ಅವಿವೇಕದ ಪರಮಾವಧಿ

0
23
loading...

 ಈಹಿಂದೆ ಕೇಂದ್ರ ಸರಕಾರ ಯಾರ ಬಳಿ 32 ರೂಪಾಯಿ ಇರುತ್ತವೆಯೋ ಅವರು ಮಾತ್ರ ಬಡವರು ಎಂದು ಹೇಳಿ ಜನರಿಂದ ಹಿಗ್ಗಾ ಮುಗ್ಗಾ ತರಾಟೆಗೆ ಒಳಗಾಗಿತ್ತು ಈಗ ಅದೇ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ದೆಹಲಿ ಮುಖ್ಯ ಮಂತ್ರಿ ಶಿಲಾ ದೀಕ್ಷಿತ್ ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದೆಹಲಿಯಲ್ಲಿ ಅನ್ನಶ್ರೀ ಯೋಜನೆಯನ್ನು  ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಶೀಲಾ ದೀಕ್ಷಿತ್ ಅವರು ಐದು ದಿನ ಇರುವ ಕುಟುಂಬಕ್ಕೆ ಒಂದು ತಿಂಗಳು ಆಹಾರ ಧಾನ್ಯ ಹಾಗೂ ದಿನಸಿ ವಸ್ತುಗಳನ್ನು ಖರೀದಿಸಲು  600 ರೂಪಾಯಿ ಸಾಕು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಪ್ರತಿ ಪಕ್ಷದವರ ಮತ್ತು ಸಾರ್ವಜನಿಕರ ಆಕ್ರೌಶಕ್ಕೆ ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಆಹಾರ ಧಾನ್ಯದ ಬೆಲೆಗಳು ಅಡಿಗೆಗೆ ಉಪಯೋಗಿಸುವ ಎಣ್ಣೆ ದಿನಸಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ನಡೆದಿದೆ. ಹೀಗಿರುವಾಗ ಐದು ಜನರು ಇರುವ ಕುಟುಂಬಕ್ಕೆ 600 ರೂಪಾಯಿ ಸಾಕು ಎಂದು ಈ ಮೇಡಂ ಹೇಳಿದ್ದಾರೆ. ಒಬ್ಬರು ಒಂದು ತಿಂಗಳು ಹೊಟೇಲಿನಲ್ಲಿ ಊಟ ಮಾಡಲು ಕನಿಷ್ಠ 3000 ರೂಪಾಯಿ ಕೊಡಬೇಕಾಗುತ್ತದೆ. ಪರಿಸ್ಥಿತಿ ಈ ರೀತಿ ಇರುವಾಗ ಐದು ಜನರು ಇರುವ ಕುಟುಂಬ ಕೇವಲ 600 ರೂಪಾಯಿಯಲ್ಲಿ ಒಂದು ತಿಂಗಳ ಕಾಲ ಹೇಗೆ ಬದುಕು ಸಾಗಿಸುತ್ತದೆ. ಎಂಬುದನ್ನು ಮೇಡಂ ಅವರೇ ಹೇಳಬೇಕಾಗಿದೆ.

ಈ ಹೇಲಿಕೆ ನೀಡಿದ ಶೀಲಾ ದಿಕ್ಷೀತ್ ದೆಹಲಿ ಮುಖ್ಯ ಮಂತ್ರಿಯಾಗಿದ್ದಾರೆ. ಅವರು ಎಂದೂ ಕೈ ಚೀಲ ಹಿಡಿದುಕೊಂಡು ಮಾರುಕಟ್ಟೆಗೆ ಹೋಗಿ ಆಹಾರ ಧಾನ್ಯ ಮತ್ತು ದಿನಸಿ ವಸ್ತುಗಳನ್ನು ಅಡಿಗೆ ಬಳಸುವ ಎಣ್ಣೆಯನ್ನು ಖರೀದಿ ಮಾಡಿಲ್ಲ ಹೀಗಾಗಿ ಈ ಸರಕುಗಳ ಬೆಲೆ ಕಿಲೋ ಒಂದಕ್ಕೆ ಎಷ್ಟು ಇದೆ. ಎಂಬುದು ಅವರಿಗೆ ಗೊತ್ತೆ ಇರುವುದಿಲ್ಲ ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುವ ಕಾರ್ಯವನ್ನು ಅವರು ಮಾಡಿದ್ದಾರೆ.

