ರಂಗೋಲಿ ಚಿತ್ರಕಲೆ ಮತ್ತು ಅದರ ಮಹತ್ವ

0
113
loading...

ರಾಣೇಬೆನ್ನೂರು ನ,11   ಸೃಜನಾತ್ಮಕ ಕಲೆ-ಸಂಸ್ಕ್ಕತಿಯ ಸನ್ಮಾರ್ಗದಲ್ಲಿರುವ ದೇಶ ನಮ್ಮದು.  ಇಂತಹ ಆಧ್ಯಾತ್ಮಿಕ ರಾಷ್ಟ್ತ್ರವಾಗಲು ಸುಸಂಸ್ಕ್ಕತ ಮಹಿಳೆಯರು ರಂಗೋಲಿ ಚಿತ್ರಗಳನ್ನು ಬಿಡಿಸುತ್ತಾ ಭಾವನಾತ್ಮಕ ಪರಿಸರವನ್ನು ಸೃಷ್ಠಿಸಿ, ಸಂಸಾರಕ್ಕೆ ನಂದಾ ದೀಪವಾಗಿ ನಾಡಿನ ಬೆಳಕನ್ನು ಸನ್ಮಾರ್ಗದಲ್ಲಿ ಬೆಳಗಿಸುವಂತ ಭೂದೇವಿಯ ಸ್ವರೂಪದಲ್ಲಿದ್ದಾಳೆ. ರಂಗೋಲಿ ಚಿತ್ರಗಳಿಂದ ಆಹ್ವಾನಿತರಾದ ದೇವತೆಗಳು ಸದಾಕಾಲ ಮನೆಯಲ್ಲಿ ವಾಸವಾಗಿರುತ್ತಾರೆ. ಅದರಲ್ಲೂ ವಿಶೇಷವಾಗಿ ಲಕ್ಷ್ಮೀದೇವಿಯು ಮನೆಯಲ್ಲಿಯೇ ಶಾಶ್ವತವಾಗಿ ಇರುವಳೆಂಬ ನಂಬಿಕೆಯಿದೆ.

ಭಾರತದ ಜನಪದ ಕಲಾಕುಸುಮವಾದ ರಂಗೋಲಿ ಚಿತ್ರಗಳ ಮಹತ್ವ ಅರ್ಥಪೂರ್ಣವಾಗಿದೆ. ಬೆಳಗಿನಜಾವ ಮತ್ತು ಸಾಯಂಕಾಲದ ಅವಧಿಯಲ್ಲಿ ದಿನಕ್ಕೆ ಎರಡು ಬಾರಿ ರಂಗೋಲಿಗಳನ್ನು ಹಾಕುವ ಆದರ್ಶ ಗೃಹಿಣಿಯರು ಪ್ರತಿದಿನ ನಸುಕಿನಲ್ಲಿ ಎದ್ದು ಶುದ್ದ ಮನಸ್ಸಿನಿಂದ ಮನೆಯನ್ನು ಶುಚಿಗೊಳಿಸಿ ಶುಚಿತ್ವತೆಯಲ್ಲಿ ಮನೆಯ ಹೊಸ್ತಿಲನ್ನು ಚೆನ್ನಾಗಿ ತೊಳೆದು ಮುಂಭಾಗದ ಅಂಗಳವನ್ನು ಸಗಣಿ ನೀರಿನಿಂದ ಸಾರಿಸಿ ರಂಗೋಲಿ ಚಿತ್ರಗಳನ್ನು ಹಾಕಿ ಸಂಚಾರದಲ್ಲಿರುವ ದೇವಾನುದೇವತೆಗಳನ್ನು ಮನೆಗೆ ಆಹ್ವಾನಿಸುವಂತ ಪ್ರತೀಕ ನಮ್ಮಲ್ಲಿದೆ. ಹೀಗೆ ಬಂದ ದೇವಾನುದೇವತೆಗಳನ್ನು  ಪೂಜಿಸುವಂತ ಪವಿತ್ರ ಪರಿಕಲ್ಪನೆಗಳು ನಮ್ಮ ಜನಪದ ಕಲಾ ಸಂಸ್ಕ್ಕತಿಯಲ್ಲಿದೆ.

