ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲು ನಿರ್ಧಾರ

0
24
loading...

ಬೀಳಗಿ,31- ಕಾರ್ಖಾನೆಯ ಸುತ್ತ ಮುತ್ತಲ ಗ್ರಾಮಗಳ ಜನರ ಸ್ವಾಸ್ಥವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷ  ಜೆಮ್ ಶೈಕ್ಷಣಿಕ ಮತ್ತು ಕ್ಷೇಮಾಭಿವೃದ್ದಿ ಟ್ರಸ್ಟ್ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜೆಮ್ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಮನಗೌಡ ಹೇ ಪಾಟೀಲ ಹೇಳಿದರು.

ಅವರು ತಾಲೂಕಿನ ಜೆಮ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕುಂದರಗಿ ಹಾಗೂ ಜೆಮ್ ಶೈಕ್ಷಣಿಕ ಮತ್ತು ಕ್ಷೇಮಾಭಿವೃದ್ದಿ ಟ್ರಸ್ಟ್ನ ಸಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಕಾರ್ಖಾನೆ ಆಡಳಿತ ಮಂಡಳಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಸಹಾಯ ಸಹಕಾರ ನೀಡುತ್ತಿದೆ ಎಂದು ಅವರು ಹೇಳಿದರು.ಶಿಬಿರದಲ್ಲಿ ತಜ್ಞ ವೈದ್ಯರುಗಳಾದ  ಡಾ. ಲಕ್ಷ್ಮೀ ವಿ ಸೊರಗಾವಿ,  ಸ್ತ್ತ್ರೀರೋಗ ತಜ್ಞ ಡಾ. ಕೃಷ್ಣವರ್ಧನ, ಜನರಲ್ ಫಿಜಿಸಿಯನ್ ಡಾ ಬೋಕಿ, ಡಾ. ಶಿರಬೂರ, ಡಾ. ಮುರಳಿಧರ ಪಾಟೀಲ, ಡಾ. ರಮೇಶ ಪೋಳ, ಡಾ. ಶೃತಿ ಸೋನವಾಲಕರ, ಡಾ. ಪ್ರದೀಪ ಸೋನವಾಲಕರ ಹಾಗೂ ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್ ಜಿ ವಸ್ತ್ತ್ರದ ಸುಮಾರು 200ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದರು.

ಶಿಬಿರವನ್ನು ಡಾ. ವಿ ಆರ್ ಸೊರಗಾವಿ ಉದ್ಘಾಟಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಸಿ ತಿರುವೆಂಗಡಮ್, ಡಿಜಿಎಂ ರಾಜಶೇಖರ, ಹಣಕಾಸು ವ್ಯವಸ್ಥಾಪಕ ಶೆಲ್ವರಾಜ, ಎಜಿಎಂ ಆರ್ ಬಿ ಬಿರಾದಾರ ವೇದಿಕೆ ಮೇಲಿದ್ದರು. ಪ್ರಕಾಶ ಕೋಳಿ ನಿರೂಪಿಸಿದರು. ಡಾ. ಲಕ್ಷ್ಮೀಕಾಂತ ಶೆಟ್ಟಿ ಸ್ವಾಗತಿಸಿ,  ವಂದಿಸಿದರು.

loading...

LEAVE A REPLY

Please enter your comment!
Please enter your name here