ಆರೋಗ್ಯವಂತ ಶಿಶುಗಳ ಆಯ್ಕೆ

0
15
loading...

ಕುಂದಗೋಳ ಡಿ17: ಇಲ್ಲಿನ ಭೂತೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆರೋಗ್ಯ ಇಲಾಖೆಯಿಂದ 6ತಿಂಗಳದಿಂದ 2ವರ್ಷಗಳವರೆಗಿನ ಆರೋಗ್ಯವಂತ ಗಂಡು ಮತ್ತು ಹೆಣ್ಣು ಶಿಶುಗಳ ಆಯ್ಕೆ ಸೋಮವಾರ ನಡೆಯಿತು.

ಈ ಆಯ್ಕೆಯಲ್ಲಿ ಸುಮಾರು 25ಕ್ಕೂ ಹೆಚ್ಚು ತಾಯಂದಿರು ತಮ್ಮ ಮುದ್ದುಮಕ್ಕಳನ್ನು ಕರೆತಂದಿದ್ದರು. ಅವುಗಳಲ್ಲಿ ಪ್ರಥಮ ಸ್ಥಾನವನ್ನು ಕುಮಾರ ಓಂ ಯಲ್ಲಪ್ಪ ಹೊಸೂರ(10ತಿಂಗಳು) ಎಂಬ ಮುದ್ದಾದ ಶಿಶು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಆಯಕೆಯಾಯಿತು. ಈ ಶಿಸು 10ಕೆ.ಜಿ ತೂಕ ಹೊಂದಿದ್ದು, ಸುಂದರ ಆರೋಗ್ಯವಂತ ಶಿಶು ಎಂದು ನಿರ್ಣಾಯಕರು ತೀರ್ಮಾನಿಸಿದರು.

ನಿರ್ಣಾಯಕರಾಗಿ ಆರೋಗ್ಯ ಇಲಾಖೆಯ ಎಸ್.ಎಸ್.ತಿವಾರಿ, ವಿ.ಸಿ.ಕುಲಕರ್ಣಿ, ಆರ್. ಪುಸ್ಪಾ ಭಾಗವಹಿಸಿದ್ದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾಜಿ ಪ.ಪಂ ಅಧ್ಯಕ್ಷೆ ಕಸ್ತೂರಿ ರಾಯರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೇಮಾ ಹಿರೇಮಠ, ವಿ.ಸಿ.ಸವಣೂರ, ಕೆ.ಆರ್.ಪಡೋಶಿ ಆಗಮಿಸಿದ್ದರು.

 

loading...

LEAVE A REPLY

Please enter your comment!
Please enter your name here