ವಾಡೆಯಲ್ಲಿ ಹರಿದ ಸಂಗೀತ ಸುಧೆ

0
19
loading...

ಕುಂದಗೋಳ, ಅ 12.ಧಣೀರ ಈ ವಾಡೆದಾಗ ಹಾಡಬೇಕೆಂದ್ರ ನನಗ ಬಾಳ್ ಸಂತೋಷ ಆಗತ್ತದ ಅಂತ ಹೇಳುತ್ತಲೇ ವಲ್ಲದ ಮುಳಗುಂದ ಅವರು  ಪೂರಿಯಾ ಕಲ್ಯಾಣಿ ರಾಗದ ಮೂಲಕ ತಮ್ಮ ಗಾಯನವನ್ನು ಆರಂಭಿಸಿದರು.

ಇವರ ಈ ರಾಗಕ್ಕೆ ತಬಲಾ ಸಾಥ್ನ್ನು ಅಜಿತ ಭಾತತಂಡೆ ಮತ್ತು ಶ್ರೀಪಾದ ಮುಳಗುಂದ ಹಾರ್ಮೋನಿಯಂ ಸಾಥ್ನ್ನು ನೀಡಿ ಸಂಗೀತ ಸಂಜೆಗೆ ಇನ್ನಷ್ಟು ಮೆರಗು ನೀಡಿದರು.

ಸಂಗೀತದ ಈ ಅಲೆಯ ಜೊತೆಗೆ ಶ್ರೀಮಂತ ನಾನಾ ಸಾಹೇಬರ ವಾಡೆಯಲ್ಲಿ ಸವಾಯಿ ಗಂಧರ್ವರ ಪುಣ್ಯಸ್ಮರನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾರಂಭಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉತ್ತರ ಕರ್ನಾಟಕದ ಆರ್. ಎಸ್.ಎಸ್ ಪ್ರಾಂತ ಪ್ರಚಾರಕ ಗೋಪಾಲ್ಜೀ ಮಾತನಾಡಿ ವಿದೇಶಿ ಸಂಗೀತದತ್ತ ಒಲವು ತೋರುಸುತ್ತಿರುವ ಯುವಕರು ಈ ಹಿಂದೂಸ್ಥಾನಿ ಸಂಗೀತವನ್ನು ಮೈಗೂಡಿಸಿಕೊಳ್ಳಬೇಕು ಈ ವಾಡೆಗೆ ಯುವ ಸಂಗಿತಗಾರರನ್ನು ಸೃಷ್ಠಿಸುವ ಶಕ್ತಿ ಇದ್ದು ಎಲ್ಲ ಯುವ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯುವ ಜನತೆಗೆ ಸಲಹೆ ನೀಡಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ  ಕಾಣೀರ್ಕ ಮಾತನಾಡಿ ಸಂಗಿತ ಸರಸ್ವತಿ ಈ ವಾಡೆಯಲ್ಲಿ ನೆಲೆಸಿದ್ದಾಳೆ, ಇಲ್ಲಿನ ಜನರು ನಿಜಕ್ಕೂ ಧನ್ಯರು, ಆಧುನಿಕ ಶಿಕ್ಷಣದ ಭರಾಟೆಯಲ್ಲಿ ಇಂದಿನ ಯುವ ಜನಾಂಗ ದೇಶಿ ಸಂಸ್ಕ್ಕತಿಯನ್ನು ಮರೆಯುತ್ತಿದ್ದು ಇಂತಹ ಸಂದರ್ಭದಲ್ಲಿ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಇಂತಹ ಸಂಗೀತ ಕಾರ್ಯಕ್ರಮಗಳಿಗೆ ಕರೆದುಕೊಂಡು ಬಂದು ಅವರಲ್ಲಿ ಸಂಗಿತದ ಅಭಿರುಚಿಯನ್ನು ಬೆಳೆಸಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ಸಾವಯವ ಕೃಷಿ ಮಿಶನ್ ಅಧ್ಯಕ್ಷ ಡಾ. ಆನಂದ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ನೆಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಾರ್ಮೋನಿಯಂ ವಾದಕ ಪಂ ವಸಂತ ಕನಕಾಪೂರ ಇವರನ್ನು ಸನ್ಮಾನಿಸಲಾಯಿತು.

ಈ ಸಂಗೀತ ಸಮಾರಂಭದಲ್ಲಿ  ಡಾ. ಈ.ಎಚ್. ನರೇಗಲ್ಲ , ಶಾಸಕ ಎಸ್.ಆಯ.ಚಿಕ್ಕನಗೌಡ್ರ, ಆರ್.ಕೆ.ನಾಡೀಗೇರ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here