ಆದರ್ಶ ಗೃಹಿಣಿಯು ಸಂಸಾರದ ಸಂಸ್ಕಾರಕ್ಕೆ ಸನ್ಮಾರ್ಗದಲ್ಲಿ ಸುಖ, ಸಂತೋಷ, ಶಾಂತಿ ಸೌಹಾರ್ದತೆ, ಪ್ರೀತಿ, ಕರುಣೆ, ವಾತ್ಸಲ್ಯ ಮತ್ತು  ಮಮತೆಯನ್ನು ತೋರಿಸುವಲ್ಲಿ ಗೃಹಿಣಿಯ ಪಾತ್ರ ಅತ್ಯಮೂಲ್ಯವಾದದ್ದು. ಅಂತಹ ಪೂರಕ ವಾತಾವರಣವನ್ನು ದೈವಿಸ್ವರೂಪಿಯಾದ ಮಹಿಳೆ ಮನೆಯ ಒಳ-ಹೊರಗೆ ರಂಗೋಲಿ ಚಿತ್ರಗಳನ್ನು ಬರೆಯುವುದರ ಮೂಲಕ ಮನೆಗೆ ಮಂಗಳವನ್ನು ಬರೆದು ಮಾಂಗಲ್ಯದ ಭಾಗ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ.

ರಂಗೋಲಿಯಲ್ಲಿ ಅರಿಷಿಣ ಮತ್ತು ಕುಂಕುಮಗಳಿಗೆ ವಿಶೇಷವಾದ ಸ್ಥಾನ-ಮಾನ ಪಡೆದುಕೊಂಡಿದೆ. ಕುಂಕುಮವನ್ನು ಗೌರಿಯಂದು ಅರಿಷಿಣವನ್ನು ಲಕ್ಷ್ಮೀಯಂದು ಭಾವಿಸಲಾಗಿದೆ. ಸೌಭಾಗ್ಯ ಮತ್ತು ಸಿರಿಸಂಪತ್ತಿನ ಸಂಕೇತವಾಗಿ ಹೊಸ್ತಿಲಲ್ಲಿ ಬಳಸುತ್ತಾರೆ.

ರಂಗೋಲಿ ಚಿತ್ರಗಳನ್ನು ಹಾಕದೆ ಇದ್ದರೆ ಅಂತಹ ಮನೆಯಲ್ಲಿ ದೇವತೆಗಳು  ವಾಸವಾಗಿರುವುದಿಲ್ಲಾ. ದುಷ್ಠ ಶಕ್ತಿಗಳು ಮನೆಯಲ್ಲಿ ನೆಲೆಸುವಂತಾಗುತ್ತದೆ. ಅನಿಷ್ಠ, ಕಷ್ಠ, ನೋವು ಹಿಂಸೆ, ಜಗಳಗಳು ಮನೆಯ ತಾಂಡವವಾಡುತ್ತವೆ. ರಂಗೋಲಿ ಚಿತ್ರಗಳಿಲ್ಲದ ಮನೆಗಳಿಗೆ ಬಿಕ್ಷುಕರು ಹೋಗುವುದಿಲ್ಲಾ, ಕಾರಣ ಅಂತಹ ಮನೆಯಲ್ಲಿ ಅಶುಭಕಾರ್ಯ ನಡೆದಿರಬಹುದೆಂದು ತಿಳಿಯುತ್ತಾರೆ.

ರಂಗೋಲಿ ಹಾಕುವ ವಿಧಾನಗಳು: ರಂಗೋಲಿ ಚಿತ್ರಗಳನ್ನು ಚುಕ್ಕೆಗಳಿಂದ ಮತ್ತು ಚುಕ್ಕಿಯೇತರವಾಗಿ ಹಾಕಬಹುದು. ಸಾಮಾನ್ಯವಾಗಿ ರಂಗೋಲಿ ಚಿತ್ರಗಳನ್ನು ಹಾಕುವಾಗ ಬೆಣಚು ಕಲ್ಲನ್ನು  ಕುಟ್ಟಿ ಪುಡಿ ಮಾಡಿದ ಪುಡಿಯಲ್ಲಿ ಹಾಕುತ್ತಾರೆ ಅದರಂತಯೇ ಅಕ್ಕಿ ಹಿಟ್ಟಿನಲ್ಲೂ ಹಾಕುವುದು ರೂಢಿಯಲ್ಲಿದೆ.

