ಮೇಕೆಗಳಿಗೆ ಜಂತುನಾಶಕ ಓಷಧಿ ವಿತರಣೆ

0
27
loading...

ಗೋಕಾಕ 9 – ತಾಲೂಕಿನ ಬೆಣಚಿನ ಮರಡಿ ಗ್ರಾಮದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಬೆಂಗಳೂರು ಹಾಗೂ ಪಶು ಪಾಲನಾ ಇಲಾಖೆ ಗೋಕಾಕ ಇವರ ಸಂಯುಕ್ತಾಶ್ರಯ ದಲ್ಲಿ ಕುರಿ ಮತ್ತು ಮೇಕೆಗಳಿಗೆ ಉಚಿತ ವಾಗಿ ಜಂತು  ನಾಶಕ ಓಷಧಿಯನ್ನು ವಿತರಿಸಲಾಯಿತು.

ಈ ಶಿಬಿರದಲ್ಲಿ ತಜ್ಞ ವೈದ್ಯಾಧಿಕಾರಿಗಳಾದ ಡಾ.ಶಶಿಕಾಂತ ಕೌಜಲಗಿ, ಡಾ,ಮೋಹನ ಕಮತ ಭಾಗವಹಿಸಿ ವಿವಿಧ ತರಹದ ರೋಗಗಳು ಹಾಗೂ ಓಷಧಗಳ ಬಗ್ಗೆ ಕುರಿಗಾರರಿಗೆ ಮಾಹಿತಿ ನೀಡಿದರು.

ಶಿಬಿರದಲ್ಲಿ ಒಟ್ಟು 22 ಸಾವಿರ ಕುರಿಗಳಿಗೆ ಉಚಿತವಾಗಿ ಜಂತುನಾಶಕ  ಓಷಧಿಗಳನ್ನು ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಲಕ್ಕಣ್ಣ ಮಾಳಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಉಪಾಧ್ಯಕ್ಷ ಟಿ.ಆರ್.ಕಾಗಲ್, ತಾ.ಪಂ.ಸದಸ್ಯ ವಿಠ್ಠಲ ಗುಂಡಿ ಉಪಸ್ಥಿತರಿದ್ದರು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಬಿ.ವಾಯ್.ಕೊರವಿ, ವಿಠ್ಠಲ ಗೌಡಪ್ಪಗೋಳ, ಬಸವರಾಜ ಗೌಡಪ್ಪಗೋಳ, ನಾಗಪ್ಪ ಕೌಜಲಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನಾಗಪ್ಪ ಕೌಜಲಗಿ ನಿರೂಪಿಸಿ, ಕೊನೆಗೆ ವಂದಿಸಿದರು.

 

loading...

LEAVE A REPLY

Please enter your comment!
Please enter your name here