ರೈತರಿಗೆ ಸಕಾಲಕ್ಕೆ ಸಾಲ ನೀಡಿ

0
13
loading...

ಬಾಗಲಕೋಟೆ, 27-ಬ್ಯಾಂಕುಗಳು ರೈತರಿಗೆ ಕೃಷಿ ಸಾಲವನ್ನು  ನೀಡುವುದರಿಂದ ಲೇವಾದೇವಿಯವರ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಸಹಾಯಕವಾಗಲಿದೆ ಎಂದು ಡಾ.ಅಶೋಕ ಆಲೂರ ತಿಳಿಸಿದರು. ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಕಾರ್ಪೋರೇಶನ ಬ್ಯಾಂಕಿನ ಗ್ರಾಹಕರ  ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಪೋರೇಶನ ಬ್ಯಾಂಕ್ ಗ್ರಾಹಕರಿಗೆ  ಉತ್ತಮ ಸೇವೆಯನ್ನು ನೀಡುತ್ತಿದೆ  ಎಂದು ಶ್ಲಾಘಿಸಿ,ಕೃಷಿ ಸಾಲಕ್ಕೆ ಸಲ್ಲಿಸಬೇಕಾದ  ದಾಖಲೆ ಪತ್ರಗಳ ಸರಳೀಕರಣದ ಅಗತ್ಯವಿದೆ  ಎಂದು ಅಭಿಪ್ರಾಯಪಟ್ಟರು.

ರೈತರು ಬ್ಯಾಂಕಿನಿಂದ ಪಡೆದ ಸಾಲವನ್ನು  ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ  ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬೇಕು ಎಂದು ಹೇಳಿದರು.

ಬೆಳಗಾವಿಯ ಕಾರ್ಪೋರೇಶನ ಬ್ಯಾಂಕಿನ ಉಪಮಹಾಪ್ರಬಂಧಕ  ಶಿವರಾಮ ಭಟ್ಟ ಬ್ಯಾಂಕಿನ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಧೀರೇಂದ್ರ ಕುಮಾರ, ಹರೀಶ ಕುಲಕರ್ಣಿ, ಬಾಗಲಕೋಟೆ  ಶಾಖೆಯ ವ್ಯವಸ್ಥಾಪಕ ಎ.ಎನ್.ರವಿಶಂಕರ ಮತ್ತು ಗ್ರಾಹಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here