ಐದು ಜನರಿರುವ ಕುಟುಂಬದ ಎರಡು ಸಮಯದ ಊಟಕ್ಕೆ ಕನಿಷ್ಠ  ಒಂದು ಕೇಜಿ  ಅಕ್ಕಿ ಬೇಕು ಮಾರುಕಟ್ಟೆಯಲ್ಲಿ ಈ ಅಕ್ಕಿಯ ಬೆಲೆ ಕೇಜಿ ಒಂದಕ್ಕೆ ಕನಿಷ್ಠ 30 ರೂಪಾಯಿ  ಇದೆ. 30 ಕೆ.ಜಿ ಅಕ್ಕಿ ಕೊಳ್ಳಲು 900 ರೂಪಾಯಿ ಬೇಕು. ಹೀಗಿರುವಾಗ 600 ರೂಪಾಯಿಯಲ್ಲಿ ಒಂದು ತಿಂಗಳು ಕಾಲ ಐದು ಜನರು ಜೀವನ ಸಾಗಿಸುವುದು ಹೇಗೆ ಎಂಬುದನ್ನು ಶೀಲಾ ದೀಕ್ಷಿತ್ ಹೇಳಬೇಕಾಗಿದೆ.

ಜವಾಬ್ದಾರಿಯುತವಾದ ಸ್ಥಾನದಲ್ಲಿ ಇರುವವರು ಬೇಜವಾಬ್ದಾರಿಯನ್ನು ಮಾತನಾಡುವಾಗ ಅವರು ಆಡಿದ ಮಾತಿಗೆ ಬೆಲೆ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಅವರು ಮಾತನಾಡಬೇಕು. ಏನು ಗೊತ್ತಿಲ್ಲದೆ ಎಲ್ಲವೂ ಗೊತ್ತಿದೆ ಎಂದು ಭಾವಿಸಿಕೊಂಡು ಈ ರೀತಿ ಬೇಜವಾಬ್ಬಾರಿ ಹೇಳಿಕೆ ನೀಡುವುದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಭೂಷಣವಾಗುವ ಸಂಗತಿಯಲ್ಲ. ಆದ್ದರಿಂದ ಇನ್ನು ಮುಂದಾದರೂ ಶೀಲಾ ದೀಕ್ಷಿತ ಅವರು ತಮ್ಮ ಸ್ಥಾನದ ಘನತೆ ಗೌರವಗಳಿಗೆ ಅನುಗುಣವಾಗುವಂತೆ ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಬೇಕು ಇಲ್ಲದೆ ಹೋದರೆ ದೆಹಲಿ ಜನರು ಅವರಿಗೆ ಮುಂದಿನ ದಿನನಗಳಲ್ಲಿ ಸರಿಯಾದ ರೀತಿಯಲ್ಲಿ ಪಾಠವನ್ನು ಕಲಿಸಬೇಕಾಗುತ್ತದೆ. ಆದ್ದರಿಂದ ರಾಜ್ಯ ಕಾರಣಿಗಳು  ಈ ರೀತಿ  ವಿವಾದಿತವಾದ ಹೇಳಿಕೆಗಳನ್ನು ನೀಡುವ ಕಾರ್ಯ ಮಾಡಬಾರದು ಯಾಕೆಂದರೆ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಸವಣ್ಣನವರು ಹೇಳುವ ಮೂಲಕ ಮಾತಿನ ಮಹತ್ವವನ್ನು ವಿವರಿಸಿದ್ದಾರೆ. ಆದ್ದರಿಂದ ಮಾತನಾಡುವಾಗ ಮಾತನಾಡುವವರು ಅತ್ಯಂತ ಎಚ್ಚರಿಕೆಯಿಂದ ತಮ್ಮ ಮಾತುಗಳನ್ನು ಆಡಬೇಕು. ಅಂದರೆ ಮಾತ್ರ ಅವರ ಘನತೆ ಗೌರವ ಉಳಿಯಲು ಸಾಧ್ಯವಾಗುತ್ತದೆ.

 

loading...

LEAVE A REPLY

Please enter your comment!
Please enter your name here