನೋಭಾವ ಬೆಳೆಸಿಕೊಳ್ಳಲಬೇಕಿದೆ. ಆಗ ಮಾತ್ರ ಕನ್ನಡ ಎಂದರೆ ಅದು ಭಾಷೆ, ಜನ, ನಾಡು, ನುಡಿ ಹೀಗೆ ಎಲ್ಲ ವಲಯಗಳ ವ್ಯಾಪ್ತಿಯನ್ನು ಆವರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮೂಹ ಶಕ್ತಿ ನೆಲೆಯ ಜೊತೆಗೆ ವ್ಯಕ್ತಿ ನೆಲೆಯಲ್ಲಿ,

loading...

LEAVE A REPLY

Please enter your comment!
Please enter your name here