ಮನಸ್ಸು ದೇಗುಲದಂತೆ ಪರಿಶುದ್ಧವಾಗಿರಲಿ

0
14
loading...

Manssu Deguluviddanteಘಟಪ್ರಭಾ 18: ದೇಗುಲಗಳು ಎಷ್ಟು ಪರಿಶುದ್ದ ಇರುತ್ತವೆಯೋ ಅಷ್ಟೇ ಪರಿಶುದ್ದ ಮನಸ್ಸು ಮನುಷ್ಯನಲ್ಲಿರಬೇಕು. ಎಂದು ಹುಣಶ್ಯಾಳದ ಶ್ರೀ ನಿಜಗುಣ ದೇವರು ಹೇಳಿದರು.

ಅವರು ಸಮೀಪದ ಬಳೋಬಾಳ ಗ್ರಾಮದಲ್ಲಿ ಸೋಮವಾರದಂದು ಜರುಗಿದ ಘಟಪ್ರಭಾ ನದಿ ತೀರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಧಾರ್ಮಿಕತೆಯಿಂದ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ಅಧ್ಯಾತ್ಮದ ಕಡೆ ಜನರು ಹೆಚ್ಚಿನ ಒಲವು ನೀಡಿ ಪುಣ್ಯವಂತರಾಗಬೇಕು.ಪುಣ್ಯ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಜೀವನವು ಸುಖಕರವಾಗುತ್ತಿದೆ ಎಂದರು.

ಘೋಡಗೇರಿಯ ಮಲ್ಲಯ್ಯ ಸ್ವಾಮಿಜಿಗಳು ಮಾತನಾಡಿ ದೇವಾಲಯಗಳನ್ನು ಸ್ಥಾಪಿಸುವ ಮೂಲಕ ಜನರಲ್ಲಿ ದೈವಭಕ್ತಿ ಹೆಚ್ಚಾಗುತ್ತದೆ. ಈ ಗ್ರಾಮವು ಮಹಾತ್ಮರ ಆಗಮನದಿಂದ ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದರು.

ಮಹಾಲಿಂಗಪೂರದ ನಿರಂಜನ ಜಗದ್ಗುರು ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಬಸಳಿಗುಂದಿಯ ಸದಾನಂದ ಸ್ವಾಮಿಜಿ,ಬೈಲಹೊಂಗಲದ ಮಹಾದೇವ ಸರಸ್ವತಿ ಸ್ವಾಮಿಜಿ,ಚಿಪ್ಪಲಕಟ್ಟಿಯ ಕಲ್ಲಯ್ಯ ಸ್ವಾಮಿಜಿ,ಕರಗುಪ್ಪಿಯ ಅರ್ಜುನ ಸ್ವಾಮಿಜಿ ವೇದಿಕೆ ಮೇಲೆ ಇದ್ದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಕಳಸನ್ನವರ, ಪ್ರಧಾನಿ ಕಳಸನ್ನವರ, ಶ್ರೀಶೈಲ ಬೆಳವಿ, ಶಿವಾನಂದ ಹಿಡಕಲ್, ಅರವಿಂದ ನೀರಲಗಿ, ರಾಘು ದತ್ತದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸದಾಶಿವ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.

 

 

loading...

LEAVE A REPLY

Please enter your comment!
Please enter your name here