ಸರ್ಕಾರಿ ಶಾಲಾ-ಕಾಲೇಜುಗಳ ಬಗ್ಗೆ ಕೀಳರಿಮೆ ಬೇಡ

0
21
loading...

ಧಾರವಾಡ:ವಿದ್ಯಾರ್ಥಿಗಳು ಎಂದೂ ತಾವು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಇರಬಾರದು ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲ ಹೇಳಿದರು.

ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಎನ್ಎಸ್ಎಸ್ ಘಟಕಗಳ ಪ್ರಸಕ್ತ ಸಾಲಿನ ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಹೊಂದುವ ಮೂಲಕ ತಮ್ಮಲ್ಲಿ ಧೃಡ ಸಂಕಲ್ಪ, ನಡೆ-ನುಡಿಗಳ ಜೊತೆಗೆ ಸತತ ಪ್ರಯತ್ನದಿಂದ ಅಧ್ಯಯನಶೀಲರಾಗಬೇಕು ಎಂದ ಅವರು,ಆರ್ಥಿಕ ಮುಗ್ಗಟ್ಟು ವಿದ್ಯಾರ್ಥಿಯ ಯಶಸ್ಸಿನ ಹಾದಿಯಲ್ಲಿ ಎಂದೂ ಪಾತ್ರವಹಿಸುವುದಿಲ್ಲ ಎಂದರು.

ಕವಿವಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಧನವಂತ ಹಾಜವಗೋಳ ಮಾತನಾಡಿ, ಭಾರತ ದೇಶದಲ್ಲಿ ರಾಷ್ಟ್ತ್ರೀಯ ಸೇವಾ ಯೋಜನೆ ಅತ್ಯಂತ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 10 ಸಾವಿರ ಸ್ವಯಂಸೇವಕರಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರಾಮಾಣಿಕವಾಗಿ ಸೇವೆಸಲ್ಲಿಸುತ್ತಿದ್ದಾರೆ ಎಂದರು.

ಪ್ರಾಚಾರ್ಯ ಡಾ.ಎಸ್.ಎಸ್.ಕಟ್ಟಿಮನಿ ಅಧ್ಯಕ್ಷತೆವಹಿಸಿದ್ದ ಸಮಾರಂಭದಲ್ಲಿ ಡಾ.ಧನವಂತ ಹಾಜವಗೋಳ ಹಾಗೂ ಡಾ.ಎಂ.ಬಿ.ದಳಪತಿ ಅವರನ್ನು ಸನ್ಮಾನಿಸಲಾಯಿತು.ಬಿ.ಎಸ್.ಭಜಂತ್ರಿ ಸ್ವಾಗತಿಸಿದರು.ಕೃಷ್ಣಪ್ಪ ಎಲ್. ಜಿ ಹಾಗೂ ಶೋಭಾ ಕಟಿಗೆಣ್ಣವರ ನಿರೂಪಿಸಿದರು.ಡಾ.ಎಸ್.ಆರ್.ಗಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ ಅಂಕಲಕೋಟಿ ವಂದಿಸಿದರು.

ಪ್ರೊ.ಶ್ರೀಶೈಲಪ್ಪ ಮಳಗಿ,ಡಾ.ಎ.ಆರ್.ಯಾರ್ದಿ,ಡಾ.ವಿಶ್ವನಾಥ ಚಿಂತಾಮಣಿ,ಪ್ರೊ.ಎ.ಎಸ್.ಐನಾಪೂರ,ಡಾ. ಮಹೇಶ ಪಾಟೀಲ,ಡಾ.ಎಸ್.ಕೆ.ಪವಾರ,ಡಾ.ವಾಯ್.ಪಿ.ಸುಣಗಾರ,ಡಾ.ಎಸ್.ಜಿ.ಜಾದವ,ಡಾ.ಜಗದೀಶ,ಪ್ರೊ. ರಾಮನಗೌಡ ಎಲ್ಲ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here