ವಿದ್ಯುತ್ ಸಮಸ್ಯೆ : ಹೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ

0
25
loading...

ಕುಂದಗೋಳ, ಅ. 4:ಗ್ರಾಮೀಣ ಪ್ರದೇಶಗಳಲ್ಲಿ 24 ಗಂಟೆಗಳ ಪೈಕಿ  8 ಗಂಟೆ ಮಾತ್ರ ವಿದ್ಯುತ ಪೂರೈಕೆಯಾಗುತ್ತಿದ್ದು ಈ 11 ಗಂಟೆಗಳಲ್ಲಿ 8 ಗಂಟೆ ಮಾತ್ರ ತ್ರೀಪೇಸ್ ವಿದ್ಯುತ ಇದ್ದು ಉಳಿದ ಸಮಯದಲ್ಲಿ ಸಿಂಗಲ್ ಫೇಸ್ ಇರುತ್ತದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ತುಂಬಾನೇ ತೊಂದರೆ ಉಂಟಾಗುತ್ತಿದ್ದು ಇದರಿಂದ ರೈತರು  ರೊಚ್ಚಿಗೆದ್ದು ನಮ್ಮಗೆ ಪ್ರಶ್ನಿಸುವಂತಾಗಿದೆ ಎಂದು ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಕೆ.ಚಂದ್ರಶೇಖರ ಹೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಸ್ಥಳೀಯ ತಾಲೂಕು ಪಂಚಾಯತಿಯ ಸಭಾ ಭವನದಲ್ಲಿ ಜರುಗಿದ ತಾಲೂಕು ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ತಾಲೂಕಿನ ಎಲ್ಲ ಇಲಾಖೆಗಳ ನೌಕರರು ಬರಗಾಲ ಕಮಗಾರಿಗೆ ಸಿದ್ದರಾಗಬೇಕೆಂದು ತಿಳಿಸಿದರು.

ಕಳಸ ಗ್ರಾಮದ ವಿದ್ಯುತ ಇಲಾಖೆಯ ಲೈನಮನ ಯಾವಗಲೂ ಕುಡಿದ ಅಮಲಿನಲ್ಲಿ ಇದ್ದು ಅವನು ಸರಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿಲ್ಲ ಕೂಡಲೇ ಅವನನ್ನು ಬದಲಾಯಿಸಬೇಕೆ ಎಂದು ಆಗ್ರಹಿಸಿದರು.

ನಂತರ ಮಾತನಾಡಿದ ಶಿಕ್ಷಣಾಧಿಕಾರಿ ಎಸ್. ಎಸ್. ಕಳದಿಮಠ ಸಂಶಿ ಗ್ರಾಮದಲ್ಲಿ ಶಿಕ್ಷಕರ ವಸತಿಗಾಗಿ 43 ಲಕ್ಷ ರೂ ಗಳ ವೆಚ್ಚದಲ್ಲಿ 8 ವಸತಿ ಗೃಹಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ 212 ಅಂಗನವಾಡಿ ಕೇಂದ್ರಗಳಲ್ಲಿ ಇನ್ನೂ 84 ಕೇಂದ್ರಗಳಿಗೆ ಸರಕಾರಿ ಕಟ್ಟಡದ ಅವಶ್ಯಕತೆಯಿದ್ದು ಅವುಗಳಿಗೆ ಬೇಗನೇ ಮಂಜೂರಾತಿ ನೀಡಬೆಕೆ ಎಂದು  ತಾಲೂಕು ಪಂಚಾಯತಿ ಸದಸ್ಯೆ ಪುಟ್ಟವ್ವ ಮಾದನೂರ ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಅಧ್ಯಕ್ಷ ಶಿವಕುಮಾರ ಮುಲ್ಕಿ ಪಾಟೀಲ್, ಉಪಾಧ್ಯಕ್ಷ ಶ್ರೀಮತಿ ಪಾಟೀಲ್, ತಾಲೂಕು ಪಂಚಾಯತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here