ಚೆನ್ನಮ್ಮ ವಿವಿ ವಿದ್ಯಾರ್ಥಿಗಳ ಏಳ್ಗೆಗೆ ಬದ್ಧ

0
12
loading...

ಬೆಳಗಾವಿ  9- ರಾಣಿಚನ್ನಮ್ಮ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸರ್ವಾಂಗೀಣ ಏಳ್ಗೆಗೆ ಬದ್ಧವಾಗಿದೆ. ವಿದ್ಯಾರ್ಥಿಗಳು ಆಧುನಿಕ ಸಂದರ್ಭದಲ್ಲಿ ಎದುರಿಸು ತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಸಾಂಸ್ಕ್ಕತಿಕ ನೀತಿಯನ್ನು ರೂಪಿಸಲಿದೆ ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾ ಹೆಚ್ ಡಿ ಪಾಟೀಲ  ಅವರು ವಿಶ್ವವಿದ್ಯಾಲಯವು ಏರ್ಪಡಿಸಿದ್ದ ಲಿರಾಣಿಚನ್ನಮ್ಮ ಯುವ ಸಂಭ್ರಮ-2012ಳಿದ ಸಮರೋಪ ಸಮಾರಂಭದಲ್ಲಿ ಹೇಳಿದರು.

ಯುವಜನೋತ್ಸವಗಳು ಕೇವಲ ಪ್ರತಿಭಾವಂತರ ಸ್ವತ್ತಲ್ಲ. ಅವು ಎಲ್ಲಾ ವಿದ್ಯಾರ್ಥಿಗಳ ಸ್ವತ್ತು. ವರ್ತಮಾನದ ಸವಾಲುಗಳನ್ನು ಎದುರಿಸಿ ರಾಷ್ಟ್ತ್ರಮಟ್ಟದ ಸ್ಫರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಜಯಶಾಲಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಇದೇ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕುಲಪತಿಗಳ ಅಭಿನಂದನಾ ಸಂದೇಶವನ್ನು ತಲುಪಿಸಲಾಯಿತು. ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಶ್ರೀ ಸಿದ್ರಾಮೇಶ್ವರ ಉಕ್ಕಲಿ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ತಮ್ಮ ಬೌದ್ದಿಕ  ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ಉತ್ತಮವಾಗಿ ಅಭಿವೃದ್ದಿಯ ಮೆಟ್ಟಿಲುಗಳನ್ನು ವಿದ್ಯಾರ್ಥಿಗಳು ಏರಬೇಕು. ಅವಕಾಶಗಳು ಬಂದಾಗ ಬಿಡದೆ ಹಿಡಿಯುವ ಛಾತಿಯನ್ನು  ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು. ಆಗಲೇ ಅವರ ಶ್ರಮ ಸಾರ್ಥಕ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಎರಡು ದಿನಗಳ ಯುವಜನೋತ್ಸವವು 25ಕ್ಕೂ ಹೆಚ್ಚು ಸ್ಪರ್ಧೆಗಳು ನಡೆದವು. ಬಾಗಲಕೋಟೆಯ ಬಸವೇಶ್ವರ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಬೆಳಗಾವಿಯ ಜೆ ಎಸ್ ಎಸ್ ಕಾಲೇಜು ರನ್ನರ್ ಆಪ್ ಪ್ರಶಸ್ತಿಯನ್ನು ಪಡೆದುಕೊಂಡಿತು ಜಯಶಾಲಿಗಳಾದ ಸ್ಪರ್ಧಾಳುಗಳು ಸಭೆಯಲ್ಲಿ ನೆರೆದಿದ್ದರು. ವೇದಿಕೆಯ ಮೇಲೆ ವಿದ್ಯಾರ್ಥಿ ಪ್ರತಿನಿಧಿಗಳುಉಪಸ್ಥಿತರಿದ್ದರು.

ಸಭೆಯಲ್ಲಿ ಅಧಿಕಾರಿ ವರ್ಗದವರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ.ಡಿ.ಎನ್.ಪಾಟೀಲ ಅವರು ವಂದನೆಗಳನ್ನು ಸಲ್ಲಿಸುವುದರ ಮೂಲಕ ಸಭೆಯು ಸಂಪನ್ನಗೊಂಡಿತು.

loading...

LEAVE A REPLY

Please enter your comment!
Please enter your name here