ಕಿತ್ತೂರ ಉತ್ಸವ ರಾಜ್ಯ ಮಟ್ಟದಲ್ಲಾಗಲಿ : ಡಾ. ಮಾಳಿ

0
30
loading...

ಚನ್ನಮ್ಮನ ಕಿತ್ತೂರ 31 :  ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ಇತಿಹಾಸದ ಸಮಗ್ರ ಅಧ್ಯಯನ ಕೇಂದ್ರವಂದನ್ನು ಸ್ಥಾಪಿಸಬೇಕೆಂದು ಹಾರೂಗೇರಿಯ ಕನ್ನಡ ಪ್ರಾಧ್ಯಾಪಕ ಡಾ. ವಿ ಎಸ್ ಮಾಳಿ ಅಭಿಪ್ರಾಯ ಪಟ್ಟರು.

ಅವರು ಕಿತ್ತೂರ ಉತ್ಸವ 2012 ರ ಅಂಗವಾಗಿ ಏರ್ಪಡಿಸಿದ್ದ ವಿಚಾರಣ ಸಂಕೀರ್ಣದಲ್ಲಿ ಭಾಗವಹಿಸಿ ಕಿತ್ತೂರ ಅಂದು ಇಂದು ಎಂಬ ವಿಷಯ ಕುರಿತು ಮಾತನಾಡಿದರು. ಕಿತ್ತೂರ ಕೇವಲ ತಾಲೂಕಾ ಕೇಂದ್ರವಾದರೇ ಸಾಲದು ಕಿತ್ತೂರ ಸಮಗ್ರ ಅಭಿವೃದ್ದಿ ಹೊಂದಬೇಕೆಂದರು. ಕಿತ್ತೂರು ಉತ್ಸವ ಬೆಳಗಾವಿ ಜಿಲ್ಲೆಗೆ ಸಿಮೀತಗೊಳಿಸದೇ ರಾಜ್ಯದ ಮಟ್ಟದ ಉತ್ಸವವಾಗಬೇಕೆಂದರು.ಹಂಪಿ ಕನ್ನಡ ವಿಶ್ವವಿದ್ಯಾಲಯವು ಹುಬ್ಬಳ್ಳಿಯಲ್ಲಿ ಕುವೆಂಪು ಅಧ್ಯಯನ ಕೇಂದ್ರ ಸ್ಥಾಪಿಸಿದ ಮಾದರಿಯಲ್ಲಿ ಕಿತ್ತೂರಿನಲ್ಲಿ ಚನ್ನಮ್ಮ ಅಧ್ಯಯನ ಕೇಂದ್ರ ಸ್ಥಾಪಿಸಬೇಕೆಂದರು. ಉಪನ್ಯಾಸಕ ಶರೀಫ ಜೋಷಿ ಅವರು ಕಿತ್ತೂರ ಸಂಸ್ಥಾನದ ಸಂಗೀತ ಪರಂಪರೆ ಎಂಬ ವಿಷಯ ಕುರಿತು ಮಾತನಾಡಿ  ನಮ್ಮ ನಾಡಿನಲ್ಲಿ ರಾಜಕೀಯ ನಮ್ಮ ನಾಡಿನಲ್ಲಿ ರಾಜಕೀಯ ಇತಿಹಾಸ ಬಹಳ ಶ್ರೀಮಂತವಾಗಿದೆ ಆದರೇ ಸಂಗೀತ ಇತಿಹಾಸ ಬಹಳ ಬಡವಾಗಿದೆ ಎಂದು ವಿಷಾಧಿಸಿದರು.

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯರ ಪ್ರಾಧ್ಯಾಪಕಿ ಡಾ ಮೇತ್ರಿಯಿಣಿ ಗದಿಗೆಪ್ಪಗೌಡರ  ಸ್ಪೂರ್ತಿದಾಯಕ ವ್ಯಕ್ತಿತ್ವದ ಕಿತ್ತೂರು ರಾಣಿ ಚನ್ನಮ್ಮ ವಿಷಯದಲ್ಲಿ ಕುರಿತು ಮಾತನಾಡಿದ ಅವರು  ಪಠ್ಯಕ್ರಮದಲ್ಲಿ  ಅಳವಡಿಸುವದರೊಂದಿಗೆ ಈತರ ಭಾಷೆಗಳಲ್ಲಿ ಅನುವಾದಗೊಳ್ಳುವ ಕಾರ್ಯವಾಗಬೇಕೆಂದರು. ಬೆಳಗಾವಿ ಅಂಜುಮನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಹೆಚ್ ಆಯ್ ತಿಮ್ಮಾಪೂರ ಮಾತನಾಡಿ ಕಿತ್ತೂರಿನಲ್ಲಿ ಮುಂದೆ ಕೈಕೊಳ್ಳಬೇಕಾದ ಅಭಿವೃದ್ದಿ ಕಾರ್ಯಗಳ ವಿವರ ನೀಡುತ್ತ ಕಿತ್ತೂರಿನಲ್ಲಿ ಅಂತರಾಷ್ಟ್ತ್ರೀಯ ಮಟ್ಟದ  ವಸ್ತುಸಂಗ್ರಾಲಯ ಚನ್ನಮ್ಮ ಕುರಿತು ಗ್ರಂಥಾಲಯ ಹಾಗೂ ಗ್ರಾಮ ಪಂಚಾಯತ, ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ಶಾಲಾ ಕಾಲೇಜು ಕಾರ್ಯಾಲಯಗಳಲ್ಲಿ ಚನ್ನಮ್ಮನ ಭಾವಚಿತ್ರ ಹಾಕಬೇಕೆಂದು ಸಲಹೆ ನೀಡಿದರು.

ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಸಿ ಯು ಬೆಳ್ಳಕ್ಕಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಚನ್ನಮ್ಮ ಇತಿಹಾಸ ಕುರಿತು ಇನ್ನೂ ಸಾಕಷ್ಟು ಸಂಶೋಧನೆಗಳಾಗಬೇಕು ಇದು ಕೇವಲ ಪಠ್ಯಕ್ರಮವಾಗಿರದೇ ಜನಸಾಮಾನ್ಯರ ಮನಮುಟ್ಟಿಸುವ ಕಾರ್ಯವಾಗಬೇಕೆಂದರು.

ಅಧ್ಯಕ್ಷತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಶ್ರೀನಿವಾಸ ಪಾಡಿಗಡ ಅವರು ಮಾತನಾಡಿ ಚನ್ನಮ್ಮ ಇತಿಹಾಸ ಕುರಿತು ಸರಿಯಾದ ದಾಖಲೀಕರಣ ಮಾಡಬೇಕೆಂದರು. ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಯ ರು ಪಾಟೀಲ ಸ್ವಾಗತಿಸಿದರು, ಬಸವರಾಜ ಕುಪ್ಪಸಗೌಡರ ಕಾರ್ಯಕ್ರಮ ನಿರೂಪಿಸಿದರು, ಬೈಲಹೊಂಗಲ ಉಪವಿಭಾಧಿಕಾರಿ ಮೇಜರ ಸಿದ್ದಲಿಂಗಯ್ಯ ಹಿರೇಮಠ ವಂದಿಸಿದರು.

 

loading...

LEAVE A REPLY

Please enter your comment!
Please enter your name here