ಕುಂಟ ಕೋಣ, ಮೂಕ ಜಾಣ ನಾಟಕ ಪ್ರದರ್ಶನ

0
58
loading...

ಬೈಲಹೊಂಗಲ 4: ಸ್ಥಳೀಯ ಶ್ರೀ ಮರಡಿ ಬಸವೇಶ್ವರ ಜಾತ್ರಾ ಅಂಗವಾಗಿ ಇಲ್ಲಿಯ ಗೆಳೆಯರ ಬಳಗ ಪಟ್ಟಣದ ಕೊಪ್ಪದ ಕೂಟದಲ್ಲಿ ಬರುವ ದಿ. 7 ರಂದು ಶುಕ್ರವಾರ ಸಂಜೆ 8 ಗಂಟೆಗೆ ವಿಶ್ವಜ್ಯೌತಿ ಶ್ರೀ ಪಂಚಾಕ್ಷರಿ ನಾಟ್ಯ ಸಂಘ, ಜೇವರ್ಗಿ ಇವರ ಶಿಕುಂಟ ಕೋಣ – ಮೂಖ ಜಾಣಷಿ ಹಾಸ್ಯಮಯ ನಾಟಕವನ್ನು ಸಾರ್ವಜನಿಕರಿಗೆ ಉಚಿತವಾಗಿ ಏರ್ಪಡಿಸಿದೆ.

ಧಾರವಾಡದಲ್ಲಿ ಯಶಸ್ವಿಯ 300 ಪ್ರಯೋಗಗಳನ್ನು ದಾಟಿ ರಾಜ್ಯದ ಜನರನ್ನು ಗಮನ ಸೆಳೆದಿರುವ ಈ ನಾಟಕವನ್ನು ವೀಕ್ಷಿಸಲು ನಾಡಿದ ವಿವಿಧ ಮೂಲೆಗಳ ಜನತೆ ಧಾರವಾಡಕ್ಕೆ ತೆರಳುತ್ತಿದ್ದು, ಜಾತ್ರಾ ಅಂಗವಾಗಿ ದಿ. 7 ರಂದು ಬೈಲಹೊಂಗಲದಲ್ಲಿ ನಡೆಸಲು ನಾಟ್ಯ ಸಂಘದವರನ್ನು ವಿನಂತಿಸಿದ ಪ್ರಯುಕ್ತ ಅಂದು ಒಂದು ನಾಟಕ ಪ್ರದರ್ಶನವನ್ನು ನೀಡಲು ಒಪ್ಪಿದ್ದಾರೆ.  ಈ ನಾಟಕದ ಉದ್ಘಾಟನೆಯ ಸಮಾರಂಭದ ಸಾನಿಧ್ಯವನ್ನು ಶಿವಾನಂದ ಮಠದ ಪೂಜ್ಯ ಮಹಾದೇವ ಮಹಾ ಸ್ವಾಮೀಜಿಯವರು ವಹಿಸಲಿದ್ದಾರೆ.

loading...

LEAVE A REPLY

Please enter your comment!
Please enter your name here