ಚುಕ್ಕಿಯ ರಂಗೋಲಿ ಚಿತ್ರಗಳು ರಂಗೋಲಿ ಪುಡಿಯಿಂದ ಕ್ರಮಬದ್ದವಾದ ಚುಕ್ಕೆಗಳನ್ನು ಇಟ್ಟು ಚುಕ್ಕೆಯಿಂದ ಚುಕ್ಕೆಗೆ ಗೆರೆಗಳನ್ನು ಸೇರಿಸುತ್ತ ನೀರೀಕ್ಷಿತ ಚಿತ್ರಕಲಾಕೃತಿಯನ್ನು ಚಿತ್ರಿಸುವುದೆ ಚುಕ್ಕಿಯ ರಂಗೋಲಿ ಚಿತ್ರಗಳಾಗಿವೆ. ಚುಕ್ಕಿಯನ್ನು ಇಡಲಾರದೆ ನೇರವಾಗಿ ರಂಗೋಲಿ ಪುಡಿಯಿಂದ ರಂಗೋಲಿ ಚಿತ್ರಗಳನ್ನು ಸರಳವಾಗಿ ಹಾಕುವುದನ್ನು ಚುಕ್ಕಿಯೇತರ ರಂಗೋಲಿ ಚಿತ್ರಕಲೆಯಂದು ಕರೆಯಲಾಗುತ್ತೆ.

ಹಬ್ಬಗಳಲ್ಲಿ ರಂಗೋಲಿ ಚಿತ್ರಗಳನ್ನು ಅಲಂಕಾರ ಮಾಡುವ ಬಗೆ: ಸೃಜನಾತ್ಮಕವಾಗಿ ಹಲವು ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸಿಕೊಂಡು ವಿಶೇಷವಾಗಿ ಹಬ್ಬಗಳಲ್ಲಿ ರಂಗೋಲಿ ಚಿತ್ರಗಳನ್ನು ಹಾಕಬಹುದು. ಹೀಗೆ ಹಾಕುವುದರಿಂದ ಚಿತ್ರಗಳು ಅಲಂಕೃತವಾಗಿ ಕಾಣುವುದರೊಂದಿಗೆ ಹಬ್ಬಗಳಿಗೆ ಮೆರಗನ್ನು ತಂದು ಕೊಡುತ್ತವೆ.

ಹೂ ಮತ್ತು ಹೂವಿನ ದಳಗಳಿಂದ ರಂಗೋಲಿ ಚಿತ್ರಗಳು,. ಆಹಾರ ಧಾನ್ಯಗಳಿಂದ, ವಿವಿಧ ಆಕಾರದ  ಎಲೆಗಳಿಂದ, ತರಕಾರಿ ಮತ್ತು ಹಣ್ಣುಗಳಿಂದ, ಹಣತೆಗಳಿಂದ, ಪತ್ರಿಗಳಿಂದ, ಪಕ್ಷಿಗಳ ರೆಕ್ಕೆ ಪುಕ್ಕಗಳಿಂದ, ಸಣ್ಣ ಸಣ್ಣ ಮಣ್ಣಿನ ಮುಚ್ಚಳಗಳಿಂದ, ವಿವಿಧ ಆಕಾರ ಮತ್ತು ಬಣ್ಣ ಬಣ್ಣದ ಗುಂಡುಗಳಿಂದ,  ವಿವಿಧ ಪ್ರಕಾರದ ವರ್ಣಗಳ ಮಣ್ಣುಗಳಿಂದ,  ವಿವಿಧ ಆಕಾರದ ಕಲ್ಲುಗಳಿಂದ, ಕಪ್ಪೆ ಚಿಪ್ಪುಗಳಿಂದ,  ಕುಸುಬೆ ಕಾಳಿನ ಸಿಪ್ಪೆ, ಉಪ್ಪು, ಮರಳಿಗೆ ವಿವಿಧ ವರ್ಣಗಳನ್ನು ಮಿಶ್ರಣದಿಂದ, ರಂಗೋಲಿ ಚಿತ್ರಗಳನ್ನು ಅಲಂಕೃತವಾಗಿ ಹಾಕಬಹುದು ಈ ರೀತಿಯಲ್ಲಿ ರಂಗೋಲಿ ಚಿತ್ರಗಳನ್ನು ಹಾಕುವುದರಿಂದ ಸೃಜನಾತ್ಮಕತೆಯಲ್ಲಿಯೂ ವಿಭಿನ್ನತೆಯನ್ನು ಕಂಡುಕೊಳ್ಳಬಹುದು.

 

loading...

LEAVE A REPLY

Please enter your comment!
Please enter your name here