ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಸಹಕಾರಿ ಸಂಘಗಳು ಶಕ್ತಿ ಪ್ರದರ್ಶಿಸಲಿ

0
163
loading...

ಧಾರವಾಡ : ಧಾರವಾಡ ತಾಲೂಕಿನ ಕೃಷಿ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಅಧ್ಯಕ್ಷರ ಹಾಗೂ ಮುಖ್ಯ ಕಾರ್ಯ ನಿರ್ವಾಹಕರಿಗೆ ಸಂಘಗಳ ಅಭಿವೃದ್ದಿ ಹಾಗೂ ದಕ್ಷತೆ ಕುರಿತು ಕಮ್ಮಟವನ್ನು ಕೆಸಿಸಿ ಬ್ಯಾಂಕು ಬುಧವಾರ ಹಮ್ಮಿಕೊಂಡಿತ್ತು.

ಬ್ಯಾಂಕಿನ ಕೇಂದ್ರ ಕಚೇರಿ ಜರುಗಿದ ಕಮ್ಮಟದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವ ಕುಲಕರ್ಣಿ ಮಾತನಾಡಿ, ಬದಲಾಗುತ್ತಿರುವ ಅರ್ಥ ವ್ಯವಸ್ಥೆಯಲ್ಲಿ ಸಹಕಾರಿ ಸಂಘಗಳು ಪಾಲ್ಗೊಂಡು ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಲು ತಮ್ಮ ಶಕ್ತಿ ಪ್ರದರ್ಶಿಸಬೇಕಿದೆ.

ಸಹಕಾರ ಸಂಘಗಳ ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದ್ದು,ಸಂಘಗಳಿಗೆ ವ್ಯವಹಾರಿಕ ಮತ್ತು ಆಡಳಿತ ಸ್ವಾತಂತ್ರ-್ಯ ಲಭಿಸಿದೆ.ಇಂಥ ಸ್ಪರ್ಧೆಯಲ್ಲಿ  ಉತ್ತಮ ಬ್ಯಾಂಕಿಂಗ ಸೇವೆ ನೀಡಲು ಸಂಘಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಬಸವರಾಜ ಸಿಂಧೂರ ಮತನಾಡಿ,ಇದೀಗ ಕೆ.ಸಿ.ಸಿ.ಬ್ಯಾಂಕಿನಲ್ಲಿ ಕಿರುಹಣಕಾಸು ವಿಭಾಗ (ಮೈಕೋ ಫೈನಾನ್ಸ ವಿಂಗ್)  ಆರಂಭವಾಗಿದ್ದು, ಸ್ವಸಹಾಯ ಗುಂಪುಗಳು ಹಾಗೂ ಜಂಟಿ ಭಾಧ್ಯತಾ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ.ಗ್ರಾಮೀಣ ಮತ್ತು ಪಟ್ಟಣದ ಬಡವರು, ದುಡಿಯುವವರು,ವಿಶೇಷವಾಗಿ ಮಹಿಳೆಯರು ಈ ಗುಂಪಿನ ಸದಸ್ಯರಿದ್ದು ಸ್ವಂತ ಉಳಿತಾಯ ಮಾಡುತ್ತಿದ್ದಾರೆ.ಈ ಸಂದರ್ಭದ ಸದುಪಯೋಗ ಸಂಘ ಮತ್ತು ಸದಸ್ಯರಿಗೆ ಸಿಗುವ ದಿಸೆಯಲ್ಲಿ ಕಾರ್ಯಪ್ರವೃತ್ತಾಗಬೇಕಿದೆ ಎಂದು ಹೇಳಿದರು.

ರಡ್ಡಿ ಸಹಕಾರ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕ ವಿ.ಬಿ.ಕರ್ಲವಾಡ  ಮಾತನಾಡಿ,ವ್ಯವಹಾರಿಕ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ  ಪದಾಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತು ಮತ್ತು ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು.ಗ್ರಾಹಕರ ಅವಶ್ಯಕತೆ ತಕ್ಕ ವೃತ್ತಿಪರ ಸೇವೆಗೆ ಸದಾ ಸಿದ್ಧರಿರಬೇಕಾಗುತ್ತದೆ.ಸ್ಪರ್ಧೆಯಿಂದ ನೈಪುಣ್ಯತೆ ಮತ್ತು ಕಾರ್ಯ ಕ್ಷಮತೆ ವೃದ್ದಿಯಾಗುತ್ತದೆ ಎಂದ ಕರ್ಲವಾಡ,ಸ್ಥಳೀಯ ಸಂಪನ್ಮೂಲದಿಂದ ಸ್ಥಳೀಯ ಬೆಳವಣಿಗೆ  ಸಾಧ್ಯವಾಗುತ್ತದೆ ಎಂದರು.

ಕಮಲಾಪೂರ ಪ್ರಾ.ಕೃ.ಪ.ಸ.ಸಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಂಪಣ್ಣವರ ಮಾತನಾಡಿದರು.ಬ್ಯಾಂಕಿನ ನೋಡಲ್ ಅಧಿಕಾರಿ ಎಸ್.ವಿ.ನಾಯಕ, ಪ್ರಧಾನ ವ್ಯವಸ್ಥಾಪಕ ಯು.ಎನ್.ಪೂಜಾರ, ಬ್ಯಾಂಕಿನ ಅಧಿಕಾರಿಗಳಾದ ಯು.ಎಸ್. ಕುನ್ನಿಬಾವಿ, ವಿ.ಬಿ.ಪಾಟೀಲ ಇತರರು ಉಪಸ್ಥಿತರಿದ್ದರು.   ಹಿರಿಯ ಅಧಿಕಾರಿ ಆರ್.ಬಿ. ಮಾತರಂಗಿಮಠ ಸ್ವಾಗತಿಸಿ ನಿರೂಪಿಸಿದರು.ಗೀರೀಶ ಲಕ್ಕಣ್ಣವರ ವಂದಿಸಿದರು.

loading...

LEAVE A REPLY

Please enter your comment!
Please enter your name here